Showing posts with label ಶ್ರೀನಾಥ ದೂತ ಸಿರಿವಂತನೀತ ಶ್ರೀಮಂತ ಸಂತ ಶ್ರೀ ಪೂರ್ಣಬೋಧ sharadhipuresha. Show all posts
Showing posts with label ಶ್ರೀನಾಥ ದೂತ ಸಿರಿವಂತನೀತ ಶ್ರೀಮಂತ ಸಂತ ಶ್ರೀ ಪೂರ್ಣಬೋಧ sharadhipuresha. Show all posts

Monday, 6 September 2021

ಶ್ರೀನಾಥ ದೂತ ಸಿರಿವಂತನೀತ ಶ್ರೀಮಂತ ಸಂತ ಶ್ರೀ ಪೂರ್ಣಬೋಧ ankita sharadhipuresha

 ankita ಶರಧಿಪುರೇಶ/ವಾರಿಧೀಶ

ರಾಗ: [ಕೇದಾರಗೌಳ] ತಾಳ: [ಆದಿ]


ಶ್ರೀನಾಥ ದೂತ ಸಿರಿವಂತನೀತ ಶ್ರೀಮಂತ ಸಂತ ಶ್ರೀ

ಪೂರ್ಣಬೋಧ ಸ್ತೋತ್ರ ಫಲದಾತ ಮಂತ್ರಾಲಯದಿ ನಿಂತ 


ಬೃಂದಾವನದಿ ವ್ಯಾಪ್ತ ಭುವಿಗೆ ಚಲುವ ಚಂದ್ರಾಮನೀತ

ಸಂದರ್ಶನಕೆ ಮಾತ್ರ ನರನ ಸಕಲ ಪಾಪರಾಶಿ ನಾಶ  1

ಶ್ರೀಹರಿಯ ಪ್ರೀತಿಪಾತ್ರ ಹರಿದಾಸ ಬಂಧು ಭಾಗ್ಯವಂತ

ಅಹರ್‍ನಿಶೆ ಅತಿಥಿ ಅಭ್ಯಾಗತ ಸೇವಿತ ಅವ್ಯಾಹತ  2

ಸಕಲಕುಲಕಾಕರ್ಷಿತ ಸತತ ಭಕುತಿ ಮಾರ್ಗಕೊಲಿವಾತ

ಅಖಿಲಗುಣಗಣಿ ಖ್ಯಾತ ಪ್ರಖ್ಯಾತ ಮಾನಿತ ಮಂಚಾಲಿತಾತ  3

ಸತ್ಕುಲದ ಸಂಜಾತ ಹೃತ್ಕಮಲ ವಿಕಸಿತ ವಿಖ್ಯಾತ ವಿನೂತ

ಉತ್ಕಲೆಯ ಊರ್ಜಿತ ಉಜ್ವಲ ಭವಿಷ್ಯದ ಪ್ರಜ್ವಲಿತ ಪ್ರಕಾಶಿತ  4

ನಿತ್ಯನಿರ್ಮಲ ಚಿತ್ತ ಸತ್ಯಧರ್ಮರತ ಸತ್ಕಾರ್ಯ ಕರ್ಮಠ

ಅತ್ಯಪೂರ್ವ ಫಲಪ್ರಾಪ್ತ ಪ್ರತ್ಯಕ್ಷನಿಂತ ಕ್ಷೇತ್ರ ವಾರಿಧೀಶರ ಸತ್ಪಾತ್ರ  5

***