Monday, 6 September 2021

ಶ್ರೀನಾಥ ದೂತ ಸಿರಿವಂತನೀತ ಶ್ರೀಮಂತ ಸಂತ ಶ್ರೀ ಪೂರ್ಣಬೋಧ ankita sharadhipuresha

 ankita ಶರಧಿಪುರೇಶ/ವಾರಿಧೀಶ

ರಾಗ: [ಕೇದಾರಗೌಳ] ತಾಳ: [ಆದಿ]


ಶ್ರೀನಾಥ ದೂತ ಸಿರಿವಂತನೀತ ಶ್ರೀಮಂತ ಸಂತ ಶ್ರೀ

ಪೂರ್ಣಬೋಧ ಸ್ತೋತ್ರ ಫಲದಾತ ಮಂತ್ರಾಲಯದಿ ನಿಂತ 


ಬೃಂದಾವನದಿ ವ್ಯಾಪ್ತ ಭುವಿಗೆ ಚಲುವ ಚಂದ್ರಾಮನೀತ

ಸಂದರ್ಶನಕೆ ಮಾತ್ರ ನರನ ಸಕಲ ಪಾಪರಾಶಿ ನಾಶ  1

ಶ್ರೀಹರಿಯ ಪ್ರೀತಿಪಾತ್ರ ಹರಿದಾಸ ಬಂಧು ಭಾಗ್ಯವಂತ

ಅಹರ್‍ನಿಶೆ ಅತಿಥಿ ಅಭ್ಯಾಗತ ಸೇವಿತ ಅವ್ಯಾಹತ  2

ಸಕಲಕುಲಕಾಕರ್ಷಿತ ಸತತ ಭಕುತಿ ಮಾರ್ಗಕೊಲಿವಾತ

ಅಖಿಲಗುಣಗಣಿ ಖ್ಯಾತ ಪ್ರಖ್ಯಾತ ಮಾನಿತ ಮಂಚಾಲಿತಾತ  3

ಸತ್ಕುಲದ ಸಂಜಾತ ಹೃತ್ಕಮಲ ವಿಕಸಿತ ವಿಖ್ಯಾತ ವಿನೂತ

ಉತ್ಕಲೆಯ ಊರ್ಜಿತ ಉಜ್ವಲ ಭವಿಷ್ಯದ ಪ್ರಜ್ವಲಿತ ಪ್ರಕಾಶಿತ  4

ನಿತ್ಯನಿರ್ಮಲ ಚಿತ್ತ ಸತ್ಯಧರ್ಮರತ ಸತ್ಕಾರ್ಯ ಕರ್ಮಠ

ಅತ್ಯಪೂರ್ವ ಫಲಪ್ರಾಪ್ತ ಪ್ರತ್ಯಕ್ಷನಿಂತ ಕ್ಷೇತ್ರ ವಾರಿಧೀಶರ ಸತ್ಪಾತ್ರ  5

***


No comments:

Post a Comment