Monday, 6 September 2021

ಬರಿಯ ಒಣ ಮಾತಲ್ಲವಿದು ಶುದ್ಧಸಾಧನ ankita sharadhipuresha

 ankita ಶರಧಿಪುರೇಶ/ವಾರಿಧೀಶ

ರಾಗ: [ಸಾರಂಗ] ತಾಳ: [ಆದಿ]


ಬರಿಯ ಒಣ ಮಾತಲ್ಲವಿದು ಶುದ್ಧಸಾಧನ

ಗುರುಸಾರ್ವಭೌಮನ ದಿವ್ಯ ತಪೋಧನ 


ಕಾರ್ಯಕಿಳಿಯುವ ನವ್ಯ ಪರಿಮಳ ಬೋಧನ

ನೂತನಕತಿನೂತನ ಕೃಪೆ ಗುರುದೇವನ  1

ಅತಿ ಪತಿತರನುಗೈವುದು ಪಾವನ

ಗತಜೀವಿಗಳಿಗೀವುದು ನವ ಚೇತನ  2

ತಾತ ಶರಧಿಪುರೇಶನ ಮಾತೆಲ್ಲಗೀತರತುನ 

ಸಾರ್ಥಖ್ಯಗೊಳಿಪುದು ಸಾಧಕರ ಜೀವನ  3

***


No comments:

Post a Comment