Showing posts with label ಹನುಮ ಭೀಮಾನಂದ ಮುನಿವರೇಣ್ಯ jagannatha vittala. Show all posts
Showing posts with label ಹನುಮ ಭೀಮಾನಂದ ಮುನಿವರೇಣ್ಯ jagannatha vittala. Show all posts

Saturday, 14 December 2019

ಹನುಮ ಭೀಮಾನಂದ ಮುನಿವರೇಣ್ಯ ankita jagannatha vittala

ಜಗನ್ನಾಥದಾಸರು
ಹನುಮ ಭೀಮಾನಂದ ಮುನಿವರೇಣ್ಯ
ತಾಪ ಕಳೆದನುದಿನದಿ ಪಾಲಿಪುದು ಪ

ಪ್ರಾಣಪಂಚಕ ಸುಪರ್ವಾಣ ಗುರುವರ ಜಗ
ತ್ರಾಣ ತ್ರಯೀಮಯಿ ಪುರಾಣವೇದ್ಯಾ
ಮಾಣದೆನ್ನಯ ಹೃದಯ ತಾಣದೊಳಗರಿ ಶಂಖ
ಪಾಣಿರೂಪನ ಬಿಡದೆ ಕಾಣಿಸು ಕೃಪಾಸಿಂಧು 1

ಸೂತ್ರನಾಮಕನೆ ತಾಪತ್ರಯಗಳಿಂದ್ಹಗಲು
ರಾತ್ರಿಯಲಿ ಬಳುಲುತಿಹ ನಿತ್ರಾಣನ
ಗಾತ್ರದೊಳು ನೆಲೆಸಿ ಸರ್ವತ್ರದಲಿ ಸುಖವಿತ್ತು
ಶತ್ರುತಾಪಕನಾಗು ಸ್ತೋತ್ರವನೆ ಕೈಕೊಂಡು 2

ಅಸುನಾಥ ಶರಣಂಗೆ ವಶವಾಗು ಅನುದಿನದಿ
ಅಸುರಭಂಜನ e್ಞÁನ ಸುಸುಖ್ಮಾತನೇ
ಬಿಸರುಹಾಂಬಕ ಜಗನ್ನಾಥವಿಠಲನ ಕೈ
ವಶಮಾಡಿ ಕೊಡುತಿಪ್ಪ ಶ್ವಸನಾವತಾರಿ3
********