Showing posts with label ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ purandara vittala SAKALA GRAHABALA NEENE SARASIJAKSHA. Show all posts
Showing posts with label ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ purandara vittala SAKALA GRAHABALA NEENE SARASIJAKSHA. Show all posts

Wednesday, 15 December 2021

ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ purandara vittala SAKALA GRAHABALA NEENE SARASIJAKSHA

ರಾಗ ಅಠಾಣ   ತಾಳ ಖಂಡ ಛಾಪು 

raga athana  tala khandachapur




ಸಕಲ ಗ್ರಹಬಲ ನೀನೆ ಸರಸಿಜಾಕ್ಷಾ ll ಪ ll

ನಿಖಿಲ ರಕ್ಷಕ ನೀನೆ ವಿಶ್ವವ್ಯಾಪಕನೆ ll ಅ ಪ ll

ರವಿ ಚಂದ್ರ ಬುಧನೀನೆ ರಾಹು ಕೇತುವು ನೀನೆ l
ಕವಿ ಗುರು ಶನಿಯು ಮಂಗಳನು ನೀನೆ ll
ದಿವಾ ರಾತ್ರಿಯು ನೀನೆ l ನವ ವಿಧಾನವು ನೀನೆ l
ಭವ ರೋಗ ಹರನೀನೆ ಭೇಷಜನು ನೀನೆ ll 1 ll

ಪಕ್ಷಮಾಸವು ನೀನೆ l ಪರ್ವಕಾಲವು ನೀನೆ l
ನಕ್ಷತ್ರ ಯೋಗ ತಿಥಿ ಕರಣ ನೀನೆ l
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ l
ಪಕ್ಷಿವಾಹನ ದೀನ ರಕ್ಷಕನು ನೀನೆ ll 2 ll

ಋತುವತ್ಸರವು ನೀನೆ l ಮತ್ತೆ ಯುಗಾದಿಯು ನೀನೆ l
ಕ್ರತು ಹೋಮ ಯಜ್ಞ ಸದ್ಗತಿಯು ನೀನೆ l
ಜಿತವಾಗಿ ಎನ್ನೊಡೆಯ ಪುರಂದರವಿಟ್ಠಲನೆ l
ಶ್ರುತಿಗೆ ಸಿಲುಕದ ಅಪ್ರತಿಮ ಮಹಿಮ ನೀನೆ ll 3 ll]
*****

ರಾಗ ಅಠಾಣಾ ಖಂಡ ಛಾಪು ತಾಳ
ರಾಗ ಕಾಂಭೋಜ , ಅಟತಾಳ (raga, taala may differ in audio)

sakala graha bala neenE sarasijAkSha ||
nikhila rakShaka neenE vishwavyApakanE |p|

ravi chaMdra budha neenE rAhu kEtuvu neenE
kavi guru shaniyu maMgaLanu neenE
divarAtriyu neenE nava vidhAnavu neenE
bhavarOgahara neenE bhEShajanu neenE ||1||

pakshamAsavu neenE parva kAlavu neenE
nakshatra yOga tithi karaNagaLu neenE
akshayaveMdu draupadiya mAnava kAyda
pakShivAhana deena rakShakanu neenE ||2||

Rutu vatsaravu neenE vrata yugAdiyu neenE
kratu hOma yaj~jna sadgatiyu neenE
jitavAgi yennoDeya puraMdara viThalane
stutige silukada mahAmahimanu neenE ||3||
***

Sakala graha bala nine sarasijaksha nikila rakshaka nine visvavyapakane ||pa||

Ravichandra budha nine rahu ketuvu nine
Kavi guruvu Saniyu mamgalanu nine
Diva ratriyu nine nava vidhanavu nine
Bavaroga hara nine beshajanu nine ||1||

Pakshamasavu nine parva kalavu nine
Nakshatra yoga tithi karanagalu nine
Akshayavendu draupadiya manava kayda
Pakshivahana dinarakshakanu nine ||2||

Rutuvatsaravu nine vrata yugadiyu nine
Kratuvu homa yaj~ja sadgatiyu nine
Jitavagi ennodeya purandara vithalane
Stutige silukada mahamahimanu nine ||3||
***

pallavi

sakala graha bala nInE sarasijAkSa nikhila rakSaka nInE vishva vyApaghanE

anupallavi

ravicandra budha nInE rAhu kEtuvu nInE kavi guru shaniyu mangaLamu nInE

caraNam 1

diva rAtriyu nInE nava dhAnyavu nInE bhavarOga hara nInE bhESajanu nInE
pakSa mAsavu nInE parva kAlavu nInE nakSatra yOga tithi karaNagaLu nInE

caraNam 2

rutu vatsaravu brduvyugAdiyu nInE kratu hOma sadbhaktiyu nInEMbr< nutanAgi ennoDeya purandara viThalanE shrutigE silukada apratima mahima nInE
***


ಸಕಲ ಗ್ರಹಬಲ ನೀನೇ ಸರಸಿಜಾಕ್ಷ
ನಿಖಿಳರಕ್ಷಕ ನೀನೇ ವಿಶ್ವವ್ಯಾಪಕನೇ ||

ರವಿಚಂದ್ರ ಬುಧ ನೀನೇ ರಾಹು ಕೇತುವು ನೀನೇ
ಕವಿ ಗುರುವು ಶನಿಯು ಮಂಗಳನು ನೀನೇ
ದಿವ ರಾತ್ರಿಯು ನೀನೇ ನವ ವಿಧಾನವು ನೀನೇ
ಭವರೋಗ ಹರ ನೀನೇ ಭೇಷಜನು ನೀನೇ ||

ಪಕ್ಷಮಾಸವು ನೀನೇ ಪರ್ವ ಕಾಲವು ನೀನೇ
ನಕ್ಷತ್ರ ಯೋಗ ತಿಥಿ ಕರಣಗಳು ನೀನೇ
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ ||

ಋತುವತ್ಸರವು ನೀನೆ ಮತ್ತೆ ಯುಗಾದಿಯು ನೀನೇ
ಕ್ರತುವು ಹೋಮ ಯಜ್ಞ ಸದ್ಗತಿಯು ನೀನೇ
ಜಿತವಾಗಿ ಎನ್ನೊಡೆಯ ಪುರಂದರವಿಟ್ಠಲನೇ

ಶ್ರುತಿಗೇ ಸಿಲುಕದ ಮಹಾಮಹಿಮನು ನೀನೇ ||
**********


ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ
ನಿಖಿಲ ರಕ್ಷಕ ನೀನೆ ವಿಶ್ವವ್ಯಾಪಕನೇ ||ಪ||

ರವಿಚಂದ್ರ ಬುಧ ನೀನೇ ರಾಹು ಕೇತುವು ನೀನೇ
ಕವಿ ಗುರುವು ಶನಿಯು ಮಂಗಳನು ನೀನೇ
ದಿನ ರಾತ್ರಿಯು ನೀನೇ ನವ ವಿಧಾನವು ನೀನೇ
ಭವರೋಗ ಹರ ನೀನೇ ಭೇಷಜನು ನೀನೇ ||೧||

ಪಕ್ಷಮಾಸವು ನೀನೇ ಪರ್ವ ಕಾಲವು ನೀನೇ
ನಕ್ಷತ್ರ ಯೋಗ ತಿಥಿ ಕರಣ ನೀನೇ
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ ||೨||

ಋತುವತ್ಸರವು ನೀನೆ ವ್ರತ ಯುಗಾದಿಯು ನೀನೇ
ಕ್ರತುವು ಹೋಮ ಯಜ್ಞ ಸದ್ಗತಿಯು ನೀನೇ
ಜತವಾಗಿ ಎನ್ನೊಡೆಯ ಪುರಂದರ ವಿಠಲನೆ
ಶೃತಿಗೆ ಸಿಲುಕಿದ ಮಹಾಮಹಿಮ ನೀನೇ ||೩||
****

rendered by srI Ananda rAo srIrangam
to aid learning the dAsara pada

Lyrics:

sakala graha bala nInE sarasijAkSa
nikhila rakSaka nInE vishva vyApakanE ||

ravicandra budha nInE rAhu kEtuvu nInE
kavi guru shaniyu mangaLanu nInE
diva rAtriyu nInE nava vidAnavu nInE
bhavarOga hara nInE bhEshajanu nInE || sakala... ||

paksha mAsavu nInE parva kAlavu nInE
nakSatra yOga tithi karaNa nInE
akSayavendu draupadiya mAnava kAida
pakSivAhana dIna rakSakanu nInE || sakala... ||

rtu vatsaravu nInE vratayugAdiyu nInE
kratu hOma yaGYa sadgatiyu nInE
jitavAgi yennoDeya purandara viThalanE
stutigE silukada apratima mahima nInE || sakala... ||
***
explanation by Dr Vijayendra Desai
ಸಕಲ ಗ್ರಹಬಲ ನೀನೇ ಸರಸಿಜಾಕ್ಷ,--
ದಾಸರ ಮುತ್ತಿನ ಮಾತು. ಬತ್ತದ ಸೆಲೆ.
ಬಗೆದಷ್ಟು ಅರ್ಥಗಳು. ರಸವತ್ತಾದವುಗಳು.
ಈ ಒಂದು ಪಲ್ಲವಿಯಲ್ಲಿ ಇಡೀ ಕೀರ್ತನೆಯ ಅರ್ಥ ಹುಡುಕುವ ಪ್ರಯತ್ನ.
ಏನು ಹೇಳಿದರು?
1) ನವಗ್ರಹಗಳು ನಮ್ಮನ್ನು ಆಳುವವು. ಶನಿ,ಮಂಗಳ, ರಾಹು ಕೇತು ಕಾಡುವದು, ಗುರು ಶುಕ್ರ ಒಲಿಯುವದು ಎಲ್ಲಿಯ ಬಲ? 
ನೀನು ಕೊಟ್ಟ ಬಲ. ತಥ್ಯ ನೀ ಕೊಟ್ಟರೆ ಉಂಟು ಇಲ್ಲದಿರೆ ಇಲ್ಲ. ಅದ್ದರಿಂದ ಸಕಲ ಗ್ರಹಬಲ ನಿನ್ನ ಬಲವಯ್ಯಾ.
ಗ್ರಹಗಳ ಕಾಟ ಬೇಡ. ಬಲ ಬೇಕು.ಬೇಕಲ್ವೇ?
ಹರಿಯಲ್ಲಿ ನವವಿಧ ಭಕ್ತಿ ಮಾಡಿ. ನವಗ್ರಹಗಳ ಬಲು ಬಲ ಲಭ್ಯ.
2)ಎಲ್ಲ ಪರಮಾತ್ಮನ ಸ್ತುತ್ಯರ್ಥ ನೋಡೋಣ.

ನಿಖಿಳ ರಕ್ಷಕ -
ಗ್ರಹ ಎಂದರೆ ಮನೆ. ನಮಗೆ ಮನೆ ಏನು ಮಾಡುತ್ತದೆ? 
ಚಳಿ, ಮಳಿ, ಗಾಳಿ  ಬಿಸಿಲು, ಆಪತ್ತುಗಳಿಂದ ರಕ್ಷಣೆ.
ಯಾವದು ನಮಗೆ ಆಶ್ರಯ ಕೊಟ್ಟು ರಕ್ಷಿಸುತ್ತದೆಯೋ ಅದುವೇ ಗ್ರಹ. 
ಆಪತ್ತುಗಳಿಂದ ರಕ್ಷಿಸುವವ ನೀನು. 
ಅನವು ಮಾಡಿ ಕೊಡುವವ ನೀನು. ಬಲವಂತ ರಕ್ಷಕ ಸ್ವಾಮಿ ನೀನು.
ವಿಶ್ವ ವ್ಯಾಪಕ
ಸಕಲ ಅಂದರೆ ಸರ್ವತ್ರ. ಗ್ರಹ ಅಂದರೆ ಆಶ್ರಯ.  ಸರ್ವತ್ರ ಆಶ್ರಯ ಅರ್ಥಾತ್ 

ವಿಶ್ವ ವ್ಯಾಪಕ‌ ನೀನು.
3) ಗ್ರಹದಲ್ಲಿ ಸಕಲ ರೀತಿಯ ರಕ್ಷಕ ನೀನು.

4) ಸಕಲ ಗ್ರಹಗಳಲ್ಲಿ ಸಕಲ ರಕ್ಷಕನೂ ನೀನೇ.
ಗ್ರಹ ಎಂದರೆ ಸ್ಥಳ. ಕ್ಷೇತ್ರ.  ಎಲ್ಲ ಸ್ಥಳಗಳಲ್ಲಿ‌ - ಸರ್ವತ್ರ ವ್ಯಾಪ್ತ.
ಹಿಂದೆ ಮುಂದೆ ಎಡ ಬಲದಿ ಒಳ ಹೊರಗೆ ವಿಶ್ವವ್ಯಾಪಕ ಇಂದಿರೇಶನು ತನ್ನವರ ಕಾವನು ಎಂದೆಂದಿಗೂ.
5) ದಿವರಾತ್ರಿನೀನೇ*
ದಿವ - ಹಗಲು - ಪ್ರಕಾಶ -ಜ್ಞಾನ, ಸುಖದ ಪ್ರತೀಕ.
ದಿವ ಆರಂಭ - ಸೃಷ್ಟಿ.
ರಾತ್ರಿ -ಕತ್ತಲು- ಅಜ್ಞಾನ, ದುಃಖದ ಸಂಕೇತ.-
ರಾತ್ರಿ - ಮುಕ್ತಾಯ - ಪ್ರಳಯದ ಪ್ರತೀಕ
ಸಕಲ ರಕ್ಷಣೆ ಅಂದರೆ - ಜೀವರಿಗೆ ಸೃಷ್ಟಿ ಸ್ಥಿತಿ ಲಯ, ಜ್ಞಾನ, ಅಜ್ಞಾನ, ಬಂಧ ಮೋಕ್ಷಾದಿಗಳ ಕೊಟ್ಟು ಉದ್ಧರಿಸುವದು. ನಿಖಿಳ ರಕ್ಷಕ.
ಪಕ್ಷಿವಾಹನ - ದಿವರಾತ್ರಿ
ದಿವ,ರಾತ್ರಿ, ಮಾಸ,ಖುತು,ವತ್ಸರ ಎಲ್ಲ ಕಾಲ ಸೂಚಕ.
ಪಕ್ಷಿ - ಕಾಲದ ಸಂಕೇತ. ಯಾಕೆ? 
ಹಗಲು,ರಾತ್ರಿ 
ಶುಕ್ಲ, ಕೃಷ್ಣ ಪಕ್ಷಗಳು
ಉತ್ತರ, ದಕ್ಷಿಣ ಅಯನಗಳು
ಇವು ಎರಡು ರೆಕ್ಕೆಗಳು. 
ಪಕ್ಷಿ ಹಾರುತ್ತದೆ. ಕಾಲವೂ ಅಷ್ಟೇ. ಹಾರಿಹೋಗುತ್ತದೆ. 
ಇಂತು ಕಾಲ ಸೂಚಕ ಪಕ್ಷಿ. ಈ ಪಕ್ಷಿ ಅವನ ವಾಹನ. ಅಧೀನ.  ಇಂತು
ಪಕ್ಷಿ ವಾಹನ = ಕಾಲ ನಿಯಾಮಕ, ಕಾಲಾತೀತ, ಕಾಲ ಪ್ರವರ್ತಕ, ಕಾಲನಾಮಕ ಪರಮಾತ್ಮ.
ಪಕ್ಷ ಮಾಸ, ಪರ್ವಕಾಲ ನೀನೇ, ನಕ್ಷತ್ರ ತಿಥಿ ಕರಣ ಯೋಗ ಪಂಚಾಂಗ
ಈ ಸಕಲ ಗ್ರಹಬಲ ನೀನೇ.
ಮಂಗಳಕೆ ಮಂಗಳ ನೀನು. ಪಕ್ಷ ಕಾಲ,ಪಕ್ವ, ಅಪಕ್ವ ಕಾಲ, ಶುಭಾಶುಭಕಾಲಗಳು ನಿನ್ನ ಧೀನ. ಸರ್ವನಿಯಾಮಕ ನೀನಲ್ಲವೇ!
ದ್ರೌಪದಿಯ ರಕ್ಷಿಸಿದೆ. ಕಾಲ ನೋಡಿದೆಯ? ಸಮಯಾಸಮಯ ಉಂಟೇಸಮತೀತ ನಿನಗೆ?
6) ಇನ್ನು -

ಸಕಲ - 
ಸ=ಅಂದರೆ ಏಕಾಕ್ಷರ ವಾಚ್ಯ ಸರ್ವೋತ್ತಮ ವಿಷ್ಣು.
ಕ = ಎಂದರೆ ಬ್ರಹ್ಮ. ಲಕ್ಷಣತಯಾ ಬ್ರಹ್ಮ, ರುದ್ರಾದಿ ಸಕಲ ವಂದ್ಯ ಸ - ವಿಷ್ಣು
ಲ - ಲಯ ಕರ್ತಾ 
ಲಕ್ಷಣತಯಾ ಸೃಷ್ಟಿ ಸ್ಥಿತಿ ಲಯ ಜ್ಞಾನ ಅಜ್ಞಾನ ಬಂಧ ಮೋಕ್ಷಾದಿ ಅಷ್ಟ
ಕರ್ತತ್ವ ಉಳ್ಳ ಪ್ರಭು ವಿಷ್ಣು.
ಒಟ್ಟು ಬ್ರಹ್ಮಾದಿ ಸಕಲ ವಂದ್ಯ, ಸೃಷ್ಟ್ಯಾದಿ ಅಷ್ಟಕರ್ತತ್ವ ಪ್ರಭು. ನಿಖಿಲ ರಕ್ಷಕ ಶ್ರೀ ಹರಿಯೇ ನಿನಗೆ ವಂದನೆ.

7) ಗ್ರಹ - ಗ+ ರ್ +ಹ

ಗ = ಗತಿ - ಜ್ಞಾನ

ರ = ರತಿ - ಆನಂದಿಸುವವನು
ಅರ್ಥ -  ಜ್ಞಾನದಲ್ಲಿ ಆನಂದಿತ -ಜ್ಞಾನಾಂದಮಯ

ಹ - ಹರಣೇ- ಎಲ್ಲರ ಪಾಪ ಪರಿಹರಿಸುವವ
ಹರಿ.
= ಸಚ್ಚಿದಾನಂದಮಯ, ಪಾಪ ಪರಿಹಾರಕ ಪರಮಾತ್ಮ. ಇಂಥ ಸ್ವಾಮಿ ನಿನಗೆ ಸಾಸಿರ ನಮನಗಳು.
ಬಲ = 
ಬ = ಬಲ, ಜ್ಞಾನ ಘನ ಪರಮಾತ್ಮ
ಲ = ಲಾವಣ್ಯ ಮೂರ್ತಿ ಪರಮಾತ್ಮ.ಇಂಥ ಜಗದೊಡೆಯನೇ ನಮನಗಳು.
ಸರಸಿಜಾಕ್ಷ = ಕಮಲನಯನ. 
ಕಮಲೆಯ ಒಡೆಯ. ಕಮಲಾಪತಿ. ಕಮಲನಾಭ.
ಒಟ್ಟು ಅರವಿಂದಾಕ್ಷ ಪರಮಾತ್ಮ.
ಪರಮಾತ್ಮ ಕಮಲಾಕ್ಷ. ಕಮಲಮುಖ, ಪಾದಕಮಲ ಹೀಗೇ - 
ದೇವರಿಗೆ ಕಮಲಪುಷ್ಪದ ಹೋಲಿಕೆ ಹೆಚ್ಚು ಏಕೆ?
ಕಮಲ, ಕಮಲಪತ್ರ ನೀರಿನಲ್ಲಿ ಬೆಳೆಯುತ್ತದೆ.
ಆದರೆ ನೀರಿನ ಅಂಟು ನಂಟು ಇಲ್ಲ.
ಪರಮಾತ್ಮ ಹಾಗೇ. ಎಲ್ಲಡೆ ಇದ್ದಾನೆ. ಎಲ್ಲರಲ್ಲಿ, ಎಲ್ಲದರಲ್ಲಿ ಇದ್ದಾನೆ. ಆದರೆ ಯಾರ, ಯಾವದರ ಅಂಟೂ ಅವಗಿಲ್ಲ. ಸುಖದುಃಖಗಳ ನಂಟೂ ಇಲ್ಲ.ಆತ ಅವಿಕಾರಿ. ವಿಕಾರರಹಿತ. ಅದಕ್ಕಾಗಿ ಆತ ಸರಸಿಜಾಕ್ಷ.

ಡಾ ವಿಜಯೇಂದ್ರ ದೇಸಾಯಿ.
ಶ್ರೀ ಕೃಷ್ಣಾರ್ಪಣಮಸ್ತು
***