ಘನ ಸುಖಮಂ ಪಡಿ ಇನಿಯನ ವಶದಿ
ಮನಸಿಜನಯ್ಯನ ದಯದಿಂದ ಬಾಲೆ ಪ
ಮನೆಗೆಲಸಗಳನು ದಿನಗೈಯುತ ಬಲು
ವಿನಯ ಸೌಶೀಲ್ಯದಿ ವನಿತೆಯರೊಳು ನೀ 1
ಪತಿಯನು ಪರದೇವತೆಯೆಂಬುವ ಮಹಾ
ಮತಿಯಲಿ ಸೇವಿಸಿ ಸುತರನು ಪಡೆದು ನೀ 2
ಗುರುಜನರಿಗೆ ಸದಾಶಿರಬಾಗುತ ಬಹು
ಸರಸದಿ ಸದ್ಗುಣಾಭರಣಗಳಿಂದ ನೀ 3
ರತಿಪತಿ ಪಿತನಿಗೆ ಪ್ರತಿಮೆಗಳೆನ್ನುತ
ಅತಿಥಿಗಳನು ಸಂತತ ಸತ್ಕರಿಸುತ 4
ಗಿರಿಜೆಯ ಪೂಜೆಯನು ನಿರುತದಿಗೈಯುತ
ಸಿರಿಕಾರ್ಪರ ನರಹರಿಯನು ಸ್ಮರಿಸುತ 5
****