Showing posts with label ಇದೇ ನೋಡಿರೋ ಸಂಧ್ಯಾನ mahipati. Show all posts
Showing posts with label ಇದೇ ನೋಡಿರೋ ಸಂಧ್ಯಾನ mahipati. Show all posts

Thursday, 12 December 2019

ಇದೇ ನೋಡಿರೋ ಸಂಧ್ಯಾನ ankita mahipati

ಹಂಸಧ್ವನಿ ರಾಗ ಏಕತಾಳ

ಇದೇ ನೋಡಿರೋ ಸಂಧ್ಯಾನ
ಸದಾ ಆತ್ಮಾನುಸಂಧಾನ ||ಧ್ರುವ||

ತಿಳಿಯದೆನಗೆ ತ್ರಿಕಾಲ
ಹೊಳವುತಿಹುದು ಸೂರ್ಯ ಅಚಲಾ
ಕಾಳವ್ಯಾಳ್ಯಲ್ಲಿದಕ ಸಮೂಲಾ
ಇಳೆಯೊಳಾಯಿತು ಧರ್ಮಾನುಕೂಲಾ ||೧||

ಚಂಚಲೆಂಬುದೆ ಆಚಮನ
ಮುಂಚೆ ಸಂಧ್ಯಾನಕಿದೆ ಸಾಧನ
ಸಂಚಿತ ಪ್ರಾಲಬ್ಧಕ್ರಿಯಮಾಣಾ
ವಂಚನಿಲ್ಲದ್ದಾಯಿತು ಅರ್ಘ್ಯದಾನ ||೨||

ಪರಮೇಷ್ಠಿ ಪರಬ್ರಹ್ಮಋಷಿಃ
ಅರಿತು ಪ್ರಣಮ್ಯ ಸಾಧಿಸಿ
ತಿರುಗಿ ನೋಡಿ ಘನ ಸ್ಮರಿಸಿ
ಕರಗಿ ಹೋಯಿತು ಪಾಪದ ರಾಶಿ ||೩||

ಆ ಜಪವೆ ಗಾಯತ್ರಿ ಮಂತ್ರ
ಬೀಜಾಕ್ಷರವಿದು ಪವಿತ್ರ
ರಾಜಿಸುತಿಹುದು ಸರ್ವಾಂತರಾ
ನಿಜಗುಹ್ಯ ಋಷಿಮುನಿ ಗೋತ್ರ ||೪||

ಸದೋದಿತ ಗುರುಬೋಧ ಪೂರ್ಣ
ಇದಕಿಲ್ಲ ಉದಯಾಸ್ತಮಾನ
ಇದೇ ಮಹಿಪತಿ ಸಂಧ್ಯಾನ
ಸದಾ ನಿತ್ಯಾನುಸಂಧಾನ ||೫||
*******

ಕಾಖಂಡಕಿ ಶ್ರೀ ಮಹಿಪತಿರಾಯರು

ಇದೇ ನೋಡಿರೋ ಸಂಧ್ಯಾನ ಸದಾ ಆತ್ಮಾನುಸಂಧಾನ (p)
 
ತಿಳಿಯದೆನಗೆ ತ್ರಿಕಾಲಾ ಹೊಳವುತಿಹ್ಯದು ಸೂರ್ಯಅಚಲಾ ಇಳೆಯೊಳಾಯಿತು ಧರ್ಮಾನುಕೂಲ 1 
ಚಂಚಲೆಂಬುದೆ ಅಚಮನ ಮುಂಚೆ ಸಂಧ್ಯಾನಕಿದೆ ಸಾಧನ ವಂಚÀನಿಲ್ಲದಾಯಿತು ಅಘ್ರ್ಯದಾನಾ 2 
ಪರಮೇಷ್ಠಿ ಪರಬ್ರಹ್ಮಋಷಿಃ ಅರಿತು ಪ್ರಣಮ್ಯ ಸಾಧಿಸಿ ತಿರುಗಿನೋಡಿಘನ ಸ್ಮರಿಸಿ ಕರಿಗಿ ಹೋಯಿತು ಪಾಪದ ರಾಶಿ 3 
ಆ ಹಪವೆ ಗಾಯತ್ರಿಮಂತ್ರ ಬೀಜಾಕ್ಷರವಿದು ಪವಿತ್ರ ರಾಜಿಸುತಿಹ್ಯದು ಸರ್ವಾಂತರಾ ನಿಜಗುಹ್ಯ ಋಷಿಮುನಿಗೋತ್ರ 4 
ಸದೋದಿತ ಗುರುಭೋಧಪೂರ್ಣ ಇದಕಿಲ್ಲ ಉದಯಾಸ್ತಮಾನ ಇದೇ ಮಹಿಪತಿ ಸಂಧ್ಯಾನ ಸದಾ ನಿತ್ಯಾನುಂಸಂಧಾನ 5
***