ಪುರಂದರದಾಸರು
ನೋಡುವ ಬನ್ನಿರಯ್ಯ ಪ
ಕಾವೇರಿಯ ಭವಹಾರಿಯ |ಮುಕ್ತಿಕಾರಿಯ ನೋಡುವ ಬನ್ನಿರಯ್ಯ ಅ.ಪ
ಮಾತೆಯ ನುತಜನಜಾತೆಯ ಹರಿಮನಃ |ಪ್ರೀತೆಯ ಭುವನವಿಖ್ಯಾತೆಯ ||ನೀತಿಯುನ್ನತಕರದಾತೆಯ ಶಿವನ ಸಂ-|ಭೂತೆಯ ನೋಡುವ ಬನ್ನಿರಯ್ಯ 1
ಬಂದು ಸಕಲ ಮುನಿವೃಂದ ನೆರರೆಯೆ ವಿೂಯ-|ಲಂದು ನಾರದಮುನಿ ಪೊಗಳುತಿರೆ ||ಸಂದೇಹವಿಲ್ಲ ನೋಡಿದಡೆ ಮುಕುತಿಯಹು-|ದೆಂದರೆ ಮುಳುಗಲದೇತಕಯ್ಯ? 2
ಅರ್ಕಚಂದ್ರವಹ್ನಿಪುಷ್ಕರದೊಳು ಮಿಂದು |ಚಕ್ರತೀರ್ಥದೊಳಗೋಲಾಡಿ ||ಗಕ್ಕನೆ ಸದ್ಗತಿಯಹುದೆಂದು ಮನೆಗಳ |ಕಕ್ಕುಲತೆಯ ಬಿಟ್ಟು ನಡೆಯಿರಯ್ಯ 3
ಕಂಡರೆ ಸಕಲಪಾತಕಪರಿಹಾರ, ಪಡೆ-|ದುಂಡರೆ ದುರಿತ-ದುರ್ಜನ ದೂರವು ||ಕೊಂಡಾಡಿದವರಿಗನಂತ ಫಲವು ನೀ-|ರುಂಡರೆ ಭವಬಂಧ ಮೋಕ್ಷವಯ್ಯ 4
ಗಂಗೆ-ಯಮುನೆಗೆ ಹೋದಡೆ ಮೂರೈದುದಿ-|ನಂಗಳಿಗಹುದು ಮುಕುತಿಯೆಂದಡೆ ||ಹಿಂಗದೆ ಕಾವೇರಿಯ ನೋಡಿದಾಕ್ಷಣ ಪಾ-|ಪಂಗಳಿರದೋಡಿ ಪೋಪುವಯ್ಯ 5
ಯಾಗಾದಿ ಸ್ವರ್ಗಯೋಗದಿ ಪೊಕ್ಕು ಕಾಶಿಯೊಳು |ಆಗಲೆ ತನುವ ಬಿಡಲು ಮುಕುತಿ |ಭೋಗಿಶಯನನ ದಿನದಲಿ ಕಾವೇರಿಗೆ |ಹೋಗಿ ಮಿಂದವರಿಗಿದೇ ಗತಿಯಯ್ಯ 6
ಕಾವೇರಿಯ ಗಾಳಿ ಸೋಕಿದ ದೇಶದೊ-ಳಾವಾವ ಮನುಜರು ಸುಕೃತಿಗಳೇ ||ಕಾವೇರಿಯ ತೀರವಾಸಿಗಳಿಗೆ ಮಕ್ತಿಆಹೋದು ಸಂದೇಃವಿಲ್ಲವಯ್ಯ 7
ಆವಾವ ಜನ್ಮಕರ್ಮಂಗಳು ಸವೆವರೆಕಾವೇರಿಯ ಕಾಡು ಸುಖಬಾಳಿರೈ ||ಶ್ರೀವರ ಸ್ವಾಮಿ ಶ್ರೀಪುರಂದರವಿಠಲನಸೇವೆಯೊಳನುದಿನವಿಪ್ಪುದಯ್ಯ 8
*********