ಅಲ್ಲೇನಿಲ್ಲೇನು ಮತ್ತಿಲ್ಲೇನು ಪ
ಅಲ್ಲೇ ನಿಲ್ಲೇನು | ಹರಿರೂಪಗಾಣದೇ ಡಂಭದಿ ತಿರುಗಿದ | ಅಲ್ಲೇ ನಿಲ್ಲೇನು 1
ಕರ್ಮಧರ್ಮವ ಮಾಡಿ ಸ್ವರ್ಗವ ಪಡೆದನು | ಅಲ್ಲೇ ನಿಲ್ಲೇನು| ಮರ್ಮವ ಗಾಣದ ವಿಷಯದ ಸಂಭ್ರಮ | ಅಲ್ಲೇ ನಿಲ್ಲೇನು 2
ಅಲ್ಲೇನಿಲ್ಲೇನು | ವನಿತೆ ಮಕ್ಕಳ ಬಿಟ್ಟು ಶಿಷ್ಯರ ನೆರಹಿದ | ಅಲ್ಲೇ ನಿಲ್ಲೇನು 3
ಎಲ್ಲ ಶಾಸ್ತ್ರವನೋದಿ ಪ್ರಾಕೃತಹಳಿದನು | ಅಲ್ಲೇ ನಿಲ್ಲೇನು | ಬಲ್ಲವ ನಾನೆಂಬ ಗರ್ವವು ಸೇರಿತು | ಅಲ್ಲೇ ನಿಲ್ಲೇನು 4
ಅಲ್ಲೇ ನಿಲ್ಲೇನು | ಮನದಲೆಚ್ಚರವಿಲ್ಲ ಕವಾಟಹೊಕ್ಕನು ಅಲ್ಲೇ ನಿಲ್ಲೇನು 5
ಮಹಿಪತಿ ನಂದನ ಸಾರಿದ ಸ್ವಹಿತ ಅಲ್ಲೇ ನಿಲ್ಲೇನು | ಶ್ರೀಹರಿ ನಾಮದ ನಂಬುಗೆ ಇರಬೇಕು | ಅಲ್ಲೇ ನಿಲ್ಲೇನು 6
***