..
ಸೇವಕತನದ ರುಚಿಯನೇನರಿದೆಯೊದೇವ ಹನುಮರಾಯ ವೈರಾಗ್ಯ ಬೇಡಿ ಪ
ಉದಧಿಯನು ದಾಟಿ ಸೀತೆಯ ಕಂಡು ಬಂದಾಗಮದುವೆಯನು ಮಾಡೆನ್ನಬಾರದಿತ್ತೆಪದದಿಂದ ಪಾಷಾಣ ಪೆಣ್ಣ ಮಾಡಿದಾತಗೆಇದೇನಸಾಧ್ಯವೊ ನೀ ಬಯಸಲೊಲ್ಲದೆ1
ಕ್ಷಣದಲ್ಲಿ ಸಂಜೀವನ ಪರ್ವತ ತಂದಾಗಹಣ ಹೊನ್ನುಗಳ ಬೇಡ ಬಾರದಿತ್ತೆವಿನಯದ ವಿಭೀಷಣಗೆ ರಾಜ್ಯವನಿತ್ತಂಥಧಣಿಗೆ ಏನಸಾಧ್ಯವೊ ಹನುಮ ನೀನೊಲ್ಲದೆ 2
ಸಾರ್ವಭೌಮನು ತಾನೆ ಮೆಚ್ಚಿ ಬಳಿಗೈದಾಗಉರ್ವಿಯನು ಬೇಡಿದಡೆ ಕೊಡದಿಹನೆಸರ್ವವನು ತೊರೆದು ಶ್ರೀ ನೆಲೆಯಾದಿ ಕೇಶವನನಿವ್ರ್ಯಾಜ ಭಕುತಿಯನು ಬೇಡಿಕೊಂಡೆಯೊ 3
***