Showing posts with label ಪಾಲಿಸಂಬುಧಿಶಾಯಿ prasannavenkata. Show all posts
Showing posts with label ಪಾಲಿಸಂಬುಧಿಶಾಯಿ prasannavenkata. Show all posts

Wednesday, 13 November 2019

ಪಾಲಿಸಂಬುಧಿಶಾಯಿ ankita prasannavenkata

by ಪ್ರಸನ್ನವೆಂಕಟದಾಸರು
ಪಾಲಿಸಂಬುಧಿಶಾಯಿ ವ್ಯಾಳಕಶಿಪುಶಾಯಿಪಾಲಿಸು ವಾರಿಧಿüಕೂಲದಿ ದರ್ಭಶಾಯಿ ಮೂಲ ವಟಪತ್ರಶಾಯಿ ಪ.

ವೇದೋದ್ಧಾರ ದಯಾಳು ಭೂಧರಧರ ದಯಾಳುಮೇದಿನಿಅಂತರ್ಮಾಲಾದಂಡಶುಭಕುಠಾರಧಾರಿಯೆ ದಯಾಳುಕೋದಂಡಧರ ದಯಾಳುಸ್ವಾದವೇಣುಧರ ದಯಾಳು ಸಮಾಧಿ ವ್ರತಧರ ಧರ್ಮಾಧರ ವಿಶ್ವಾಧರಮಾಧವನಿತ್ಯದÀಯಾಳು1

ಪಂಚಜನನವೈರಿವಂಚಕಾಸುರವೈರಿಕಾಂಚನನೇತ್ರಕ ಯದುಪತಿ ಬಲಿಮದಚಂಚಲ ಖಳವೈರಿಪಂಚದ್ವಯಾಸ್ಯನವೈರಿಪಂಚಪಾರ್ಥಾರಿತವೈರಿಪಂಚಬಾಣಾರಿವೈರಿ ಪಂಚಪಾತಕವೈರಿ ಸಂಚಿತಘಕೆವೈರಿ2

ಸರನಿಕೇತನಿವಾಸ ಗಿರಿತಳ ಸನ್ನಿವಾಸ ವರಸ್ವಾಮಿಪುಷ್ಕರಸಿರಿಅಹೋಬಲ ನೃಪಾಗರ ತ್ರಿಜಗನಿವಾಸಸರಯೂತೀರ ನಿವಾಸ ಶರಧಿಮಂದಿರವಾಸಸುರವಿರೋಧಿಸದನಪರಮಶಂಬಲವಾಸ ಪರಸನ್ನವೆಂಕಟವಾಸ3
*******