Showing posts with label ರಾಮಾ ರಘುಕುಲ ರಾಮ ಸುರ jagannatha vittala. Show all posts
Showing posts with label ರಾಮಾ ರಘುಕುಲ ರಾಮ ಸುರ jagannatha vittala. Show all posts

Saturday, 14 December 2019

ರಾಮಾ ರಘುಕುಲ ರಾಮ ಸುರ ankita jagannatha vittala

ಜಗನ್ನಾಥದಾಸರು
ರಾಮಾ ರಘುಕುಲರಾಮ ಪ

ಸುರ ಸಾರ್ವಭೌಮ ಪಾಹಿ ಗುಣಧಾಮಾ ಅ.ಪ.

ವಾಹನ ಫಣೀಂದ್ರಶಯನ ವರ
ದೇಂದ್ರನುತ ರಾಮಚಂದ್ರಾ 1

ಚಂಡಬಾಣ ಕೋದಂಡಾ ವಿಧೃತ ದೋ
ರ್ದಂಡಾ ಲೋಕೈಕ ಶುಂಡಾ 2

ಗೋಪ್ತಾ ಮೂಜಗದ್ವ್ಯಾಪ್ತಾ ದೋಷನಿ
ರ್ಲಿಪ್ತಾ ವಿಬುಧಜನರಾಪ್ತಾ 3

ಘನ್ನಾ ಸೌಪರಿಛಿನ್ನ ಕಾಲಾತಿ
ಭಿನ್ನ ಜಗದ ಮೋಹನ್ನಾ 4

ಅಂಬಾವಲ್ಲಭ ಬಿಂಬಾಸುರ ಮುನಿಕ
ದಂಬಾ ಸೇವೆ ಕೈಕೊಂಬಾ 5

ಗಣ್ಯಾಗಣ್ಯನೆ ಶರಣ್ಯ ಸಲಹೋ ನಿ
ರ್ವೀಣ್ಣ ಸುರವರವರೇಣ್ಯ 6

e್ಞÁನಾನಂದಾದಿ ನಾನಾ ಗುಣಪೂರ್ಣ
ಶ್ರೀ ನಾರಾಯಣ ಸಮಾನಾ 7

ಕಪಿಲಾ ಭಕ್ತರಿಗೆ ಸುಫಲಾದಾಯಕ
ಚಪಲಚಿತ್ತರಿಗೆ ಉಪಲಾ 8

ಸೀತಾಪತೆ ಜಗನ್ನಾಥ ವಿಠಲ
ಖ್ಯಾತಾ ಭವವನನಿಧಿ ಪೋತಾ 9
*******