Showing posts with label ಸುವ್ವಾಲೆ ಬಂತು ಸುವ್ವಾಲೆ parthasarathi vittala. Show all posts
Showing posts with label ಸುವ್ವಾಲೆ ಬಂತು ಸುವ್ವಾಲೆ parthasarathi vittala. Show all posts

Thursday, 1 July 2021

ಸುವ್ವಾಲೆ ಬಂತು ಸುವ್ವಾಲೆ ankita parthasarathi vittala

ಸುವ್ವಾಲೆ ಬಂತು ಸುವ್ವಾಲೆ

ಜಗನ್ನಾಥನ ದಿವ್ಯ ಸುವ್ವಾಲೆ


ಅನಾಥಬಂಧುವಿಗೆ ಕರುಣಾ ಸಿಂಧುವಿಗೆ 

ನಮಿಸಿರೆಂಬ ಭವ್ಯ ಸುವ್ವಾಲೆ ಗೋಕುಲದಲಿ ಭುವನ 

ಗೋವಿಂದ ಪ್ರಭುವನ್ನು ಸ್ಮರಿಸಿರೆಂಬ ದಿವ್ಯಸುವ್ವಾಲೆ 1


ಅರಿವು ಹೋಗುತಿದೆ ಮರೆವೆಯಾಗುತಿದೆ ಜಗಡಿ ತುಂಬಿರುವ 

ಈ ಸದ್ದುಗದ್ದಲದಲ್ಲಿ ನಿನ್ನರಿವು ಬರಲಿ ಮತ್ತೆ ಮರಮರಳಿ 

ಕಿವಿಗಳನು ತುಂಬಲಿ ನಿನ್ನ ಸುವ್ವಾಲೆ 2


ನಿನ್ನ ಸ್ಮರಣಿಯಲಿ ಬದುಕು ಅರಳಿರಲಿ ಜೀವ 

ಸಂಭ್ರಮಿಸಲಿ ಸುವ್ವಾಲೆ ಪಾರ್ಥಸಾರಥಿವಿಠಲನ್ನ 

ಸಡಗರದಿ ನೆನೆಯುತ್ತಾ ಹಾಡಲಿ ಸುವ್ವಾಲಿ  3

***