ಸುವ್ವಾಲೆ ಬಂತು ಸುವ್ವಾಲೆ
ಜಗನ್ನಾಥನ ದಿವ್ಯ ಸುವ್ವಾಲೆ
ಅನಾಥಬಂಧುವಿಗೆ ಕರುಣಾ ಸಿಂಧುವಿಗೆ
ನಮಿಸಿರೆಂಬ ಭವ್ಯ ಸುವ್ವಾಲೆ ಗೋಕುಲದಲಿ ಭುವನ
ಗೋವಿಂದ ಪ್ರಭುವನ್ನು ಸ್ಮರಿಸಿರೆಂಬ ದಿವ್ಯಸುವ್ವಾಲೆ 1
ಅರಿವು ಹೋಗುತಿದೆ ಮರೆವೆಯಾಗುತಿದೆ ಜಗಡಿ ತುಂಬಿರುವ
ಈ ಸದ್ದುಗದ್ದಲದಲ್ಲಿ ನಿನ್ನರಿವು ಬರಲಿ ಮತ್ತೆ ಮರಮರಳಿ
ಕಿವಿಗಳನು ತುಂಬಲಿ ನಿನ್ನ ಸುವ್ವಾಲೆ 2
ನಿನ್ನ ಸ್ಮರಣಿಯಲಿ ಬದುಕು ಅರಳಿರಲಿ ಜೀವ
ಸಂಭ್ರಮಿಸಲಿ ಸುವ್ವಾಲೆ ಪಾರ್ಥಸಾರಥಿವಿಠಲನ್ನ
ಸಡಗರದಿ ನೆನೆಯುತ್ತಾ ಹಾಡಲಿ ಸುವ್ವಾಲಿ 3
***
No comments:
Post a Comment