ಶರಣು ನಿನಗೆ ಶರಣಂಬೆನು ವಿಠಲ
ಕರುಣವಾರಿಧಿ ಎನ ಕಾಯೋ ವಿಠಲ
ದಶರಥರಾಯನ ಉದರದಿ ವಿಠಲ
ಶಿಶುವಾಗಿ ಉದಿಸಿದ್ಯೋ ಶ್ರೀರಾಮವಿಠಲ
ಶಶಿಮುಖಿ ಗೋಪಿಯ ಕಂದನೆ ವಿಠಲ
ಅಸುರೆ ಪೂತನಿಯ ಕೊಂದ್ಯೋ ಕೃಷ್ಣ ವಿಠಲ
ಅರಸಿ ರುಕ್ಮಿಣಿಗೆ ನೀನರಸನಾದ್ಯೋ ವಿಠಲ
ಪಿರಿದಾಗಿ ಶಂಖವ ಪಿಡಿದ್ಯೋ ನೀ ವಿಠಲ
ಸರಸಿಜ ಸಂಭವ ಸನ್ನುತ ವಿಠಲ
ನಿರತ ಇಟ್ಟಿಗೆ ಮೇಲೆ ನಿಂತ್ಯೋ ನೀ ವಿಠಲ
ಕಂಡೆ ನಾ ನಿನ್ನ ವೆಂಕಟನೆಂಬ ವಿಠಲ
ಕುಂಡಗೋಳಕರಿಗೊಲಿದು ಬಂದ ವಿಠಲ
ಪಾಂಡುರಂಗ ಕ್ಷೇತ್ರ ಪಾಲನೆ ವಿಠಲ
ಪುಂಡರೀಕಾಕ್ಷ ಶ್ರೀ ಪುರಂದರ ವಿಠಲ
****
ರಾಗ ಮಧ್ಯಮಾವತಿ ಅಟ ತಾಳ (raga tala may differ in audio)
ಕರುಣವಾರಿಧಿ ಎನ ಕಾಯೋ ವಿಠಲ
ದಶರಥರಾಯನ ಉದರದಿ ವಿಠಲ
ಶಿಶುವಾಗಿ ಉದಿಸಿದ್ಯೋ ಶ್ರೀರಾಮವಿಠಲ
ಶಶಿಮುಖಿ ಗೋಪಿಯ ಕಂದನೆ ವಿಠಲ
ಅಸುರೆ ಪೂತನಿಯ ಕೊಂದ್ಯೋ ಕೃಷ್ಣ ವಿಠಲ
ಅರಸಿ ರುಕ್ಮಿಣಿಗೆ ನೀನರಸನಾದ್ಯೋ ವಿಠಲ
ಪಿರಿದಾಗಿ ಶಂಖವ ಪಿಡಿದ್ಯೋ ನೀ ವಿಠಲ
ಸರಸಿಜ ಸಂಭವ ಸನ್ನುತ ವಿಠಲ
ನಿರತ ಇಟ್ಟಿಗೆ ಮೇಲೆ ನಿಂತ್ಯೋ ನೀ ವಿಠಲ
ಕಂಡೆ ನಾ ನಿನ್ನ ವೆಂಕಟನೆಂಬ ವಿಠಲ
ಕುಂಡಗೋಳಕರಿಗೊಲಿದು ಬಂದ ವಿಠಲ
ಪಾಂಡುರಂಗ ಕ್ಷೇತ್ರ ಪಾಲನೆ ವಿಠಲ
ಪುಂಡರೀಕಾಕ್ಷ ಶ್ರೀ ಪುರಂದರ ವಿಠಲ
****
ರಾಗ ಮಧ್ಯಮಾವತಿ ಅಟ ತಾಳ (raga tala may differ in audio)
Sharanu ninage sharanembeno vittala|
Karunavaridhi Enna Kaayo Vittala||
Dasharatharayana Udharadhi Vittala
Shishuvagi Udhisidyo Srirama Vittala
Shashimukhi Gopiya Kandane Vittala
Asure Poothaniya Kondyo Krishna Vittala||1||
Arasi Rukminige Neenarasanadyo Vittala
Piridagi Shankhava Pididyo Nee Vittala
Sarasijasambhavasannutha Vittala
Niratha Ittige Mele Nintyo Nee Vittala||2||
Kande Naa Ninna Venkatanemba Vittala
Kindagolakarigolidhu Bandha Vittala
Pandurangakshetra Palane Vittala
Pundarikaksha Sri Purandara Vittala||3||
***ಶರಣು ಶರಣು ನಿನಗೆಂಬೆನೊ ವಿಠಲ
ಕರುಣಾನಿಧಿಯೆಂಬೆ ಕಾಯಯ್ಯ ವಿಠಲ
ಶಿಶುವಾಗಿ ಜನಿಸಿದ್ಯೊ ಶ್ರೀರಾಮವಿಠಲ
ಶಶಿಧರನುತ ಗೋಪಿಕಂದನೆ ವಿಠಲ
ಅಸುರೆ ಪೂತನಿ ಕೊಂದ ಶ್ರೀಕೃಷ್ಣವಿಠಲ
ಕಸುಮನಾಭ ಸಿರಿವರ ಮುದ್ದುವಿಠಲ
ಅರಸಿ ರುಕ್ಮಿಣಿಗೆ ನೀ ಅರಸನೊ ವಿಠಲ
ಸರಸಿಜ ಸಂಭವ ಸನ್ನುತ ವಿಠಲ
ನಿರುತ ಇಟ್ಟಿಗೆ ಮೇಲೆ ನಿಂತ್ಯೊ ನೀ ವಿಠಲ
ಚರಣ ಸೇವೆಯನಿತ್ತು ಕಾಯಯ್ಯ ವಿಠಲ
ಕಂಡೆ ಗೋಪುರ ವೆಂಕಟ ಪ್ರಭು ವಿಠಲ
ಅಂಡಜವಾಹನ ಹೌದೊ ನೀ ವಿಠಲ
ಪಾಂಡುನಂದನ ಪರಿಪಾಲನೆ ವಿಠಲ
ಪುಂಡರೀಕಾಕ್ಷ ಶ್ರೀ ಪುರಂದರ ವಿಠಲ
***
ಕರುಣಾನಿಧಿಯೆಂಬೆ ಕಾಯಯ್ಯ ವಿಠಲ
ಶಿಶುವಾಗಿ ಜನಿಸಿದ್ಯೊ ಶ್ರೀರಾಮವಿಠಲ
ಶಶಿಧರನುತ ಗೋಪಿಕಂದನೆ ವಿಠಲ
ಅಸುರೆ ಪೂತನಿ ಕೊಂದ ಶ್ರೀಕೃಷ್ಣವಿಠಲ
ಕಸುಮನಾಭ ಸಿರಿವರ ಮುದ್ದುವಿಠಲ
ಅರಸಿ ರುಕ್ಮಿಣಿಗೆ ನೀ ಅರಸನೊ ವಿಠಲ
ಸರಸಿಜ ಸಂಭವ ಸನ್ನುತ ವಿಠಲ
ನಿರುತ ಇಟ್ಟಿಗೆ ಮೇಲೆ ನಿಂತ್ಯೊ ನೀ ವಿಠಲ
ಚರಣ ಸೇವೆಯನಿತ್ತು ಕಾಯಯ್ಯ ವಿಠಲ
ಕಂಡೆ ಗೋಪುರ ವೆಂಕಟ ಪ್ರಭು ವಿಠಲ
ಅಂಡಜವಾಹನ ಹೌದೊ ನೀ ವಿಠಲ
ಪಾಂಡುನಂದನ ಪರಿಪಾಲನೆ ವಿಠಲ
ಪುಂಡರೀಕಾಕ್ಷ ಶ್ರೀ ಪುರಂದರ ವಿಠಲ
***