ಸ್ವಾಮಿ ನೀನೆ ಸಾರ್ವಭೌಮ ಶ್ರೀರಘುರಾಮ
ಸೋಮಶೇಖರಪ್ರಿಯ ದಿವ್ಯ ನಿನ್ನ ನಾಮ ||ಪ||
ಕಾಕುಸ್ಥತಿಲಕ ಕಾರುಣ್ಯನಿಧಿ ಕೃಪಾಲ
ಪ್ರಕಟ ಪ್ರಖ್ಯಾತಲಿಹ ಸತ್ಯಶೀಲ
ನಾಕಜರ ಸೆರೆಬಿಡಿಸ್ಯಾದೆ ಸಾನುಕೂಲ
ಸಕಲಸುಖವೀವ ಮೂಲೋಕಪಾಲ ||೧||
ಖರದೂಷಣಾರಿ ಶರಣಾಗತರ ಸಹಕಾರಿ
ಸರ್ವರಾಧಾರಿ ಕೋದಂಡಧಾರಿ
ದುರಿತ ದುಷ್ಕೃತ ದುರುಳ ದುಷ್ಟಜನಸಂಹಾರಿ
ವರಪೂರ್ಣವೀವ ಪರಮ ಉದಾರಿ ||೨||
ಅನುದಿನದಲಿ ನಿನ್ನ ನಡೆನುಡಿಗಳೊಂದವೆ ನೇಮ
ಅನಂತಗುಣ ಪೂರ್ಣಾನಂದ ಮಹಮಹಿಮ
ದೀನ ಮಹಿಪತಿ ಆತ್ಮಾರಾಮ ಪೂರಿತ ಕಾಮ
ಭಾನುಕೋಟಿ ತೇಜ ಘನದಯ ನಿಸ್ಸೀಮ ||೩||
***
ದೇಸ್ ರಾಗ ದಾದರಾ ತಾಳ (raga tala may differ in audio)
ಸ್ವಾಮಿ ನೀನೆ ಸಾರ್ವಭೌಮ ಶ್ರೀ ರಘುರಾಮ ಸೋಮಶೇಖರ ಪ್ರಿಯ ದಿವ್ಯ ನಿನ್ನ ನಾಮ ಪ
ಕಾಕುಸ್ಥತಿಲಕ ಕಾರುಣ್ಯನಿಧಿ ಕೃಪಾಲ ಪ್ರಕಟ ಪ್ರಖ್ಯಾತಲಿಹ ಸತ್ಯಶೀಲ ನಾಕಜರ ಸೆರೆಬಿಡಿಸ್ಯಾದೆ ಸಾನುಕೂಲ ಸಕಲ ಸುಖದೀವ ಮೂಲೋಕಪಾಲ 1
ಖರದೂಷಣಾರಿ ಶರಣಾಗತರ ಸಹಕಾರಿ ಸರ್ವರಾಧಾರಿ ಕೋದಂಡ ಧಾರಿ ದುರುಳ ದುಷ್ಟ ಜನಸಂಹಾರಿ ವರಪೂರ್ಣವೀವ ಪರಮ ಉದಾರಿ 2
ಅನುದಿನದಲಿ ನಿನ್ನ ನಡಿನುಡಿಗಳೊಂದವೆ ನೇಮ ಅನಂತಗುಣ ಪೂರ್ಣಾನಂದ ಮಹಮಹಿಮ ದೀನ ಮಹಿಪತಿ ಅತ್ಮಾರಾಮ ಪೂರಿತ ಕಾಮ ಭಾನುಕೋಟಿ ತೇಜ ಘನದಯ ನಿಸ್ಸೀಮ 3
***