ನಾರಸಿಂಹ ದಂಷ್ಟ್ರಾಕರಾಲವದನ
ವೀರಸಿಂಹ ಪಾಹಿ ನಖವಜ್ರಧರ ll ಪ ll
ದುರಿತದೂರ ದುರಿತಹರನಾಮ
ಗರಾ-ಭಿಚಾರಾ-ಗ್ನಿ-ತಾಪಹರ ತ್ರ್ಯಕ್ಷ
ಸುರವರವಂದಿತಪಾದಾರವಿಂದ
ಅರಿ-ದರಧರ ಭೀಮಾರ್ಪಿತಭಕ್ತ ll 1 ll
ಹರೇ ದುರಿತಉರಿ ಬಾಧಿಸುತಿದೆ
ಸುರನದಿಜಲದಿ ಶಾಂತವಾಗದು
ಸುರವರ ಕರುಣಾಜಲಸೇಕದಿ
ಅರೆಕ್ಷಣದಲಿ ನಂದಿಸು ನರಸಿಂಹ ll 2 ll
ಪರತರ ಪರಿಸರಮಾರ್ಗಾವಲಂಬಿ
ಕರಿಸಮದೈತ್ಯನ ಸೀಳಿ ನಖದಿ
ಕರುಳುಮಾಲೆಯನು ಧರಿಸಿದೆ ನೀ
ವೀರಮೃಗೇಂದ್ರಲೀಲ ನಮೋನಮಸ್ತೇ ll 3 ll
ನವವಿಧಭಾವಲಕ್ಷಣವೆನಿಪ
ಶ್ರವಣಾದಿಯನು ಹರೇ ಆದರದಿ
ಪವನಮುಖದಿ ಸಾಧು ನಿನಗರ್ಪಿಸಿ
ತವ ದಿವ್ಯಧಾಮವ ಪೊಂದಿದವ 'ಸೂರಿ' ll 4 ll
ಭೀಮ ಕಂಡ ಮನ್ಯುಮಂತ್ರದಿ ವಿನುತ
ಕಾಮಾರಿಚಿಂತಿತಪದಕಂಜಯುಗಲ
ಸ್ತೋಮಾರಿಪೀಡಿತಪೋತಪ್ರಹ್ಲಾದಪಾಲ
ಭೂಮ 'ಋತಂಬರ' ಪಾಹಿ ವಿದ್ಯೇಶವಿಟ್ಠಲ ll 5 ll
***