Showing posts with label ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು purandara vittala MAARUTANE ELENDU EBBISDALANJANEYU. Show all posts
Showing posts with label ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು purandara vittala MAARUTANE ELENDU EBBISDALANJANEYU. Show all posts

Sunday, 5 December 2021

ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು purandara vittala MAARUTANE ELENDU EBBISDALANJANEYU



ಪುರಂದರದಾಸರು

ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು ಶ್ರೀ ರಾಮ ಸೇವೆಗೆ ತಡವಾಯಿತೇಳು. ಪಲ್ಲವಿ

ಸೇತು ಕಟ್ಟಲು ಬೇಕು ಶರಧಿ ದಾಟಲು ಬೇಕು
ಮಾತೆಗೆ ಉಂಗುರ ಕೊಡಲುಬೇಕು
ಪಾತಕಿ ರಾವಣನ ಶಿರವನಳಿಯಲುಬೇಕು
ಸೀತೆಪತಿ ರಾಮನಿಗೆ ನಮಿಸಬೇಕು 1

ಇಂತು ಕಳೆಯಲು ಬೇಕು ಅಜ್ಞಾತವಾಸವನು
ಬಂಧದಲಿ ಕೀಚಕನ ಒಡೆಯ ಬೇಕು
ತಂತ್ರದಲಿ ಗೆಲಬೇಕು ಶಕುನಿ ದುರ್ಯೋಧನರ
ಕುಂತಿನಂದನನೆಂದು ಹೆಸರಾಗಬೇಕು 2

ಮಧ್ವರಾಯರು ಎಂದು ಪ್ರಸಿದ್ಧರಾಗಲು ಬೇಕು
ತಿದ್ದಿ ಹಾಕಲು ಬೇಕು ಸಕಲ ಗ್ರಂಥಗಳ
ಅದ್ವೈತ ವಾದಿಗಳ ಗೆದ್ದುಕೆಡಹಲು ಬೇಕು
ಮುದ್ದು ಪುರಂದರ ವಿಠಲನ ದಾಸನೆನಿಸಲು ಬೇಕು 3
***

pallavi

mArutane Elendu ebbisidaLanjaneyu shrI rAma sEvege taDavAyidELu

caraNam 1

sEtu gaTTalu bEku sharadhi dATalu bEku mAtege ungura koDalu bEku
pAtaki rAvaNana shiravanaLiyalu bEku sItepati rAmanige namisa bEku

caraNam 2

intu kaLeyalu bEku ajnAta vAsavanu bandadali kIcakana oDeya bEku
tantradali gela bEku shakuni duryOdhanara kunti nandananendu hesarAga bEku

caraNam 3

madhvarAyaru endu prasiddharAgalu bEku tiddi hAkalu bEku sakala granthagaLa
advaita vAdigaLa geddukeDahalu bEku muddu purandara viTTala dAsanenisalu bEku
***

ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು ಶ್ರೀ ರಾಮ ಸೇವೆಗೆ ತಡವಾಯಿತೇಳು ಪ.

ಸೇತುಗಟ್ಟಲು ಬೇಕುಶರಧಿ ದಾಟಲು ಬೇಕುಮಾತೆಗೆ ಉಂಗುರವ ಕೊಡಲು ಬೇಕು ||ಪಾತಕಿ ರಾವಣನ ಶಿರವನ್ಹರಿಯಲು ಬೇಕುಸೀತೆಪತಿ ರಾಮರಿಗೆ ನಮಿಸಬೇಕು 1

ಇಂತು ಕಳಿಯಲು ಬೇಕು ಅಙ್ಞÕತವಾಸವನುಪಂಥದಲಿ ಕೀಚಕರ ಒದೆಯಬೇಕು ||ತಂತ್ರದಲಿ ಗೆಲಬೇಕು ಶಕುನಿ ದುರ್ಯೋಧನರಕುಂತಿನಂದನನೆಂದು ಹೆಸರಾಗಬೇಕು 2

ಮಧ್ವರಾಯರು ಎಂದು ಪ್ರಸಿದ್ಧರಾಗಲು ಬೇಕುತಿದ್ದಿ ಹಾಕಲು ಬೇಕು ಸಕಲಗ್ರಂಥಗಳ ||ಅದ್ವೈತವಾದಿಗಳ ಗೆದ್ದು ಕೆಡಹಲು ಬೇಕುಮುದ್ದು ಪುರಂದರವಿಠಲ ದಾಸನೆನಿಸಲು ಬೇಕು 3
**********