ಕಾಖಂಡಕಿ ಶ್ರೀ ಕೃಷ್ಣದಾಸರು
ದೊರಕುವುದೇ ಪರಮಾರ್ಥ ಪ
ಜರಿದು ಆಶ್ರಮ ಧರ್ಮಾ ವೇಷ ವಿರಕ್ತಿಯಿಂದಾ | ಚರಿಸುತ ಬಳಲುವರೇ ವ್ಯರ್ಥ 1
ಕ್ರಮದ ಹಾದಿಯ ಬಿಟ್ಟು ಅಡವಿ ಬೀಳಲು ಎಲ್ಲ | ಕಮರಿಯಲ್ಲದೇ ಗ್ರಾಮವಾರ್ತಾ 2
ಕಣ್ಣಿನೊಳಂಜನಿಲ್ಲದೇ ಹಲವು ಸಾಧನದಿಂದಾ | ದಣ್ಣನೇ ದಣಿವರೇ ದ್ರವ್ಯಕುರ್ತಾ 3
ಕರಗದೆ ವಾಸನೆ ತಪಹೀನ ಅಂತರ್ಗತ | ಜ್ವರವಿರಲಾರೋಗ್ಯದ ಸ್ನಾನಾರ್ಥ 4
ತಂದೆ ಮಹಿಪತಿ ಸುತ ಪ್ರಭು ಒಲುಮೆಯಾ | ಛಂದದಿ ಪದ ಕೊಂಡವನೇ ಧೂರ್ತಾ 5
****