by hosakere chidambarayya
ಗಂಗಾ ಗಂಗಾ ಎಂದು ನಿನ್ನ ಸಾನ್ನಿಧ್ಯದಲ್ಲಿಯೇ ಇರುವೆನೋ? ಸುಖದಿ ಗಂಗಾ ಪ
ಧರೆಗೊಪ್ಪುವ ಹಾರ'ದೆಂಬಂದದಿಮೆರೆಯುತ್ತಿರುವಾ ಪರಮಪಾವನೆಯೆ 1
ಸುರಲೋಕಕೆ ಹತ್ತುವದನು ಸೂಚಿಸುತಿರುವ ಪತಾಕೆಯ ಪರಿಯಳೊಪ್ಪಿರುವ2
ಹರಿಚರಣಾಂಬುಜದಿಂದ ಹೊರಡುತಹರನಶಿರಸ್ಯಂ ಹರಿಯುತಾ ಇರುವ 3
ಮುಳುಗಿದವರ ಪಾಪಗಳನೆಲ್ಲವನುತೊಳೆಯುವ ಚಿನ್ಮಯೆ ಕಲಿಮಲಾಪಹರೆ 4
****