ರಾಗ ಆನಂದಭೈರವಿ. ಅಟ ತಾಳ
ಬಂದೆ ರಂಗಯ್ಯ ನಿನ್ನ ಬಳಿಗೆ ||ಪ||
ಎಲ್ಲಿಗ್ಹೋದರು ಸುಖವಿಲ್ಲ, ಅವ-
ರೆಲ್ಲರ ಸೇವೆಯ ಮಾಡ ಬೇಕಲ್ಲ
ಒಳ್ಳೆದಾಯಿತು ಎಂಬೊರಿಲ್ಲ, ರಂಗ, ಎ-
ನ್ನಲ್ಲಿ ತಪ್ಪುಗಳೆಣಿಸುವರೆಲ್ಲ ||
ಕಸಮುಸುರೆಯ ಮಾಡಲಾರೆ
ಕೆಳಲಾರೆ
ಸೊಸೆಯ ಮಗನ ಮಾತು ಬೇರೆ ,ಇಂಥಾ
ಹಸಗೆಟ್ಟ ಸಂಸಾರ ನಾ ಮಾಡಲಾರೆ
ಸೊಂಟಿಬೇರಿಗೆ ಕಾಸಿಲ್ಲ, ಎನಗೆ
ಸೊಟ್ಟಾದ ನೋವು ಘನವಾಯಿತಲ್ಲ
ಕಂಠಕ್ಕೆ ಬಂದಿದೆಯಲ್ಲ, ಕೈ
ಇಟ್ಟು ರೊಕ್ಕಗಳಾರು ಕೊಡುವವರಿಲ್ಲ ||
ಇದ್ದ ಕಡೆ ಇರಲೀಸರು , ಅಲ್ಲಿಂ
ದೆದ್ದು ಬಂದರೆ ಸಿಟ್ಟುಗಾರರು ಬಿಡರು
ಮಧ್ಯಾಹ್ನಕ್ಕನ್ನದ ತೊಡರು ಒಂ-
ದು ದುಡ್ಡು ಕೇಳಿದರ್ಯಾರು ಸಾಲವ ಕೊಡರು ||
ಸೋಮವಾರದ ವ್ರತವೆನಗೆ ,ಒಂದು
ದೀವಿಗೆ ಹಚ್ಚಲು ತೆರವಿಲ್ಲವಲ್ಲ
ಭಾವಿಸಿ ನೋಡುವರಿಲ್ಲ, ನಮ್ಮ
ಪುರಂದರವಿಠಲನೆ ಬಲ್ಲ ||
***
ಬಂದೆ ರಂಗಯ್ಯ ನಿನ್ನ ಬಳಿಗೆ ||ಪ||
ಎಲ್ಲಿಗ್ಹೋದರು ಸುಖವಿಲ್ಲ, ಅವ-
ರೆಲ್ಲರ ಸೇವೆಯ ಮಾಡ ಬೇಕಲ್ಲ
ಒಳ್ಳೆದಾಯಿತು ಎಂಬೊರಿಲ್ಲ, ರಂಗ, ಎ-
ನ್ನಲ್ಲಿ ತಪ್ಪುಗಳೆಣಿಸುವರೆಲ್ಲ ||
ಕಸಮುಸುರೆಯ ಮಾಡಲಾರೆ
ಕೆಳಲಾರೆ
ಸೊಸೆಯ ಮಗನ ಮಾತು ಬೇರೆ ,ಇಂಥಾ
ಹಸಗೆಟ್ಟ ಸಂಸಾರ ನಾ ಮಾಡಲಾರೆ
ಸೊಂಟಿಬೇರಿಗೆ ಕಾಸಿಲ್ಲ, ಎನಗೆ
ಸೊಟ್ಟಾದ ನೋವು ಘನವಾಯಿತಲ್ಲ
ಕಂಠಕ್ಕೆ ಬಂದಿದೆಯಲ್ಲ, ಕೈ
ಇಟ್ಟು ರೊಕ್ಕಗಳಾರು ಕೊಡುವವರಿಲ್ಲ ||
ಇದ್ದ ಕಡೆ ಇರಲೀಸರು , ಅಲ್ಲಿಂ
ದೆದ್ದು ಬಂದರೆ ಸಿಟ್ಟುಗಾರರು ಬಿಡರು
ಮಧ್ಯಾಹ್ನಕ್ಕನ್ನದ ತೊಡರು ಒಂ-
ದು ದುಡ್ಡು ಕೇಳಿದರ್ಯಾರು ಸಾಲವ ಕೊಡರು ||
ಸೋಮವಾರದ ವ್ರತವೆನಗೆ ,ಒಂದು
ದೀವಿಗೆ ಹಚ್ಚಲು ತೆರವಿಲ್ಲವಲ್ಲ
ಭಾವಿಸಿ ನೋಡುವರಿಲ್ಲ, ನಮ್ಮ
ಪುರಂದರವಿಠಲನೆ ಬಲ್ಲ ||
***
pallavi
bande rangayya ninna baLige
caraNam 1
ellighOdaru sukhavilla avarellara sEveya mDa bEkalla
oLLedAyitu emborilla ranga ennalli tappugaLeNisuvarilla
caraNam 2
kasamusureya mADalAre ..... soseya magana mAtu
bEre inthA hasakeTTa samsAra nA mADalAre
caraNam 3
soNTibErige kAsilla enage soNTAda nOvu ghanavAyitalla
kaNDhakke bandideyalla toDaru ondu duDDu kELidaryAru sAlava koDaru
caraNam 4
sOmavArada vratavenage ondu dIvige haccalu teravillavalla
bhAvisi nODuvarilla namma purandara viTTalane balla
***
bande rangayya
raagam: Anandabhiravi
Aa:S G2 R2 G2 M1 P D2 P N2 S
Av: S N2 D2 P M1 G2 R2 S
taaLam: aTa
Composer: Purandara Dasaru
Language: Kannada
pallavi
bande rangayya ninna baLige
caraNam 1
ellighOdaru sukhavilla avarellara sEveya mDa bEkalla
oLLedAyitu emborilla ranga ennalli tappugaLeNisuvarilla
caraNam 2
kasamusureya mADalAre kELalare soseya magana mAtu
bEre inthA hasakeTTa samsAra nA mADalAre
caraNam 3
soNTibErige kAsilla enage soNTAda nOvu ghanavAyitalla
kaNDhakke bandideyalla toDaru ondu duDDu kELidaryAru sAlava koDaru
caraNam 4
sOmavArada vratavenage ondu dIvige haccalu teravillavalla
bhAvisi nODuvarilla namma purandara viTTalane balla
***
ಬಂದೆ ರಂಗಯ್ಯ
ರಾಗ : ಆನಂದಭೈರವಿ
Aa:S G2 R2 G2 M1 P D2 P N2 S
Av: S N2 D2 P M1 G2 R2 S
ತಾಳ : ಆಟ
ರಚನೆ : ಪುರಂದರ ದಾಸರು
ಪಲ್ಲವಿ
ಬಂದೆ ರಂಗಯ್ಯ ನಿನ್ನ ಬಳಿಗೆ
ಚರಣಂ 1
ಎಲ್ಲಿಗೆ ಹೋದರು ಸುಖವಿಲ್ಲ ಅವರೆಲ್ಲರ ಸೇವೆಯ ಮಾಡ ಬೇಕಲ್ಲ
ಒಳ್ಳೆದಾಯಿತು ಎಂಬೋರಿಲ್ಲ ರಂಗ ಎನ್ನಲ್ಲಿ ತಪ್ಪುಗಳೆನಿಸುವರೆಲ್ಲ
ಚರಣಂ 2
ಕಸಮುಸುರೆಯ ಮಾಡಲಾರೆ ಕೇಳಲಾರೆ ಸೊಸೆಯ ಮಗನ ಮಾತು
ಬೇರೆ ಇಂಥ ಹಸಕೆಟ್ಟ ಸಂಸಾರ ನಾ ಮಾಡಲಾರೆ
ಚರಣಂ 3
ಸೊಂಟಿಬೇರಿಗೆ ಕಾಸಿಲ್ಲ ಎನಗೆ ಸೊಂಟದ ನೋವು ಘನವಾಯಿತಲ್ಲ
ಕಂಧಕ್ಕೆ ಬಂದಿದೆಯಲ್ಲ ತೊಡರು ಒಂದು ದುಡ್ಡು ಕೇಳಿದರು ಯಾರು ಸಾಲವ ಕೊಡರು
ಚರಣಂ 4
ಸೋಮವಾರದ ವ್ರತವೆನಗೆ ಒಂದು ದೀವಿಗೆ ಹಚ್ಚಲು ತೆರವಿಲ್ಲವಲ್ಲ
ಭಾವಿಸಿ ನೋಡುವರಿಲ್ಲ ನಮ್ಮ ಪುರಂದರ ವಿಠ್ಠಲನೇ ಬಲ್ಲ
***