RSS song .
ಉನ್ನತೋಜ್ವಲ ಗುರುಸ್ವರೂಪಿಯೆ
ಧ್ವಜ ನಮೋ ಚಿರಸ್ಪೂರ್ತಿದಾತಾ ||ಪ||
ಹೃದಯ ಸಾಗರದರುಣ ಜಲದಲಿ ಭಾವಕಮಲದ ಅಗ್ನಿಕಾಂತಿ
ಧ್ಯೇಯ ಭಾಸ್ಕರನುದಯ ಕಾಲದಿ ಅರಳಿ ದಲದಲ ತಾನೆ ಪ್ರಣತಿ
ಭಕ್ತಿಯಲಿ ಶುಚಿ ತಳೆದು ನಿಂತ, ದೀಕ್ಷೆಯಲಿ ಅಚಲತೆಯನಾಂತ
ಬಾಳಸೌಧದ ಭವ್ಯ ಶಿಖರದ ತ್ಯಾಗಸ್ತಂಭದ ತುದಿಗೆ ಸ್ವಾಗತ ||೧||
ತಾಯ್ಧರೆಯ ಪ್ರೀತಿಯಲಿ ಯುವಜನ ಒಂದುಗೂಡುತ ಬಂಧುಭಾವದಿ
ಧ್ಯೇಯ ಸಾಕ್ಷಾತ್ಕಾರದುತ್ಕಟ ಬಯಕೆ ದಿವ್ಯತೆಯಾಂತು ಹೃದಯದಿ
ಸಾಧನಾಮಯವಾಗಿ ಜೀವನ, ಚಿರ ಸಮರ್ಪಿತ ತನುಮನ
ಸ್ವೀಕರಿಸು ಸಾರ್ಥಕತೆ ಕರುಣಿಸು ಸ್ಪೂರ್ತಿಧಾರೆಯ ಸತತವೆರೆಯುತ ||೨||
ಅಂತರಂಗದ ಧ್ವನಿತರಂಗದ ಮಧುರ ಸ್ಪಂದನ ರೌದ್ರವಾಗುತೆ
ಶೌರ್ಯ ಧರ್ಯದ ಕ್ಷಾತ್ರತೇಜದ ವಜ್ರಲೇಪನ ರಕ್ಷೆಯಾಗುತೆ
ದೀಪ್ತಗೊಳ್ಳಲಿ ಸುಪ್ತಚೇತನ, ಕೆಚ್ಚು ಕಲಿತನ ಅರಳಿ ನೂತನ
ಆದಿ ಅಂತ್ಯವ ಮೀರುತೇರುತ ಹಾರು ಜ್ಞಾನದ ಪ್ರಭೆಯ ಬೀರುತ ||೩||
***
unnatOjvala gurusvarUpiye
dhvaja namO ciraspUrtidaataa ||pa||
hRudaya sAgaradaruNa jaladali BAvakamalada agnikAMti
dhyEya BAskaranudaya kAladi araLi daladala taane praNati
Baktiyali Suci taLedu niMta, dIkSheyali acalateyanAMta
bALasoudhada Bavya Sikharada tyAgastaMBada tudige svAgata ||1||
taaydhareya prItiyali yuvajana oMdugUDuta baMdhuBAvadi
dhyEya sAkShAtkaaradutkaTa bayake divyateyAMtu hRudayadi
sAdhanAmayavAgi jIvana, cira samarpita tanumana
svIkarisu sArthakate karuNisu spUrtidhAreya satatavereyuta ||2||
aMtaraMgada dhvanitaraMgada madhura spaMdana roudravAgute
Sourya dharyada kShAtratEjada vajralEpana rakSheyAgute
dIptagoLLali suptacEtana, keccu kalitana araLi nUtana
Adi aMtyava mIrutEruta hAru j~jAnada praBeya bIruta ||3||
***