kruti by ವಿಶ್ವೇಂದ್ರತೀರ್ಥರು vishwendra teertharu sode mutt
ವೇದವ್ಯಾಸ ಮೂರುತೀ ಬದರಿಯೊಳಗಿರುತಿ
ಮೇದಿನಿಯೊಳ್ ನಿನ್ನ ಕೀರುತಿ ಪಸರಿಸುತಿರುತಿ ಪ
ಮಧ್ವಮುನಿಗಾನಂದದಿ ವೇದ ಶಾಸ್ತ್ರಾಂಬುಧಿಯೊಳು
ಇಂದಿಗಾಯ್ತೊಂಭತ್ತು ಶತವು ಚಂದದಿಂ ವತ್ಸರಗಳು 1
ಕೀಟದಿಂದ ರಾಜ್ಯಭಾರ-
ವಾಟದಂತೆ ನಡೆಸಿದಿ |
ಪುಟ್ಟತನದಿ ಮಾತೆಗೊಲಿದು
ಶ್ರೇಷ್ಠ ನೀನೆಂದೆನಿಸಿದಿ 2
ರಾಜ ಧರ್ಮತನಯನಿಂದ
ರಾಜಸೂಯ ನಡೆಸಿದಿ |
ರಾಜನಾಥ ಹಯಮುಖ ನೀ
ಮೂಜಗದಿ ಮೆರೆಯುತಿ3
***