ಕಾಖಂಡಕಿ ಶ್ರೀ ಮಹಿಪತಿರಾಯರು
ಈ ಮಹಿಮೆಗೆ ಏನೆನಬಹುದು P
ರೂಪವಿಲ್ಲದೆ ರೂಪಾಗಿ ರೂಪಕ ಅರೂಪನಾದ ಅಪಾ
ಮೂರು ಲೋಕಕ ಚಿದ್ರೂಪನಾದ ಮೂರ್ತಿಗೆ 1
ಸರ್ವರೊಳು ಸಾಕ್ಷವಾಗಿ ನಿರ್ವಿಕಲ್ಪ ನಿರ್ಗುಣಿ ತಾ ನಿರ್ವಿಕಾರನಾದ ನಿರ್ಭರ ನಿರ್ವಿಶೇಷಗೆ 2
ಭಾವಕ ಸ್ವಭಾವನಾದ ಪವಿತ್ರಪಾವನನೀತ ಭವನಾಶಗೈಸಿದ ಮಹಿಪತಿ ಗುರುಮೂರ್ತಿಗೆ 3
***