Showing posts with label ಒಲ್ಲೆಂದರಾಗುವುದೇ ಅಲ್ಲಿ ಪಡೆದು neleyadikeshava. Show all posts
Showing posts with label ಒಲ್ಲೆಂದರಾಗುವುದೇ ಅಲ್ಲಿ ಪಡೆದು neleyadikeshava. Show all posts

Tuesday, 15 October 2019

ಒಲ್ಲೆಂದರಾಗುವುದೇ ಅಲ್ಲಿ ಪಡೆದು ankita neleyadikeshava

ನೀಲಾಂಬರಿ ರಾಗ ರೂಪಕ ತಾಳ

ಒಲ್ಲೆಂದರಾಗುವುದೇ ಅಲ್ಲಿ ಪಡೆದು ಬಂದುದನ್ನು
ಎಲ್ಲವನ್ನು ಉಂಡು ತೀರಿಸಬೇಕು ಮನವೆ ||ಪ||

ತಂದೆ ತಾಯಿಯ ಬಸಿರಿನಲ್ಲಿ ಬಂದ ಅಂದಂದಿಗೂ
ಒಂದಿಷ್ಟು ಸುಖವ ನಾ ಕಾಣೆ ಜೀವನವೆ
ಬಂದದ್ದನೆಲ್ಲವನ್ನು ಉಂಡು ತೀರಿಸಬೇಕು, ಭ್ರಮೆ-
ಯಿಂದ ಮನವೆ ನಿನಗೆ ಬಯಲಾಸೆ ಯಾಕೋ ||೧||

ಎಮ್ಮ ಅರ್ಥ ಎಮ್ಮ ಮನೆ ಎಮ್ಮ ಮಕ್ಕಳು ಎಂಬ
ಹಮ್ಮು ನಿನಗೆ ಏಕೋ ಹಗೆಯ ಜೀವನವೆ
ಬ್ರಹ್ಮನು ಫಣೆಯಲ್ಲಿ ಬರೆದ ಬರಹ ತಪ್ಪುವುದುಂಟೆ
ಸುಮ್ಮನೆ ಬಯಲಾಸೆ ವ್ಯರ್ಥ ಜೀವನವೆ ||೨||

ಅಂತರಂಗದಲ್ಲೊಂದು ಅರ್ಧ ದೇಹದಲ್ಲೊಂದು
ಚಿಂತೆಗನುಗೊಳಲೇಕೆ ಪಂಚೈವರಿರಲು
ಕಂತುಪಿತ ಕಾಗಿನೆಲೆ ಆದಿಕೇಶವರಾಯ ಲಕ್ಷ್ಮೀ-
ಕಾಂತ ನಮ್ಮನಲ್ಲಿಗೆ ಕರೆಕಳುಹುವ ತನಕ ||೩||
*******