Showing posts with label ಶ್ರೀಗುರುರಾಘವೇಂದ್ರ ಶರಣರ ಸುರ jayesha vittala. Show all posts
Showing posts with label ಶ್ರೀಗುರುರಾಘವೇಂದ್ರ ಶರಣರ ಸುರ jayesha vittala. Show all posts

Friday, 27 December 2019

ಶ್ರೀಗುರುರಾಘವೇಂದ್ರ ಶರಣರ ಸುರ ankita jayesha vittala

ಶ್ರೀ ಜಯೇಶವಿಠಲದಾಸರ ಕೃತಿ 

 ರಾಗ ಮೋಹನ     ಆದಿತಾಳ 

ಶ್ರೀಗುರುರಾಘವೇಂದ್ರ ಶರಣರ ಸುರ । 
ತರುವೆ ಕರುಣಸಾಂದ್ರ ॥ ಪ ॥
ಧರೆಯೊಳು ನಿನ್ನ ಶ್ರೀಚರಣಕಮಲಪ್ರಭ ।
ಮೆರೆವೋದು ಬಹುಪರಿ ಉದ್ಧರಿಸು ಈ ಶರಣನ್ನ॥ಅ ಪ॥

ವಿಮಲಸುಕೃತ ಸ್ವರೂಪ ದರುಶನ ಮಾತ್ರದಿ ಭವ । 
ಶ್ರಮಹರಿಸುವ ಪ್ರತಾಪ ।
ರಮೆಅರಸನ ಗುಣಸಮುದಾಯದೊಳು ಮಗ್ನ ।
ಭ್ರಮೆರಹಿತ ಸ್ಥಿರಚಿತ್ತ ನಮೊ ನಮೊ ನಮೋ ನಿನಗೆ ॥
ಅಮಿತಮತಿಯ ಕರುಣಕವಚವ । 
ಅಮಿತಕಾಲದಿ ಕೊಟ್ಟು ಮೆರೆಯುವ ।
ಅಮಿತ ಮಂಗಳದಾಯಿ ತ್ವತ್ಪದ । 
ಕಮಲ ವೈಭವ ಸಲಹಲೆನ್ನನು ॥ 1 ॥

ಪಾವನ ಯತಿರನ್ನ ಲಾಲಿಸು ವಾಕು । ಸಾವಧಾನದಿ ಘನ್ನ ।
ಭೋವಿಧ ಭವಬವಣೆ ದಾವಾಗ್ನಿಯೊಳು ನೊಂದೆ ।
ಶ್ರೀವರನದಾಸ ಕಾವ ದೃಷ್ಟಿಲಿ ನೋಡು ॥
ದೇವದೇವನ ನಿತ್ಯಮಂಗಳ । 
ಭಾವ ರೂಪಗುಣಕ್ರಿಯಂಗಳ ।
ಆವಕಾಲಕು ಬಿಡದೆ ನೋಡುವ ।
ಭೂ ವಿಬುಧಮಣಿ ಪಾಲಿಸೆನ್ನನು || 2 ||

ತುಂಗಾತೀರನಿವಾಸ ರಾಘವೇಂದ್ರ ಗುರು । 
ತುಂಗಮಹಿಮ ನಿರ್ದೋಷ ।
ಮಂಗಳಸಮೂಹಾರಿ ಗಂಗಾಪಿತನ ಕೂಡಿ ।
ತುಂಗಪೂಜೆಯಗೊಂಡ್ವರಂಗಳ ಬೀರುವ ॥
ತಿಂಗಳಾಸ್ಯನೆ ತೀರ್ಥಪಾದನೆ । 
ಭಂಗ ಬಗೆಯನು ಬಲ್ಲ ಮಹಾತ್ಮ।
ರಂಗ ಜಯೇಶವಿಠಲ ದೇವನ । 
ಸಂಗ ನೀಡುವ ಕೃಪೆಯ ಮಾಳ್ಪದು ॥ 3 ॥
*********