Showing posts with label ಸಿರಿಅರಸಂಗೆ ನಮೋಗುರುಮಧ್ವವರಿಯ prasannavenkata. Show all posts
Showing posts with label ಸಿರಿಅರಸಂಗೆ ನಮೋಗುರುಮಧ್ವವರಿಯ prasannavenkata. Show all posts

Monday, 18 November 2019

ಸಿರಿಅರಸಂಗೆ ನಮೋಗುರುಮಧ್ವವರಿಯ ankita prasannavenkata

by ಪ್ರಸನ್ನವೆಂಕಟದಾಸರು
ಸಿರಿಅರಸಂಗೆ ನಮೋಗುರುಮಧ್ವವರಿಯ ವರಸ್ತುತಿ ಪ್ರಿಯ ಪ.

ನಿಗಮಾಗಮಾಗಣಿತ ಸುವಿದಿತ ಸುಗುಣ ವಿಹಗಗಮನಘರಿಪು ಉರಗಶಯನ 1

ಅಜನುತ ರಾಜರವಿ ವಿಜಿತ ಪ್ರತೇಜಕುಜರಜನೀಚರಹನನಮೂಜಗಜೀವನ2

ತನ್ನ ವಂದಿಪರನ್ನು ಹೊರೆವನ್ಯಭಯವನ್ನೋಡಿಪಎನ್ನಯ್ಯ ಪ್ರಸನ್ನವೆಂಕಟನಾಥ ದಾತಾರ 3
******