Showing posts with label ಜಯ ಮಂಗಳಂ ನಿತ್ಯ ಶುಭ purandara vittala madhwacharya stutih. Show all posts
Showing posts with label ಜಯ ಮಂಗಳಂ ನಿತ್ಯ ಶುಭ purandara vittala madhwacharya stutih. Show all posts

Friday, 27 December 2019

ಜಯ ಮಂಗಳಂ ನಿತ್ಯ ಶುಭಮಂಗಳಂ ಆನಂದ purandara vittala madhwacharya stutih

ಪುರಂದರದಾಸರು
ಜಯ ಮಂಗಳಂ ನಿತ್ಯ ಶುಭಮಂಗಳಂ ಪ 

ಮಂಗಳವು ಆನಂದ ತೀರ್ಥ ಗುರುರಾಯರಿಗೆಮಂಗಳವು ಮಧುರವಾಕ್ಯ ಸುಭಾಷ್ಯಗೆ ಅಪಅಂಜನೆಯ ಗರ್ಭಸಂಜಾತ ವಿಖ್ಯಾತನಿಗೆಸಂಜೀವಿನಿಯ ತಂದ ಹನುಮಂತಗೆ ||ಸಂಜೆಯಲಿ ಲಂಕಿಣಿಯನಂಜಿಸಿ ಪೊಕ್ಕ ಪ್ರಭಂಜನನ ಕುವರ ಮಂಜುಳ ವಾಕ್ಯಗೆ 1

ದ್ವಾಪರದಿ ಕುಂತಿಯೊಳ್ ಪರ್ವತದಿ ಜನಿಸಿದಗೆಪಾಪಿ ಜರಾಸಂಧನನು ಸೀಳ್ದವಗೆ ||ದ್ರೌಪತಿಯ ಸೌಗಂಧಿ ಕುಸುಮವನು ತಂದವಗೆಶ್ರೀಪತಿಯ ದಾಸ ಶ್ರೀ ಭೀಮಸೇನನಿಗೆ 2

ಕಲಿಯುಗದಿ ಶಂಕರನ ದುರ್ಮತವ ತರೆದವಗೆಖಳ ಬೌದ್ಧ ಚಾರ್ವಾಕ ಮತವ ಗೆಲಿದವಗೆ ||ಒಲಿದು ಸಚ್ಛಾಸ್ತ್ರವನು ಸಾಧುಗಳಿಗೊರೆದವಗೆಸು¯ಭ ಪುರಂದರವಿಠಲನ ದಾಸಗೆ 3
***

pallavi

jaya mangaLam nitya shubha mangaLam

caraNam 1

mangaLam Ananda tIrtta gururAyarige mangaLam madhura nuDi sambhASyage
mangaLam maithilige anguliyanittavage mangaLam jaya vIra madhvamunige

caraNam 2

anjaneya garbhasanjAta vikhyAtanige sanjIvanava tanda hanumantage
anjatanda bhayankara kapigaLige tOridage kanjAkSa rAmana bhajisuvavage

caraNam 3

dvAparadi kuntiya garbhadali janisudali pApi daityaranella sILidavage
draupadige saugandhi kusumavane tandavage shrIpatiya dASa bhImasEnage

caraNam 4

kaliyuga shankarana durmatava muridavage khaLa bauddha cArvAka mata gelidavage
olidu sacchAstravanu sAdhugaLigoredavage sulabha purandara viTTalana dAsage
***