Showing posts with label ವಿಜಯರಾಯರ ದಿನದಿ ವಿಜಯ ಪಯಣವ gopalakrishna vittala vijaya dasa stutih. Show all posts
Showing posts with label ವಿಜಯರಾಯರ ದಿನದಿ ವಿಜಯ ಪಯಣವ gopalakrishna vittala vijaya dasa stutih. Show all posts

Monday, 2 August 2021

ವಿಜಯರಾಯರ ದಿನದಿ ವಿಜಯ ಪಯಣವ ankita gopalakrishna vittala vijaya dasa stutih

ವಿಜಯರಾಯರ ದಿನದಿ ವಿಜಯ ಪಯಣವ ಮಾಳ್ಪೆ

ನಿಜದಾಸಕೂಟ ಪಥದಿ ಪ.


ವಿಜಯಸಖಪ್ರಿಯ ತಂದೆ ಮುದ್ದುಮೋಹನ ಗುರು

ವಿಜಯವಿತ್ತುದ್ಧರಿಸಲಿ ದಯದಿ ಅ.ಪ.


ಧರೆಯಲ್ಲಿ ಪುಟ್ಟಿ ಮುವ್ವತ್ತಾರು ವತ್ಸರವು

ಸರಿದುದೀ ಬಹುಧಾನ್ಯಕೆ

ವರಗುರು ಉಪದೇಶ ಅಂಕಿತವು ಲಭಿಸಿ ಎಂ

ಟೊರುಷವಾಗಲಿಂದಿಗೆ

ಪರಮಕೃಪೆಯಿಂದ ದಾಸತ್ವ ಸಿದ್ಧಿಸಲೆಂಬ

ವರವಿತ್ತ ಕಾಲ ಒದಗೆ

ನರಹರಿಯೆ ನಿನ್ನ ಚರಣವೆ ಎನಗೆ ಗತಿ ಎಂದು

ನೆರೆ ನಂಬಿ ಪೊರಟೆನೀಗ ಬೇಗ 1

ಸರುವ ವಸ್ತುಗಳಲ್ಲಿ ಇರುವ ಅಭಿಮಾನ ಶ್ರೀ

ಹರಿ ನಿನ್ನ ಪದದಲಿರಿಸು

ವರ ಗುರು ಚರಣದಲಿ ಸದ್ಭಕ್ತಿ ಸರ್ವದಾ

ಸ್ಥಿರವಾಗಿ ನೆಲೆಯಗೊಳಿಸು

ಹೊರಗೊಳಗೆ ಹಿಂದುಮುಂದರಘಳಿಗೆ ಬಿಡದೆ ನೀ

ನಿರುತದಲಿ ಸಂರಕ್ಷಿಸು

ಹರಿದಾಸ ಮಾರ್ಗದಲಿ ಹರುಷದಲಿ ನಲಿವಂತೆ

ವರಮತಿಯ ದಯಪಾಲಿಸು ಹರಿಯೆ 2

ಗುರುಕರುಣ ಕವಚ ತೊಟ್ಟಿರುವ ಎನಗಿನ್ನಾವ

ಪರಿಯ ಭಯವಿಲ್ಲವೆಂದು

ಸ್ಥಿರವಾಗಿ ನಂಬಿ ಪೊರಮಡುವೆನೀ ಶುಭದಿನದಿ

ಗುರುವಾರ ಗುರು ಕೃಪೆಯಲಿ

ಪರಿಪರಿಯ ದುಷ್ಕರ್ಮ ಪರಿಹರಿಸಿ ಕಾಯುವೊ

ಗುರುಚರಣ ಧ್ಯಾನಬಲದಿ

ಮರುತಾಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ

ಕರುಣದಲಿ ಒಲಿದು ಪೊರೆಯೊ ಹರಿಯೆ 3

****