ಪುರಂದರದಾಸರು
ರಾಗ ಸಾವೇರಿ ಛಾಪು ತಾಳ
ಪುಟ್ಟಿಸಬೇಡೆಲೊ ದೇವ
ಎಂದೆಂದಿಗು ಇಂಥ ||ಪ||
ಭ್ರಷ್ಟನಾಗಿ ತಿರುಗುವ
ಪಾಪಿ ಜೀವನವ ||ಅ.ಪ||
ನರರ ಸ್ತುತಿಸಿ ನಾಲಿಗೆ ಬರಿದು ಮಾಡಿ ಉ-
ದರಪೋಷಣೆಗಾಗಿ ಇವರವರೆನ್ನದೆ
ಧರೆಯೊಳು ಲಜ್ಜೆ ನಾಚಿಕೆಗಳನೀಡಾಡಿ
ಪರರ ಪೀಡಿಸಿ ತಿಂಬ ಪಾಪಿ ಜೀವನವ ||
ಎಂಟು ಗೇಣು ಶರೀರ ಒಂದು ಗೇಣು ಮಾಡಿ ಕೊಂಡು
ಪಂಟಿಸುತ್ತ ಮೆಲ್ಲ ಮೆಲ್ಲನೆ ಪೋಗಿ
ಗಂಟಲ ಸೆರೆಗಳುಬ್ಬಿ ಕೇಳುವ ಸಂಕಟ ವೈ-
ಕುಂಠಪತಿ ನೀನೇ ಬಲ್ಲೆ ಕಪಟ ನಾಟಕನೆ ||
ಲೆಕ್ಕದಲ್ಲಿ ನೀ ಮೊದಲು ಮಾಡಿದ್ದಲ್ಲದೆ ಒಮ್ಮಾ-
ನಕ್ಕಿ ವೆಗ್ಗಳವಾಗಿ ಕೊಡುವರುಂಟೆ
ಕಕ್ಕುಲತೆ ಪಟ್ಟರಿಲ್ಲ ಕರುಣಾಳು ನಿನ್ನ ಮೊರೆ-
ಹೊಕ್ಕೆನು ಸಲಹೊ ಶ್ರೀ ಪುರಂದರವಿಠಲ ||
***
ರಾಗ ಸಾವೇರಿ ಛಾಪು ತಾಳ
ಪುಟ್ಟಿಸಬೇಡೆಲೊ ದೇವ
ಎಂದೆಂದಿಗು ಇಂಥ ||ಪ||
ಭ್ರಷ್ಟನಾಗಿ ತಿರುಗುವ
ಪಾಪಿ ಜೀವನವ ||ಅ.ಪ||
ನರರ ಸ್ತುತಿಸಿ ನಾಲಿಗೆ ಬರಿದು ಮಾಡಿ ಉ-
ದರಪೋಷಣೆಗಾಗಿ ಇವರವರೆನ್ನದೆ
ಧರೆಯೊಳು ಲಜ್ಜೆ ನಾಚಿಕೆಗಳನೀಡಾಡಿ
ಪರರ ಪೀಡಿಸಿ ತಿಂಬ ಪಾಪಿ ಜೀವನವ ||
ಎಂಟು ಗೇಣು ಶರೀರ ಒಂದು ಗೇಣು ಮಾಡಿ ಕೊಂಡು
ಪಂಟಿಸುತ್ತ ಮೆಲ್ಲ ಮೆಲ್ಲನೆ ಪೋಗಿ
ಗಂಟಲ ಸೆರೆಗಳುಬ್ಬಿ ಕೇಳುವ ಸಂಕಟ ವೈ-
ಕುಂಠಪತಿ ನೀನೇ ಬಲ್ಲೆ ಕಪಟ ನಾಟಕನೆ ||
ಲೆಕ್ಕದಲ್ಲಿ ನೀ ಮೊದಲು ಮಾಡಿದ್ದಲ್ಲದೆ ಒಮ್ಮಾ-
ನಕ್ಕಿ ವೆಗ್ಗಳವಾಗಿ ಕೊಡುವರುಂಟೆ
ಕಕ್ಕುಲತೆ ಪಟ್ಟರಿಲ್ಲ ಕರುಣಾಳು ನಿನ್ನ ಮೊರೆ-
ಹೊಕ್ಕೆನು ಸಲಹೊ ಶ್ರೀ ಪುರಂದರವಿಠಲ ||
***
pallavi
puTTisa bEDalo dEva endendigu intha bhraSTanAgi tiruguva pApi jIvanava
caraNam 1
narara stutisi nAlige baridu mADi udarapOSaNegAgi ivaravarennade
dhareyoLu lajje nAcikegaLa nIrADi parara piDisi timba pApi jIvanava
caraNam 2
eNTu kENu sharIra ondu kENu mADi koNDu vaNTiutta mella mellane pOgi
gaNTala seregaLubbi kELuva sankaTa vaikuNTha pati nInE balle kapaTa nATakane
caraNam 3
lekkadalli nI modalu mADiddallade ommAnakki veggaLavAgi koDuvaruNTe
kakkulate paTTarilla karuNALu ninna mare hokkenu salaho shrI purandara viTTala
***
ಪುಟ್ಟಿಸಬೇಡವೊ ದೇವ ಎಂದಿಗು ಇಂಥ-|
ಕಷ್ಟಪಟ್ಟು ತಿರುಗುವ ಪಾಪಿ ಜೀವನವ ಪ
ನರರ ಸ್ತುತಿಸಿ ನಾಲಗೆ ಬರಡು ಮಾಡಿಕೊಂಡು |ದರಪೋಷಣೆಗಾಗಿ ಅವರಿವರೆನದೆ ||ಧರೆಯೊಳು ಲಜ್ಜೆ - ಮಾನಗಳೆಲ್ಲವೀಡಾಡಿ |ಪರರ ಪೀಡಿಸಿ ತಿಂಬ ಪಾಪೀ ಜೀವನವ 1
ಎಂಟುಗೇಣು ಶರೀರವ ಒಂದು ಗೇಣು ಮಾಡಿಕೊಂಡು|ಪಂಟಿಸುತ್ತ ಮೆಲ್ಲಮೆಲ್ಲನೆ ಪೋಗಿ ||ಗಂಟಲಸೆರೆಗಳುಬ್ಬಿ ಕೇಳುವ ಸಂಕಟ ವೈ-|ಕುಂಠಪತಿ ನೀನೆ ಬಲ್ಲೆ ಕಪಟನಾಟಕನೆ 2
ಲೆಕ್ಕದಲಿ ನೀ ಮೊದಲು ಮಾಡಿದಷ್ಟಲ್ಲದೆ |ಸಖ್ಯಕೆವೆಗ್ಗಳಕೊಡುವರುಂಟೆ ||ಕಕ್ಕುಲತೆಪಟ್ಟರಿಲ್ಲ ಕರುಣಾಳು ನಿನ್ನ ಮೊರೆ |ಹೊಕ್ಕೆ ಎನ್ನನು ಕಾಯೊ ಪುರಂದರವಿಠಲ 3
*********