..
Kruti by ಸಿರಿಗುರುತಂದೆವರದವಿಠಲರು sirigurutandevarada vittala
ವಂದಿಸುವೆ ಗುರುವರಾ ವಂದಿಸುವೆ ಗುರುವರಾವಂದಿಸುವೆ ಗುರುವರಾ ಮಂದಮತಿಯ ಪಾಲಿಸೆಂದು ಪ.
ತ್ರಿವಿಧ ಜೀವರಲ್ಲಿ ನಿಂತು ತ್ರಿವಿಧವಸ್ಥೆಯಲ್ಲಿ ಬಿಡದೆತ್ರಿವಿಧ ಕರ್ಮವನ್ನೆ ಗೈಸಿ ತ್ರಿವಿಧ ಫಲವ ಕೊಡಿಸುವವನೇ 1
ತಾತ ರಾಮನಾಜ್ಞೆಗೊಂಡು ಖ್ಯಾತಿಯಿಂದ ಜಲಧಿ ದಾಟಿಮಾತೆಗುಂಗುರವಿತ್ತು ಪ್ರೇಮ ವಾರ್ತೆಯನ್ನು ಪೇಳಿದವಗೆ 2
ಭೀಮನಾಮದಿಂದ ಕರೆಸಿ ಭೂವಿಯಲ್ಲಿ ಮೆರೆವ ಖಳರಧಾಮವನ್ನೆ ಸೀಳಿ ಸಾರ್ವಭೌಮಕೃಷ್ಣಗರ್ಪಿಸಿದಗೆ 3
ಮಧ್ಯಗೇಹರಲ್ಲಿ ಜನಿಸಿ ಅದ್ವೈತ ಮತವನ್ನೆಲ್ಲ ಕೆಡಹಿಶುದ್ಧಮತವ ಸ್ಥಾಪಿಸಿದ ಮಧ್ವಮುನಿರಾಯನಿಗೆ 4
ತಂದೆವರದವಿಠಲನ್ನ ಒಂದೆ ಮನದಿ ಜಪಿಸುತಿರುವಇಂದುಶೇಖರಾದಿ ಸುರವೃಂದ ವಂದ್ಯನಾಥವಹಗೆ 5
***