Showing posts with label ಭಜಿಸು ಮನವೆ ಭಜಿಸು ಮನವೆ mahipati. Show all posts
Showing posts with label ಭಜಿಸು ಮನವೆ ಭಜಿಸು ಮನವೆ mahipati. Show all posts

Wednesday, 11 December 2019

ಭಜಿಸು ಮನವೆ ಭಜಿಸು ಮನವೆ ankita mahipati

ಭೂಪ್ ರಾಗ ದಾದರಾ ತಾಳ

ಭಜಿಸು ಮನವೆ ಭಜಿಸು ಮನವೆ
ಅಜಸುರಮುನಿವಂದಿತ ಪಾದ
ಪೂಜಿಸು ನಿಜಸ್ವರೂಪ ನಿತ್ಯ
ಸುಜನಮನೋಹರ ||ಪ||

ಪರಮಪುರುಷ ಪರಂಜ್ಯೋತಿ
ಪಾರಾವಾರ ಹರಿಗೋಪಾಲ
ಕರುಣಾಕೃಪಾಲ ಮೂರುತಿ
ಸ್ವಾಮಿ ಸಿರಿಲೋಲನ ||ಅ.ಪ||

ಅತೀತ ಗುಣಾನಂತಮಹಿಮ
ಪತಿತಪಾವನ ಪೂರ್ಣ
ಸತತ ಸದೋದಿತವಾದ
ಅತಿಶಯಾನಂದನ ||೧||

ಅವ್ಯಕ್ತ ಅವಿನಾಶ ಸು-
ದಿಯ ಸುಪವಿತ್ರದಾಗರ
ಘಮಘಮಿಸುವ ದಿವ್ಯತೇಜ
ರವಿಕೋಟಿ ಕಿರಣನ ||೨||

ಅನಾಥಬಂಧು ಅನುದಿನ
ಅಣುರೇಣು ತೃಣಪೂರ್ಣ
ಪ್ರಾಣದೊಡೆಯ ಮಹಿಪತಿ
ದೀನದಯಾಳುನ ||೩||
********