ಪುರಂದರದಾಸರು
ಹರಿ ಪದ ಯುಗಲವ ನಿತ್ಯ ನೆನೆದವೆಗೆ |ಪರಮಪದವಿಯೇ ಸಾಕ್ಷಿ ||ಹರಿ -ಗುರು ದೂಷಣ ಮಾಡಿದ ಮನುಜಗೆ |ನರಕರೌರವವೆ ಸಾಕ್ಷಿ ಪ.
ಕಡುಭಕ್ತಿಯಲಿ ಕೃಷ್ಣನÀ ನೆನೆದರೆ |ನಡೆಯಲಿ ಸತ್ಯವೆ ಸಾಕ್ಷಿ ||ದೃಡ ಭಕುತಿಯಿಂದ ಉಣಬಡಿಸಿದವಗೆ |ಷಡುರಸಾನ್ನವೇ ಸಾಕ್ಷಿ 1
ತಾನೊಂದುಂಡು ಪರರಿಗೊಂದಿಕ್ಕುವಗೆ |ಗುಲ್ಮರೋಗವೇ ಸಾಕ್ಷಿ ||ಹೀನನಾಗಿ ಹಿರಿಯರನು ದೂಷಿಪಗೆ |ಹೀನ ನರಕವೇ ಸಾಕ್ಷಿ 2
ಕನ್ಯಾದಾನವ ಮಾಡಿದವಗೆ ದಿವ್ಯ |ಹೆಣ್ಣಿನ ಭೋಗವೆ ಸಾಕ್ಷಿ ||ಕನ್ಯಾದಾನವ ಮಾಡದ ಮನುಜಗೆ |ಹೆಣ್ಣಿನ ದೈನ್ಯವೇ ಸಾಕ್ಷಿ 3
ಅನ್ನದಾನ ಮಾಡಿದ ಮನುಜಗೆ ದಿ - |ವ್ಯಾನ್ನವನುಂಬುದೆ ಸಾಕ್ಷಿ ||ಅನ್ನದಾನ ಮಾಡದ ಮನುಜಗೆ ತಿರಿ -ದುಣ್ಣುತಿರುವುದೇ ಸಾಕ್ಷಿ 4
ಕ್ಷೇತ್ರದಾನ ಮಾಡಿದ ಮನುಜಗೆ ಏತ - |ಛತ್ರವನಾಳ್ವುವದೆ ಸಾಕ್ಷಿ ||ಪಾತ್ರವರಿತು ಧರ್ಮಮಾಡಿದವಗೆ ಸತ್ -ಪುತ್ರರಾಗುವುದೆ ಸಾಕ್ಷಿ 5
ಕಂಡ ಪುರುಷರಿಗೆ ಕಣ್ಣಿಡುವ ನಾರಿಗೆ |ಗಂಡನು ಕೇಳುವುದೆ ಸಾಕ್ಷಿ ||ಪುಂಡನಾಗಿ ಪರಸ್ತ್ರೀಯರ ಸೇರುವಗೆ |ಹೆಂಡಿರ ಕಳೆವುದೆ ಸಾಕ್ಷಿ 6
ಭಕ್ತಿಯರಿಯದ ಅಧಮನಿಗೊಂದು |ಕತ್ತಲಮನೆಯೇ ಸಾಕ್ಷಿ ||ಮುಕ್ತಿಪಡೆವುದಕೆ ಪುರಂದರವಿಠಲನ |ಭಕ್ತನಾಗುವದೆ ಸಾಕ್ಷಿ 7
************