Showing posts with label ಳಳ- RSS- ಸಾಸಿರ ಪದಯುಗ ಸಾಸಿರನೇತ್ರ others rss. Show all posts
Showing posts with label ಳಳ- RSS- ಸಾಸಿರ ಪದಯುಗ ಸಾಸಿರನೇತ್ರ others rss. Show all posts

Friday, 24 December 2021

ಸಾಸಿರ ಪದಯುಗ ಸಾಸಿರನೇತ್ರ others rss

   

RSS song .

ಸಾಸಿರ ಪದಯುಗ ಸಾಸಿರನೇತ್ರ ಸಾಸಿರ ಸಾಸಿರ ಶೀರ್ಷಾ

ಸಾಕ್ಷಾತ್ಕರಿಸಿದೆ ಅಭಂಗ ಏಕತೆ ಸಮರಸತೆಯ ಸಂದೇಶ

ವ್ಯಾಪಿಸಿ ವಿಶ್ವದ ತಲೆ ಎತ್ತಿಹ ಹೇ ಅಸೀಮ ಸಮಾಜ ಪುರುಷ        ||ಪ||


ಎಲ್ಲಿದೆ ತರತಮ ಜಾತಿನೀತಿ ಕುಲ ಎಲ್ಲಿದೆ ಎಲ್ಲಿದೆ ಭಿನ್ನಮತ

ಹಿಂದುತ್ವದಿ ನಿಜ ಬಾಂಧವರೆನಿಸಲು ಇಲ್ಲಿದೆ ಇಲ್ಲಿದೆ ಕರ್ಮಪಥ    ||೧||


ಸೃಷ್ಟಿಗೆ ಗೋಚರ ನವ ಮನ್ವಂತರ ಸೃಷ್ಟಿ

ಸಿದ್ದಿಯ ಮಾರ್ಗಕೆ ಉದಯಿಸಿತೋ ಶಿವಶಕ್ತಿ

ಸಕಲ ಜೀವಕುಲ ಸುಖವ ಕಾಣಲಿದೆ

ಪ್ರಕೃತಿಗೆ ಮರು ವಿಶ್ವಾಸ                        ||೨||


ಆರ್ಷ ಪರಂಪರೆ ವೀರ ವಾರಸಿಕೆ ಕಲೆತು

ಬ್ರಹ್ಮ ತೇಜವಿದು ಕ್ಷಾತ್ರ ಕಾರ್ಯದೊಳು ಬೆರೆತು

ಸಂಘರ್ಷವಾಗಲಿ ಶಾಂತಿಯೆ ಆಗಲಿ

ಸಕ್ಷಮ ಹಿಂದು ವಿಕಾಸ                        ||೩||


ವಿಕೃತಿಯಳಿಸಿ ಸಂಸ್ಕೃತಿಯ ಬೆಳೆವ ಸಂರಚನೆ

ಕೃತಿಗಿಳಿದಿದೆ ಸತ್‍ಕೃತಿಯಾಗಿದೆ ಸಂಘಟನೆ

ಲೋಕಶಕ್ತಿ ನೀ ವಿಜಯಶಾಲಿನಿ

ವಿಶ್ವಮಂಗಲೋದ್ದೇಶ                        ||೪||

***

sAsira padayuga sAsiranEtra sAsira sAsira SIrShA

sAkShAtkariside aBaMga Ekate samarasateya saMdESa

vyApisi viSvada tale ettiha hE asIma samAja puruSha        ||pa||


ellide taratama jAtinIti kula ellide ellide Binnamata

hiMdutvadi nija bAMdhavarenisalu illide illide karmapatha    ||1||


sRuShTige gOcara nava manvaMtara sRuShTi

siddiya mArgake udayisitO SivaSakti

sakala jIvakula suKava kANalide

prakRutige maru viSvAsa                        ||2||


ArSha paraMpare vIra vArasike kaletu

brahma tEjavidu kShAtra kAryadoLu beretu

saMGarShavAgali SaaMtiye Agali

sakShama hiMdu vikAsa                        ||3||


vikRutiyaLisi saMskRutiya beLeva saMracane

kRutigiLidide sat^kRutiyAgide saMGaTane

lOkaSakti nI vijayaSAlini

viSvamaMgalOddESa                            ||4||

***