Showing posts with label ಶ್ರೀಗುರು ಪರಮಗುರು ವಿಜಯ ಪುರಂದರ gopalakrishna vittala guru stutih. Show all posts
Showing posts with label ಶ್ರೀಗುರು ಪರಮಗುರು ವಿಜಯ ಪುರಂದರ gopalakrishna vittala guru stutih. Show all posts

Monday, 2 August 2021

ಶ್ರೀಗುರು ಪರಮಗುರು ವಿಜಯ ಪುರಂದರ ankita gopalakrishna vittala guru stutih

ಶ್ರೀ ಗುರು ಪರಮಗುರು ವಿಜಯ ಪುರಂದರ ಗುರು

ನಾಗೇಶಾವೇಶ ಗುರು ಶ್ರೀಪಾದ ರಾಯ ಗುರು

ಯೋಗಿ ಟೀಕಾರ್ಯ ಗುರು ಶ್ರೀಮದಾಚಾರ್ಯ ಗುರು

ನಾಗಶÀಯನ ನೀನು ಸಕಲ ಜಗದ್ಗುರು

ಈತ ಗುರು ಸಂತತಿಗೆ ವಂದೀಸಿ ತಾತ್ವಿಕರ

ಜಾಗು ಮಾಡದೆ ನಮಿಪೆ e್ಞÁನ ಪ್ರದಾತರೆಂದು

ಆಗಮ ಪೌರಾಣ ಶೃತಿ ತತಿಗಳೊಳೆಲ್ಲ

ಆಗುವಳಭಿಮಾನಿ ಭಾರತೀದೇವಿ ಎಂದು

ಈಗ ಈ ಮಹಿಮಳ ಚರಿತೆ ಬುದ್ಧಿಗೆ ದೇವಿ

ತಾಗಿಸಿದಂದದಿ ಸಾಗಲಿ ನುಡಿವುದು

ನಾಗರಾಜನ ಜನನಿ ಸ್ವಪ್ನದಿ ಸುಳಿದಳು

ಕೂಗಿದೆ ಅಯೋನಿಜೆ ದುಃಖರಹಿತಳೆಂದು

ಭಾಗವತರ ಕಾಯ್ವ ಭಾಗ್ಯ ಸಂಪನ್ನದೇವಿ

ಯೋಗಿ ಜನರಿಗೆಲ್ಲ ಗುರುಪತ್ನಿ ಎಂದೆನಿಪೆ

ಆಗಾಗ ಅವತರಿಸಿ ಅನಿಲನ ಕಾರ್ಯಕ್ಕೆ

ಆಗುವೆ ಸಹಕಾರಿ ಅಸುರರ ಸಂಹಾರಿ

ಶ್ರೀ ಗುರೋರ್ಗುರು ಹರಿ ಗೋಪಾಲಕೃಷ್ಣವಿಠಲ

ಭಾಗವತರ ಕಾಯ್ವ ನಿನ್ನದ್ವಾರದಿ ಸ್ಮರಿಸೇ 1

ಕೃತಿಸುತೆ ಕೊಂಡದಿ ಉದಿಸಿ ಸುತೆ ಎನಿಸಿದೆ ದ್ರುಪದನಿಗೆ

ಚ್ಯುತರಹಿತ ಯೌವನಯುತೆ ಐವರಿಗರಸಿಯು ಆದೆ

ಪ್ರತಿಯಿಲ್ಲದ ಪತಿವ್ರತೆ ಸುರತತಿ ಜನನಿಯು ನೀನೌ ಮಾ-

ರುತ ಸುತನಲ್ಲದೆ ನಿನಗಿನ್ನಿತರರ ಸಂಗವು ಉಂಟೆ

ಸುತರಂದದಿ ನಾಲ್ವರ ತಿಳಿದತಿಶಯದಲಿ ಅವರವರಾ

ಸತಿಯರ ನಿನ್ನೊಳಗಡಿಗಿಸಿ ರತಿ ಕಾಲದಲೊಲಿದಿತ್ತೆ

ಮತಿವಂತರಿಗಲ್ಲದೆ ಪ್ರತಿ ಜನರಿಗೆ ಮೋಹಕವು

ಕ್ಷಿತಿಯೊಳು ನೀನವತರಿಸೀ ಕ್ಷಿತಿಗೇ ತೋರಿದ ಲೀಲೆ

ಅತಿ ಸೌಭಾಗ್ಯದಿ ಮೆರೆದೆ ಕ್ಷಿತಿಪತಿಸೂಯಾಗದಲಿ

ಖತಿಗೊಳ್ಳಲು ಖಳ ಜನರು ಸ್ಥಿತ ಸಾಮ್ರಾಜ್ಯವ ಕಂಡು

ಕ್ಷಿತಿಭಾರವನಿಳುಹಲು ಶ್ರೀಪತಿ ಪತಿಮನವರಿಯುತ ಕುರು

ಪತಿಸಭೆಯಲಿ ಭ್ರಮಿಸುತ ಜಾರುತ ಸರಸಿಯೋಳ್ ಬೀಳುತಿರೆ

ಪತಿ ಶ್ರೀಪತಿ ಮೊಗವೀಕ್ಷಿಸಿ ಅತಿ ಹಾಸ್ಯದಿ ನೀ ನಗಲು

ಖತಿಗೊಳ್ಳಲು ಕುರುಪತಿ ಕಲಕಿತು ದ್ವೇಷದ ಭಾವಗಳು

ಕ್ಷಿತಿ ಪತಿ ಭಾರದ ಹರಣಕೆ ಮೂಲಾಯಿತು ನಿನ್ನಯ ನಗೆ ಕಿಡಿ ತಾ

ಕಾತುರಕ್ಕಸ ತರುಗಳಿಗೆ ಸೋಕಿತು ಕಾಮನ ಬಿಸಿಯು

ಮತಿಹೀನರು ನಿನ್ನನು ಬಯಸುತ ಬರೆ ದ್ವೇಷಾಗ್ನಿ ಜ್ವಲಿ

ಸುತ ವಾಯು ಸಹಾಯದಲಿ ಹುತಗೈಸಿದೆ ಖಳತತಿಯ

ಪತಿಯಂತರ್ಗತ ಕೃಷ್ಣನ ನುತಿಸುತ ಭಕ್ತ್ಯಾಜ್ಯಾಹುತಿ

ಕ್ರತು ಎಂದರಿತರ್ಪಿಸುತಲಿ ಕ್ಷಿತಿ ಭಾರವನಿಳುಹಿಸಿದೆ

ಹಿತತಂಗಿಯೆ ಗೋಪಾಲಕೃಷ್ಣವಿಠ್ಠಲಗೇ ನೀ

ಪ್ರತಿಯುಂಟೆ ನಿನಗೆ ಈ ಕ್ಷಿತಿಯೊಳು ನಾಕಾಣೆ 2

ಮಡಿಯದೆ ದುರ್ಯೊüೀಧನನು ಮುಡಿಯನು ಕಟ್ಟೆನು ಎಂಬ

ದೃಢ ಸಂಕಲ್ಪಳೆ ಪುಷ್ಪ ಮುಡಿಯಲಪೇಕ್ಷಿಸಿದೆ ನೀ

ಒಡೆಯುವರುಂಟೇ ಇದರ ಒಡಲಿನ ಮರ್ಮವ ದೇವಿ

ಒಡೆಯ ವೃಕೋದರ ನಿನ್ನ ನುಡಿ ಕೇಳುತ ವನ ಪೊಕ್ಕು

ಮಡುಹುತ ಯಕ್ಷರ ತಂದು ಮುಡಿಸಿದ ಸೌಂಗಂಧಿಕವ

ಪೊಡವಿಯೊಳ್ಹರಡಿತು ವಾರ್ತೆ ಒಡಲರಿಯದೆ ಜನತತಿಗೆ

ಪಿಡಿಯುತ ಕರದಲಿ ಪುಷ್ಪ ಒಡೆಯನ ಪ್ರೇಮದಿ ನೋಡಿ

ಮುಡಿಸಿದೆ ಸಿರಿಹರಿ ಮುಡಿಗೆ ಕಡು ಭಕ್ತಿಯೊಳಂತರದಿ

ಬಿಡುಬಿಡು ಬಿಂಕವ ಲೀಲೆ ಕೊಡು ಕೊಡು ಭಕ್ತಿಯ ಬಾಲೆ

ಪಡಿಸಾನಂದವ ಶೀಲೆ ನುಡಿಸಡಿಗಡಿಗ್ಹರಿ ಲೀಲೆ

ಒಡಗೂಡತ ಪತಿಯೊಡನೆ ನಡೆಸಿದ ಚರಿತೆಗಳೆಲ್ಲ

ಕಡು ಮೋಹವು ರಜ ತಮರಿಗೆ ಕೊಡುವುದು ಸುಖ ಸುಜನರಿಗೆ

ಪೊಡವಿಪತಿ ಗೋಪಾಲಕೃಷ್ಣವಿಠಲ ನಿನ್ನ

ನಡೆನುಡಿ ಮೆಚ್ಚುತ ನಡೆಸಿದ ಭಾರತ ನಾಟಕವÀ 3

ಆನಂದ e್ಞÁನಪೂರ್ಣೆ ಆಗಾಗ ಒದಗಿದ

ಹೀನ ದುಃಖದ ಸÉೂೀಂಕು ಉಂಟೆ ನಿನಗೆ ಇನ್ನು

ಪ್ರಾಣಪತಿಗಳೈವರೆದುರಲಿ ಖಳ ನಿನ್ನ

ಮಾನ ಹಾನಿಯ ಗೈಸೆ ಜಗವೆ ತಲ್ಲಣಿಸಿತು

ಮಾನಾಭಿಮಾನ ಬಿಟ್ಟು ಶ್ರೀನಿಧಿ ಗತಿ ಎನ್ನೆ

ಕಾಣಿಸಿತಾನಂತ ಅಕ್ಷಯ ವಸನವು

ಪ್ರಾಣಪಂಚಕ ಹರಿಯಾಧೀನವೆಂಬುವ ತತ್ವ

ಪ್ರಾಣಕ್ಕೆ ಪ್ರಾಣಬಿಂಬ ಸ್ವಾಮಿ ಎಂಬುವ ತತ್ವ

ಮಾನಾಭಿಮಾನ ತೊರೆದು ಪ್ರಾಣೇಂದ್ರಿಯವ ಜರಿದು

ಮಾನಸದಲಿ ಹರಿಯ ಸ್ಮರಿಸಿದರಕ್ಷಯ

ಸ್ಥಾನಪ್ರಾಪ್ತಿಯು ಎಂಬ ತತ್ವರಹಸ್ಯಗ-

ಳಾನು ಸೂಚಿಸೆ ನಿನ್ನ ಕೃತಿಯಲ್ಲದಿನ್ನಿಲ್ಲ

ದಾನವರೆಲ್ಲ ನಿನ್ನ ಕಾಮಿಸಿ ನೋಡಲವರು

ಏನೆಂಬೆ ಮಾಡಿದಂಥ ಅಲ್ಪಸ್ವಲ್ಪದ ಪುಣ್ಯ

ಕ್ಷೀಣಗೈಸುತ ಸೆಳೆದು ಹೀನ ಪಾಪದಿ ನೂಕಿ

ಹಾನಿಗೈಸಿದೆ ಪವಮಾನಸುತನಿಂದಲಿ

ಮಾನುನಿಮಣಿ ಸರ್ವಕ್ಷೇಮ ಪಾಲಿಪ ಭಕ್ತ-

ರಾನನದಲಿ ನೋಡೆ e್ಞÁನಾನಂದವನಿತ್ತು

ಹೀನ ನರಕದಿ ಬಿದ್ದ ಭ್ರಾತೃಸಹಿತದಿ ಕುರುಪ

ಕಾಣದೆ ನಿನ್ನ ಮಹಿಮೆ e್ಞÁನರಹಿತನಾಗಿ

ಜಾಣೆ ಶ್ರೀ ಗೋಪಾಲಕೃಷ್ಣವಿಠ್ಠಲನ ನಿಜ

e್ಞÁನ ಪಾಲಿಸಿ ಕಾಯೆ ಭೀಮಸೇನನ ಜಾಯೆ 4

ಮುಕ್ತರ ಬಂಧುವೆ ನೀನು ಭಕ್ತಿಯದಾತಳÉ ನೀನು

ತತ್ವ ತಿಳಿಸುವೆ ನೀನು ಚಿತ್ತದೆ ನೆಲಸುವೆ ನೀನು

ಹತ್ತದು ದುಃಖವು ನಿನಗೆ ಸುತ್ತದು ಶೋಕವು ನಿನಗೆ

ಮುಕ್ತಾರ್ಥವ ಕೊಡುವವಳೆ ಮತ್ತೆ ಅಯೋನಿಜಹಳೆ

ಮುತ್ತು ಮಾಣಿಕ್ಯವು ನವರತ್ನದ ಆಭರಣಗಳ

ಉತ್ತಮ ವಸನ ಕಂಚುಕ ನೆತ್ತಿಲಿ ಮಕುಟವನಿಟ್ಟು

ಚಿತ್ತದೊಲ್ಲಭನಂಕದಲಿ ಹತ್ತಿ ಸಿಂಹಾಸನದಲಿರೆ

ಸುತ್ತಲು ಸೌಪಣ್ರ್ಯಾದಿ ಸುರಸ್ತ್ರೀಯರು ಓಲೈಸೆ

ಚಿತ್ತದಿ ಸಿರಿಹರಿಯನು ಭಕ್ತಿಲಿ ಭಜಿಸುತ ಮುಕ್ತಾ-

ಮುಕ್ತರ ಕೃಪಪಾಂಗದಲಿ ಸುತ್ತಲೀಕ್ಷಿಸಿ ಕಾವೆ

ಭಕ್ತಿಲಿ ದ್ರೌಪದಿ ಎಂದು ಎತ್ತಿದ ಸ್ವರದಲಿ ಕೂಗೆ

ಚಿತ್ತದೊಲ್ಲಭನೊಡನೆ ಚಿತ್ತೈಸೆನ್ನಯ ಮನಕೆ

ಹತ್ತಿಕಾಡುವ ಎನ್ನ ದುಷ್ಕøತ ಕರ್ಮಗಳೆಲ್ಲ

ಕತ್ತರಿಸುತ ಕಾಯಮ್ಮ ಸತ್ಯಾಪ್ರಿಯನನು ತೋರೆ

ಆರ್ತಜನರ ಪಾಲ ಗೋಪಾಲಕೃಷ್ಣವಿಠ್ಠಲನ್ನ

ಅರ್ಥಿಯಿಂದಲಿ ಎನ್ನ ಚಿತ್ತದಿ ತೋರೆಲೆ ಜನನಿ 5

ಜತೆ

ತತ್ವದೇವತೆಗಳ ಜನನಿ ತತ್ವಾರ್ಥ ತಿಳಿಸೇ

ಆಪ್ತ ಗೋಪಾಲವಿಠ್ಠಲನೆಂದೆನಿಸೇ

****