Showing posts with label ಳಳ- RSS- ಓ ದಾರಿಗನೇ ಪ್ರಿಯ O DAARIGANE PRIYA rss. Show all posts
Showing posts with label ಳಳ- RSS- ಓ ದಾರಿಗನೇ ಪ್ರಿಯ O DAARIGANE PRIYA rss. Show all posts

Friday, 24 December 2021

ಓ ದಾರಿಗನೇ ಪ್ರಿಯ others O DAARIGANE PRIYA rss

 


RSS song

ಓ ದಾರಿಗನೇ ಪ್ರಿಯ ನೇಹಿಗನೇ

ಗೈಯುವ ಬಾ ನವಯುಗ ನಿರ್ಮಾಣ

ಸಮಾಜದೇವತೆಗರ್ಪಿತವಾಗಲಿ

ನಮ್ಮೆಲ್ಲ ತನು ಮನ ಧನ ಪ್ರಾಣ ||ಪ||


ಹಿಡಿಕೂಳಿನ ಬರಿಗೋಳಿನ ಬಾಳಿಗೆ

ಮಾರುವೆಯಾ ತನುಮನವನು ಗೆಳೆಯಾ

ಪಶುಬಲದಿದಿರಿಗೆ ಅಡಿಯಾಳಾಗುತ

ಮರೆಯುವೆಯಾ ಮಾನವ್ಯದ ಗುರಿಯಾ? ||೧||


ಭ್ರಮೆಯನು ಕೊಡವಿಕೊ ಕಣ್ತೆರೆದರಿತುಕೊ

ಮಾನವ ಜೀವನದನಂತ ಮಹಿಮೆ

ಬಿಸಿಯಾರುವ ಮೊದಲೇ ಜಗವರಿಯಲಿ

ನಿನ್ನಯ ಪವಿತ್ರ ರಕ್ತದ ಹಿರಿಮೆ ||೨||


ಇಚ್ಚಾಶಕ್ತಿಯು ಭೂಮವನಪ್ಪಲಿ

ಮೋಹದ ಭೋಗದ ಕನಸನು ಮುರಿದು

ಹೃದಯದ ಹಕ್ಕಿಯು ಆಗಸವಾಳಲಿ

ಸೋಗಿನ ಸೊಬಗಿನ ಪೊರೆಯನು ಹರಿದು ||೩||


ಬಾಳೆಲ್ಲವು ಮುಡುಪಾಗಿಡು ವೀರನೆ

ದಿನದಿನವೂ ಹೊಸ ಹೊಸ ಸಾಹಸಕೆ

ಧ್ಯೇಯದ ಆ ಆನಂದದಿ ವಿಹರಿಸು

ಹರಡಲಿ ಚಿರಕೀರ್ತಿಯು ಯುಗ ಯುಗಕೆ ||೪||

***

O dAriganE priya nEhiganE

gaiyuva bA navayuga nirmANa

samAjadEvategarpitavAgali

nammella tanu mana dhana prANa ||pa||


hiDikULina barigOLina bALige

mAruveyA tanumanavanu geLeyA

paSubaladidirige aDiyALAguta

mareyuveyA mAnavyada guriyA? ||1||


Brameyanu koDaviko kaNteredarituko

mAnava jIvanadanaMta mahime

bisiyAruva modalE jagavariyali

ninnaya pavitra raktada hirime ||2||


iccASaktiyu BUmavanappali

mOhada BOgada kanasanu muridu

hRudayada hakkiyu AgasavALali

sOgina sobagina poreyanu haridu ||3||


bALellavu muDupAgiDu vIrane

dinadinavU hosa hosa sAhasake

dhyEyada A AnaMdadi viharisu

haraDali cirakIrtiyu yuga yugake ||4||

***

ಓ ದಾರಿಗನೇ ಪ್ರಿಯ ನೇಹಿಗನೇ

ಗೈಯುವ ಬಾ ನವಯುಗ ನಿರ್ಮಾಣ

ಸಮಾಜದೇವತೆಗರ್ಪಿತವಾಗಲಿ

ನಮ್ಮೆಲ್ಲ ತನು ಮನ ಧನ ಪ್ರಾಣ ||ಪ||


ಹಿಡಿಕೂಳಿನ ಬರಿಗೋಳಿನ ಬಾಳಿಗೆ

ಮಾರುವೆಯಾ ತನುಮನವನು ಗೆಳೆಯಾ

ಪಶುಬಲದಿದಿರಿಗೆ ಅಡಿಯಾಳಾಗುತ

ಮರೆಯುವೆಯಾ ಮಾನವ್ಯದ ಗುರಿಯಾ? ||೧||


ಭ್ರಮೆಯನು ಕೊಡವಿಕೊ ಕಣ್ತೆರೆದರಿತುಕೊ

ಮಾನವ ಜೀವನದನಂತ ಮಹಿಮೆ

ಬಿಸಿಯಾರುವ ಮೊದಲೇ ಜಗವರಿಯಲಿ

ನಿನ್ನಯ ಪವಿತ್ರ ರಕ್ತದ ಹಿರಿಮೆ ||೨||


ಇಚ್ಚಾಶಕ್ತಿಯು ಭೂಮವನಪ್ಪಲಿ

ಮೋಹದ ಭೋಗದ ಕನಸನು ಮುರಿದು

ಹೃದಯದ ಹಕ್ಕಿಯು ಆಗಸವಾಳಲಿ

ಸೋಗಿನ ಸೊಬಗಿನ ಪೊರೆಯನು ಹರಿದು ||೩||


ಬಾಳೆಲ್ಲವು ಮುಡುಪಾಗಿಡು ವೀರನೆ

ದಿನದಿನವೂ ಹೊಸ ಹೊಸ ಸಾಹಸಕೆ

ಧ್ಯೇಯದ ಆ ಆನಂದದಿ ವಿಹರಿಸು

ಹರಡಲಿ ಚಿರಕೀರ್ತಿಯು ಯುಗ ಯುಗಕೆ ||೪||

***