kaapi ರಾಗ ತೀನ್ ತಾಳ
ವೈಶ್ವದೇವೆಂಬುದು ಇದೇ ನೋಡಿ
ಶ್ವಾಸೋಚ್ಛಾಸವೆಂಬುದು ಪುಟಮಾಡಿ ||ಧ್ರುವ||
ಬ್ರಹ್ಮಜ್ಞಾನವೆಂಬುದು ಕುಂಡಮಾಡಿ
ಕರ್ಮಕಾಷ್ಠದಗ್ನಿ ಪುಟಗೂಡಿ
ನಾಮ ದಿವ್ಯ ನೆನಹು ತಾ ಊದಿಬಿಡಿ
ಕಾಮಕ್ರೋಧವೆಂಬ ಧೂಮ್ರ ಹೋಗಾಡಿ ||೧||
ಜ್ಞಾನವೈರಾಗ್ಯೆಂಬುದು ಅಗ್ನಿ , ನಾ-
ನೀನೆಂಬುದು ಆಹುತಿ ಪೂರ್ಣ ನೀಡಿ
ಭಿನ್ನ ಭೇದ ಭೂತಬಲಿ ಮಾಡಿ
ಮನಮೈಲಿಗೆ ತೊಳೆದು ಶುದ್ಧಮಾಡಿ ||೨||
ವೈಶ್ವದೇವ ಮಹಿಪತಿಗಿದೇ ನೋಡಿ
ವಿಶ್ವದೊಳಿದೇ ನಿಜ ನಿತ್ಯ ಮಾಡಿ
ಹಸನಾದ ಸತ್ಕರ್ಮ ಇದೇ ನೋಡಿ
ಲೇಸು ಲೇಸಾಯಿತು ಪುಣ್ಯಗೂಡಿ ||೩||
*********
ವೈಶ್ವದೇವೆಂಬುದು ಇದೇ ನೋಡಿ
ಶ್ವಾಸೋಚ್ಛಾಸವೆಂಬುದು ಪುಟಮಾಡಿ ||ಧ್ರುವ||
ಬ್ರಹ್ಮಜ್ಞಾನವೆಂಬುದು ಕುಂಡಮಾಡಿ
ಕರ್ಮಕಾಷ್ಠದಗ್ನಿ ಪುಟಗೂಡಿ
ನಾಮ ದಿವ್ಯ ನೆನಹು ತಾ ಊದಿಬಿಡಿ
ಕಾಮಕ್ರೋಧವೆಂಬ ಧೂಮ್ರ ಹೋಗಾಡಿ ||೧||
ಜ್ಞಾನವೈರಾಗ್ಯೆಂಬುದು ಅಗ್ನಿ , ನಾ-
ನೀನೆಂಬುದು ಆಹುತಿ ಪೂರ್ಣ ನೀಡಿ
ಭಿನ್ನ ಭೇದ ಭೂತಬಲಿ ಮಾಡಿ
ಮನಮೈಲಿಗೆ ತೊಳೆದು ಶುದ್ಧಮಾಡಿ ||೨||
ವೈಶ್ವದೇವ ಮಹಿಪತಿಗಿದೇ ನೋಡಿ
ವಿಶ್ವದೊಳಿದೇ ನಿಜ ನಿತ್ಯ ಮಾಡಿ
ಹಸನಾದ ಸತ್ಕರ್ಮ ಇದೇ ನೋಡಿ
ಲೇಸು ಲೇಸಾಯಿತು ಪುಣ್ಯಗೂಡಿ ||೩||
*********