Showing posts with label ಮೋಸ ಹೋದೆನಲ್ಲ ವಿಟ್ಠಲ ಮೋಸ ಹೋದೆನಲ್ಲ purandara vittala. Show all posts
Showing posts with label ಮೋಸ ಹೋದೆನಲ್ಲ ವಿಟ್ಠಲ ಮೋಸ ಹೋದೆನಲ್ಲ purandara vittala. Show all posts

Saturday, 23 January 2021

ಮೋಸ ಹೋದೆನಲ್ಲ ವಿಟ್ಠಲ ಮೋಸ ಹೋದೆನಲ್ಲ purandara vittala

 ರಾಗ - : ತಾಳ -


ಮೋಸ ಹೋದೆನಲ್ಲ ವಿಟ್ಠಲ ಮೋಸ ಹೋದೆನಲ್ಲ ll ಪ ll


ಆಸೆಬಿಟ್ಟು ಹಂಬಲಿಸಿ l

ಹೇಸಿ ನರಕದೊಳಗೆ ಸಿಲುಕಿ ll ಅ ಪ ll


ಪುಷ್ಪ ಶ್ರೀ ತುಳಸಿಯನ್ನು l

ಒಪ್ಪದಿಂದ ಮನೆಗೆ ತಂದು ll

ಅಪ್ಪ ಕೃಷ್ಣನ ಪೂಜೆಯ ಮಾಡಿ ಮೇ l

ಲಿಪ್ಪ ಲೋಕವ ಸೂರೆಗೊಳದೆ ll ೧ ll


ಕಾಯದಾಸೆಗೆ ಕಂಡುದ ಬಯಸಿ l

ನಾಯಿಯಂತೆ ಮನೆಮನೆ ತಿರುಗಿ ll

ಮಾಯಾಪಾಶದೊಳಗೆ ಸಿಲುಕಿ l

ಜೀಯ ನಿನ್ನನು ಧ್ಯಾನಿಸಲರಿಯದೆ ll ೨ ll


ಸತಿಸುತರು ಪಿತೃ ಬಾಂಧವರು l

ಪಥವ ತೋರಿಸಬಲ್ಲರೆ ಇವರು l

ಗತಿ ನೀನೇ ಪುರಂದರವಿಟ್ಠಲ l

ಹಿತವ ಕಾಯಿ ತಂದೆ ನೀನು ll ೩ ll

***