Showing posts with label ಚೆಂಡನಾಡುತ ಬಂದ ಪುಂಡ ಕೃಷ್ಣನು purandara vittala. Show all posts
Showing posts with label ಚೆಂಡನಾಡುತ ಬಂದ ಪುಂಡ ಕೃಷ್ಣನು purandara vittala. Show all posts

Thursday, 5 December 2019

ಚೆಂಡನಾಡುತ ಬಂದ ಪುಂಡ ಕೃಷ್ಣನು purandara vittala

ಪುರಂದರದಾಸರು
ಚೆಂಡನಾಡುತ ಬಂದ ಪುಂಡ ಕೃಷ್ಣನು ತನ್ನ |ಹಿಂಡುಗೋಪಾಲಕರ ಕೊಂಡು ಯಮುನೆಯ ತಡಿಗೆ ಪ 

ಓರೆ ತುರುಬನೆಕಟ್ಟಿಗೀರುನಾಮವನಿಟ್ಟು |ಹಾರ ಕಂಕಣ ತೋಳಬಂದಿ ಘುಂಗುರ ಘನ-|ಸಾರಕುಂಕುಮ ಕೇಸರಿಗಂಧ ಕೂಡಿಸಿ |ಸೇರಿಸುತ ನಡುವಿಗೆ ಕಾಸಿದಟ್ಟಿಯನುಟ್ಟು |ಹಾರಾಡುತಲಿ ಬಂದ-ತೊಡರಗಾಲ |ತೋರ ಚಿನ್ಮಣಿಗಳಿಂದ. ಮುತ್ತಿನ ಚೆಂಡು |ಧಾರಿಣಿಗೆ ಪುಟಿಸಿ ನಿಂದ-ವಜ್ರದಖಣಿ|ತೋರಿ ಗೆಳೆಯರ ಕೂಡ ಬಂದರಾ ಮನೆಯಿಂದ 1

ಕೊಂಡಾಲ ತಿಮ್ಮನು ಚೆಂಡನೆ ಹೊಡೆದನು |ಮಿಂಡೆಯರ ಮೊಲೆಗಾಗಿ ಹಾರಿಹರಿದು ಬೀಳೆ |ಹಿಂಡುನಾರಿಯರೆಲ್ಲ ಸುತ್ತಿಕೊಂಡಿರೆಅವರ|ಮುಂಡೆಗೆ ತಗುಲಿಸಿ ಪುರದ ಬಾಗಿಲ ಬಿಟ್ಟು |ಕಿಂಡಿಯಿಂದಲಿ ಬಂದನು-ನಾರಿಯರ |ಮಂಡೆಗೆ ಚೆಂಡಿಟ್ಟನು-ತೋರಿಸುವರ |ಕಂಡು ತಾ ನಗುತಿದ್ದನು-ಕೌತುಕವೆಂದು |ದಿಂಡೆಯರುಮಡುವಿನೊಳಗೆ ಹಾಕಿ ನಡೆದರು2

ಗೆಳೆಯರೆಲ್ಲರು ಕೂಡಿ ಚೆಂಡು ತಾ ಎನಲಾಗಿ |ಗುಳುಗುಳಿಸುವ ವಿಷದ ಯಮುನಾ ತಡಿಯಲಿನಿಂದು|ಬಳಿಯ ವೃಕ್ಷದ ಮೇಲೇರಿ ತಾ ಧುಮುಕಲು |ಕಳಕಳಿಸುವ ಗೋಪಾಲರಳುತಿರೆ |ಇಳಿದ ನೀರೊಳಗಾಗಲು-ನಾಗರಫಣಿ|ತುಳಿದು ಕುಣಿಕುಣಿಯುತಿರಲು-ಬ್ರಹ್ಮನು ಬಂದು |ತಿಳಿದು ಮದ್ದಲೆ ಹೊಯ್ಯಲು-ಇಂದ್ರಾದ್ಯರು |ನಲಿದು ತಾಳವನಿಟ್ಟು ಕೊಂಡಾಡುತಿದ್ದರು 3

ಮಗನ ಸುದ್ದಿಯಕೇಳಿಹರಿದು ಬಂದಳುಗೋಪಿ|ನಗರದ ಹೊರಗಾಗಿ ಬಾಯ ನಾದದಿಂದ |ವಿಗಡೆಯರು ಬಿಟ್ಟ ಮಂಡೆಯ ಜುಂಜು ಕೆದರುತ |ತೆಗೆದು ಮಣ್ಣನೆ ತೂರಿ ಕುಳಿತಲ್ಲಿಂದಲೆ ನಮ್ಮ-|ನ್ನಗಲಿ ಹೋಗುವರೆ ಹೀಗೆ-ರಂಗ ನಮ್ಮ |ಮೊಗವ ನೋಡುವುದೆಂದಿಗೆ-ನೋಡಿದ ಕಣ್ಣ |ತೆಗೆದು ಕೀಳುವೆನಿಂದಿಗೆ-ಪಡೆದ ಪೊಟ್ಟೆ |ದಗದಗಿಸಲು ಕೊಟ್ಟು ಮುನಿಯದೆ ಬಾ ಬೇಗ 4

ಏನನೆಂಬೆನು ಕೃಷ್ಣ ನಿನ್ನ ಕಾಣದೆ ಪುರದ |ಮಾನಿನಿಯರು ಬೆರಗಾಗಿ ಬೀಳುತ ಕರುವ |ಕಾಣದಿರೆತ್ತಿಗೆ ಕರುವನು ಬಿಡುವರು |ಆ ನಾಸಿಕದ ಮೂಗುತಿ ಕಿವಿಗಿಡುವರು |ಧೇನುಮೇವನೆ ತೊರೆದುವು-ಗೋವುಗಳನ್ಯ-|ರಾಮನೆಗೋಡಿದುವು-ವತ್ಯಗಳೆಲ್ಲ |ಮೌನದಿ ಮೊಲೆ ತೊರೆದುವು ಕೃಷ್ಣಯ್ಯನ |ವೇಣುನಾದದ ಧ್ವನಿ ಕೇಳದೆ ಮೆಚ್ಚವು 5

ದ್ವಾರಕಿ ಕೃಷ್ಣ ನೀ ಬಾಯೆಂದು ಕರೆವೆನೊ |ತೋರುವ ಸಮಪಾದ ವಿಠಲನೆಂಬೆನೊ |ಶ್ರೀರಮಣ ವೆಂಕಟನೆಂದು ಒದರುವೆನೊ |ಶ್ರೀರಂಗಶಯನನೆಂದೆನಲ್ಲದೆ ನಿನ್ನ |ಚೋರ-ಜಾರನೆಂದೆನೆ-ಹದ್ದಿನ ಮೇಲೆ |ಏರಿ ತಿರುಗುವನೆಂದೆನೆ-ಬೆಣ್ಣೆಯ ಕದ್ದು |ಸೂರೆ ಮಾಡುವನೆಂದೆನೆ-ಕೃಷ್ಣಯ್ಯ ನೀ |ಬಾರಯ್ಯ ಬಾರದಿದ್ದರೆ ಪ್ರಾಣ ನೀಗುವೆ 6

ಕಣ್ಣೆತ್ತಿ ನೋಡಿದನೆಂದೆನೆ ಕಡೆಗೋಲ |ಬೆನ್ನಲಿ ಪಿಡಿದನೆಂದೆನೆ ಹಲ್ಲಳನೂರಿ |ಮಣ್ಣ ಕಚ್ಚಲು ಬಾಯ ತೆರೆಯುವನೆಂದೆನೆ |ಮಣ್ಣ ಬೇಡಲು ನಾ ಕೊಡಲಾರೆನೆಂದೆನೆ |ಎನ್ನ ಕುತ್ತಿಗೆ ಕೊಯ್ವರೆ-ಮಾತೆಯ ಮಾತು |ಮನ್ನಿಸಿ ವನಕೆ ಪೋಪರೆ-ಬಲಭದ್ರ |ಅಣ್ಣನಿಗೆ ಮುಖವ ತೋರೆ-ಕೃಷ್ಣಯ್ಯ ನೀ |ಸಣ್ಣವನೆನ್ನದೆ ಹರಿಯ ಕೊಂಡಾಡಿದೆ 7

ಎಂದ ಮಾತನು ಕೇಳುವಾ ಸಮಯ ನಾಗಿಣಿ-|ವೃಂದವೆಲ್ಲವು ತಮ್ಮ ಕಂಠಭೂಷಣರಾಗಿ |ಅಂದದ ಮೇಲುದ ಸುತ್ತಿಕೊಂಡಿರೆ ಅರ-|ವಿಂದನಾಭಾಚ್ಯತ ಕೇಶವಮುರಹರ|ಮಂದರಧರಹರಿಯೆ-ನಿನಗೆ ನಾವು |ಮಂದಾಕಿನಿಯ ಸರಿಯೆ-ಮಾಂಗಲ್ಯದ |ಚೆಂದ ಕಾಯೈ ದೊರೆಯೆ-ಹರಿಯ ಕೃಪೆ-|ಯಿಂದ ಕರೆದು ನಮ್ಮ ಕಾಯಬೇಕೆಂದರು 8

ಇಂತಿಂತು ಸ್ತವನವ ಮಾಡೆ ಕಾಳಿಂಗನ |ಕಾಂತೆಯರ ಸ್ತೋತ್ರಕ್ಕೆ ಮೆಚ್ಚಿ ನಾಗನ ಬಿಟ್ಟು |ಕಂತುಕ ಸಹಿತ ಪಂಕಜನಾಳವನೆ ಕೊಂಡು |ಸಂತಸದಲಿ ಇಕ್ಕುತ-ಶೋಕದಿ ನೀವು |ಭ್ರಾಂತಿ ಬಿಡಿರಿ ಎನ್ನುತ-ಬರಿದೆ ಎಲ್ಲ |ಸಂತೆ ಕೂಡಿದೆ ಎನ್ನುತ-ನಾ ಹಸಿದೆನು |ಪಂತಿಭೋಜನ ಕೊಂಡು ನಡೆಯಿರಿ ಮನೆಗೆಂದ 9

ಸುರರಿಗೆಸುಧೆಮುಂಚೆ ಉಣಿಸಿದ ಪರಬ್ರಹ್ಮ |ಪರಿಪರಿ ಭೋಜನ ಮಾಳ್ಪ ಕಂಡುವರಾರು? |ಸುರದುಂದುಭಿ ಪೊಡೆದು ಪಾರಿಜಾತದ ಮಳೆ |ಸುರಿಸಿದರಾಕ್ಷಣಕೆ-ಬ್ರಹ್ಮನು ತಾನು |ತೆರಳಿದನಾಶ್ರಮಕೆ-ಪುರಂದರವಿಠಲ |ತಿರುಗಿದ ನಿಜಧಾಮಕೆ-ಕೃಷ್ಣನ ಲೀಲೆ |ಗುರುದಯೆಯಲಿ ನಮ್ಮ ಹರಿಯ ಕೊಂಡಾಡಿದೆ 10
***

pallavi

ceNDanADuta banda puNda krSNanu tanna hiNDu gOpAlakara koNDu yamuneya taDige

caraNam 1

ore turubane kaTTi gIru nAmavaniTTu hAra kankaNa tOLabandi ghungura ghana
sAra kumkuma kEsari gandha carcisi sErisuta naDuvige kAsidaTTiyanuTTu
hArADutali banda toDaragAla tOra cinmaNigaLinda muttina ceNDu
dhariNige puTisi ninda vajrada ghaNi tOri keLeyara kUDa bandarA maneyinda

caraNam 2

koNDAla nimmanu ceNDene hoDedanu miNDeyara molegAgi hAri haridu biLe
hiNDu nAriyarella sutti koNDire avara maNDige tagulisi purada bAgila biTTu
kaNDiyindali bandanu nAriyara maNDEge ceNDiTTanu tOrisuvara
kaNDu tA nagutiddanu keLatukavendu diNDeyaru maDuvinoLage hAki naDedaru

caraNam 3

geLeyarellaru kUDi ceNDu tA enalAgi guLu guLisuva viSada yamunAdaDiyali nindu
baLiya vrSada mElEri tA dhumukalu kaLakaLisuva gOpAlaraLutalire
iLida nIroLagAgalu nAgara phaNi tuLidu kuNi kuNiyutiralu brahmanu bandu
tiLidu maddale hoyyalu inrAdyaru nalidu tALavaniTTu koNDADutiddaru

caraNam 4

magana suddiya kELi haridu bandaLu gOpi nagarada horagAgi bAya nAdadinda
vigaDeyaru biTTa maNDeya junju kedaruta tegedu maNNane tUri kuLitallindale
nammannagali hOguvare hIge ranga namma mogava nODuvudendige nODada kaNNa
tegedu kILuvenindige paDeda poTTe dagadagisalu koTTu muniyade bA bEga

caraNam 5

Enembenu krSNa ninna kANade purada mAniniyaru beragAgi pILuta karuva
kANadirettige karuvanu biDuvaru A nAsikada mUgudi kivigiDuvaru
dhEnu mevane toreduvu gOvugaLanya rAmanegODiduvu vatsagaLella
maunadi mEle toreduvu krSNayyana vENunAdada dhvani kELade meccavu

caraNam 6

dvArake krSNa nI bAyendu kareveno tOruva samapAda viTTalanembeno
shrI ramaNa vEnkaTanendu odaruveno shrI ranga shayanendenallade ninna
cOra jAranendene haddina mEle Eri tiruguvanendane beNNeya kaddu
sure mADuvanendane krSNayya nI bArayya bAradiddare prANa nIguve

caraNam 7

kaNNetti nODidanendene kaDegOla bennali piDidanendane hAlgaLanUri
maNNa kaccalu bAya tereyuvanendene maNNa bEDalu nA koDalArenendene
enna kuttige koivare mAteya mAtu mannisi vanake pOpare balabhadra
aNNanige mukhava tOre krSNayya nI saNNavanennade hariya koNDADide

caraNam 8

endamAtanu kELuvA samaya nAgiNi vrandavellavu tamma kanTha bhUSaNarAgi
andada mEluda sutti koNDire aravinda nAbhAcyuta kEshava murahara
mandaradhara hariye ninage nAvu mandAkiniya sariye mAngalyada
cenda kAyai doreya hariya krpeyinda karedu namma kAya bEkendaru

caraNam 9

indindu stavanava mADe kALingana kAnteyara stOtrake mecci nAgana biTTu kantuka sahita
pankajanALavane koNDu santasadali ikkuda shOkadi nIvu bhrAnti biDiri ennuta baride ella sante
kUDide ennuta nA hasidenu panti bhOjana koNDu naDeyiri manegenda

caraNam 10

surarige sudhe munce uNisida parabrahma paripari bhOjana mALpa kaNDavarAru sura dundubi
poDedu pArijAtada maLe surasidArAkSaNake brahmanu tAnu teraLidanAshramake purandara viTTala
tirugida nijadhAmake krSNana lIle kurudayeyali namma hariya koNDADide
***