Showing posts with label ಹೇಳಯ್ಯಾ ಶ್ರೀ ಗುರುವೇ ಬಾಳುವೆನದರಂದವಿ ಸುರ ತರುವೇ gurumahipati. Show all posts
Showing posts with label ಹೇಳಯ್ಯಾ ಶ್ರೀ ಗುರುವೇ ಬಾಳುವೆನದರಂದವಿ ಸುರ ತರುವೇ gurumahipati. Show all posts

Wednesday 1 September 2021

ಹೇಳಯ್ಯಾ ಶ್ರೀ ಗುರುವೇ ಬಾಳುವೆನದರಂದವಿ ಸುರ ತರುವೇ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಹೇಳಯ್ಯಾ ಶ್ರೀ ಗುರುವೇ ಬಾಳುವೆನದರಂದವಿ ಸುರ ತರುವೇ ಪ 


ಹೀನ ಯೋನಿಯ ಮುಖದಲಿ ಬಂದು ನಾನಾ ತಾಪತ್ರಯದಿ ಬಹುನೊಂದು ನೀನೆ ಗತಿಯನುತ ಬಂದೆ ನಿಂದು ನಾನು ಭವದಿಂದ ತರಿಸುವ ಉಪಾಯವ ವಂದು 1 

ಕೇಳಯ್ಯಾ ನೀ ಕಂದಾ ಹೇಳುವ ನುಡಿ ಗ್ರಹಿಸಲಾನಂದಾ ಆದಿಯಲಿ ದುರ್ಜನ ಸಂಗವಳಿದು ಸಾಧುಜನಸಂಗವನೇ ಬೆರೆದು ಬೋಧೆಯಂದಲಿ ಮನನವ ಬಲಿದು ಸಾಧಕನ ಉದ್ಯೋಗಿಸ ಸಿದ್ಧಿಯಹುದು2 

ಸ್ವಾಮಿ ಸಜ್ಜನ ಸಂಗವನೇ ಬಯಸಿ ಪ್ರೇಮದಿರಬೇಕು ಇದೇ ನಿತ್ಯವೆನಿಸಿ ತಾಮತ್ತರ ಘಳಿಗಿಯೊಳು ವಲಿಸಿ ಭ್ರಮಿಸುತಿಹಿದು ಅದು ಏನೆಂದು ವಿಸ್ತರಿಸಿಹೇ3 

ಕೇಳಯ್ಯಾ ಲೋಕವೆಲ್ಲಾ ಛಲನೆ ಮಾಡುವುದು ವಿಕಲ್ಲುಳ್ಳದು ನೋಡುಮನವದು ನಾಕು ತೆರದೊಳಿಸಿ ಕೊಳ್ಳಲದು ಬೇಕಾದುದನು ವಸ್ತು ಇದಿರಿಡುತಲಿಹುದು4 

ನಳಿನ ಜಪರಾಸುರಗಳಿಗೆ ಛಲಿಸಲಿಕೆ ಮನ ಅಂಗನಿಗೆ ಬಲಿ ವಿಡಿದು ಮೋಹಿಸಿದ ರಾಗ ಇಳಿಯೊಳಗ ವಶಯಂತಹುದು ಮನುಜಗ5 

ಕೇಳಯ್ಯಾ ಶುಕನಾರದ ಭೀಷ್ಮರ ನೋಡಾ ವಿಕಳಿಗೊಳ್ಳದೆ ಮನಕೂಡಾ ಸಕಲಗೆದ್ದರು ಅತಿಗಾಢಾ ಯುಕುತಿಲೆ ಮನೊಲಿಕೊವೈರಾಗ್ಯದಿಂದ ಧೃಡಾ6 

ಹೇಳೈಯ್ಯಾ ಜ್ಞಾನಸಾಧನವೆಂಬುದನರಿಯೇ ಎನಗೆಂತಹದಿಂತಿದು ಧೋರಿಯೇ ನೀನೇ ತಾರಿಸುದಯದೆನ್ನ ಸಿರಿಯೇ ನಾನು ಎಂದೆಂದು ತವಪಾದಸ್ಮರಣಿ ಮರಿಯೆ7 

ಎಂದು ಬಾಗುವ ಕಂದನನು ನೋಡಿ ಕರ ನೀಡಿ ಛಂದದಲಿ ತರಿಪಂತೆ ಮಾಡಿ ಬಂದು ಧನ್ಯ ಗೈಸಿದ ಗುರು ಮಹಿಪತಿ ಕೈಯ್ಯಗೂಡಿ8

***