..
ಆವಾವ ಬಗೆಯಿಂದ ನೀನೆ ರಕ್ಷಿಸುವೆಯೊದದೇವಾದಿ ದೇವ ಶ್ರೀಕೃಷ್ಣ ನೀನೆನ್ನನು ಪ
ಹಿಂದಿನ ಕಾಲವ ವ್ಯರ್ಥವಾಗಿ ಕಳೆದೆನೊಮುಂದಿನ ಗತಿ ಚಿಂತೆ ಲೇಶವಿಲ್ಲವೊಸಂದು ಹೋಯಿತು ದೇಹದೊಳಗಿನ ಬಲವೆಲ್ಲಮಂದವಾದವು ಇಂದ್ರಿಯ ಗತಿಗಳೆಲ್ಲ 1
ಆಸೆಯೆಂಬುದು ಅಜನ ಲೋಕಕ್ಕೆ ಮುಟ್ಟುತಿದೆಕಾಸು ಹೋದರೆ ಕ್ಲೇಶವಾಗುತ್ತಿದೆಮೋಸಮಾಡಿ ಮೃತ್ಯು ಬರುವುದ ನಾನರಿಯೆವಾಸುದೇವನೆ ಎನ್ನ ದಯಮಾಡಿ ಸಲಹೊ2
ಜನರು ದೇಹವ ಬಿಟ್ಟು ಪೋಪುದ ನಾ ಕಂಡುಎನ್ನ ದೇಹ ಸ್ಥಿರವೆಂದು ತಿಳಿದುಕೊಂಡುದಾನ ಧರ್ಮ ಮೊದಲಾದ ಹರಿಯ ನೇಮವ ಬಿಟ್ಟುಹೀನ ವಿಷಯಂಗಳಿಗೆರಗುವೆ ಸಿರಿಕೃಷ್ಣ3
***
pallavi
AvAva bageyinda nInE rakSisuveyO dEvAdi dEva shrIkrSNa nInennanu
caraNam 1
hindinakAlava vyarthavAgi kaLedenO mundina gati cinte lEshavillavo
saridu hOyitu dEhadoLagina balavella mandavAdavu indriya gatigaLella
caraNam 2
Aseyembudu ajana lOkakke muTTutide kAsu hOdare klEshavAguttide
mOsamADi mrutyu baruvuda nAnariye vAsudEvane enna dayamADi salahO
caraNam 3
janaru dEhava biTTu pOpuda nA kaNDu enna dEha sthiravendu tiLidukoNDu
dAnadharma modalAda hariya nEmava biTTu hIna viSayagaLigeraguve sirikrSNa
***