ಕೇಶವ ಕೃಷ್ಣ ಜನಾರ್ಧನ।। ।। ಪ ।।
ಮತ್ಸ್ಯಾವತಾರದೊಳಾಡಿದನೇ
ಮಂದರಾಚಲ ಬೆನ್ನೊಳು ತಾಳಿದನೆ
ಅಚ್ಚಾಸುಕಾರನಾಗಿ ಬಾಳಿದನೆ
ಮದಹೆಜ್ಜೆ ಹಿರಣ್ಯನ ಸೀಳಿದನೆ ।। ।।೧।। ।।ಪ।।
ಕುಂಬಿನಿ ದಾನವ ಬೇಡಿದನೆ
ಕ್ಷಾತ್ರರೆಂಬುವನು ಹತ ಮಾಡಿದನೆ
ಅಂಬುದಿಗೆ ಶರ ಹೂಡಿದನೆ
ಕಮಲಾಂಬಕ ಗೊಲ್ಲರೊಲಾಡಿದನೇ ।। ।।೨।। ।।ಪ।।
ವಸುದೇವನುದರದಿ ಪುಟ್ಟಿದನೆ
ಪೊಲ್ಮೆಸೆವ ಧನುಜರೊಡಗುಟ್ಟಿದನೆ
ಎಸವ ಕಾಳಿಂಗನ ಮೆಟ್ಟಿದನೆ
ಭಾದಿಸುವರ ಯಮಪುರ ಕಟ್ಟಿದನೆ।। ।।೩।। ।।ಪ।।
ಪೂತನಿಯ ಮೈಯ ಸೋಕಿದನೆ
ಮಹಾ ಘಾತದ ಮೊಲೆಯುಂಡು ತೇಗಿದನೆ
ಘಾತಕಿಯನತ್ತಾ ನೂಕಿದನೆ
ಗೋಪವ್ರಾತ ಗೋಗಳನೆಲ್ಲಾ ಸಾಕಿದನೆ ।। ।।೪।। ।।ಪ।।
ಸಾಧಿಸಿ ತ್ರಿಪುರರ ಗೆಲಿದವನೇ
ಲೇಚರ ಭೇದಿಸಿ ಹಯವೇರಿ ಮೆರೆದವನೇ
ಸಾಧಿಸಿ ಸಕಲವ ತಿಳಿದವನೇ
ಬಾಡದಾದಿಕೇಶವ ಭಕ್ತಿಗೊಲಿದವನೇ ।। ।।೫।। ।।ಪ।।
***
Govinda Hari Govinda Keshava Krishna Janaardana||pa||
Matsyaavataradolaadidne mandaraacala bennolu taalidane
Accasookaranaagi baalidane madahecce hiranyana seelidane || 1 ||
Kumbhini daanava bedidane kshaatrarembuvaranu hata maadidane
Ambudhige shara hoodidane kamalaambaka gollarolaadidane || 2 ||
Vasudevanudaradi puttidane palmaseva danujarodaguttidane
Eseva kaalingana mettidane bhaadisuvara yamapurakattidane || 3 ||
Pootaniya maiya sokidane mahaa ghaatada moleyundu tegidane
Ghaatakiyanatta nookidane gopa vraata gogalanella saakidane || 4 ||
Saadhisi tripurava gelidavane mlecchara bhedisi hayaveri meredavane
Saadhisi sakalava tilidavane baadadaadikeshaava bhaktigolidavane || 5 ||
***