Showing posts with label ಶರೀರ ಜರಿಯಬೇಡಾ ಬೆರಿಯಬೇಡಾ ಸ್ಥಿರವಿದ್ದ ಕೈಯಲಿ gurumahipati. Show all posts
Showing posts with label ಶರೀರ ಜರಿಯಬೇಡಾ ಬೆರಿಯಬೇಡಾ ಸ್ಥಿರವಿದ್ದ ಕೈಯಲಿ gurumahipati. Show all posts

Wednesday, 1 September 2021

ಶರೀರ ಜರಿಯಬೇಡಾ ಬೆರಿಯಬೇಡಾ ಸ್ಥಿರವಿದ್ದ ಕೈಯಲಿ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಶರೀರ ಜರಿಯಬೇಡಾ | ಬೆರಿಯಬೇಡಾ | ಸ್ಥಿರವಿದ್ದ ಕೈಯಲಿ ಗುರು ಶರಣವ ಹೊಕ್ಕು | ತಾರಿಸೋ ಭವದಿಂದ ನೀ ಮರಳು ಜೀವವೇ ಪ 


ಲೋಕದೊಳು ವಾರಿಜೋದ್ಭವ ನಿನ್ನ ಜನ್ಮ ಕೊಟ್ಟು | ನೂಕಲಾಗ ತಾಯಿ ಗರ್ಭದೊಳಾವರಿಸಿ ತಾನು ಧರಿಸಿ | ರೇಖೆ ರೂಪ ಲಾವಣ್ಯ ಅವಯವಂಗಳಿಂದ | ಸಾಕಾರವಾಗಿ ಸುಂದರೆನಿಸಿ ವರನೆನಿಸಿ | ಬೇಕಾದ ವಿದ್ಯವನು ಸರ್ವ ಸಂಪಾದಿಸಲು | ತಾ ಕಾರ್ಯವಾಗಿ ಅಭ್ಯಾಸದಿಂದಾ ಧ್ಯಾಸದಿಂದಾ | ವಾಕ್ಪಟುದಲಿ ಸಮರ್ಥನೆಂಬನಾಮ ಪಡೆದು | ಪ್ರಖ್ಯಾತವಾದೆ ಈ ಕಾಯದಿಂದ 1 

ಸ್ನಾನವನು ಮಾಡಿ ತ್ರಿಕಾಲ ಸಂಧ್ಯಾನ ವಿಧಿಯನು | ಮೌನ ಜಪಗಳವನು ತಪಗಳನು | ಸ್ವಾನುಭಾವ ಸೂರ್ಯಾಡಲಾಗಿ ನೇಮವನುಷ್ಠಾನ ಮೊದಲಾದ | ಧ್ಯಾನ ಧಾರಣವನು ಕಾರವನು | ಜ್ಞಾನ ಭಕ್ತಿ ವೈರಾಗ್ಯ ಶಮದಮ ಕರುಣನು ದಿನಮಾಳ್ಪಾ | ಕರ್ಮ ನೈಮಿತ್ಯವಾದಾ ನಿತ್ಯವಾದಾ | ತಾನು ತನ್ನ ಉದ್ಧರಿಸಿಕೊಳಲಿಕ್ಕೆ ಭಾವದಿಂದಾ | ಮಾನುಭಾವg ದಯ ಪಡೆವುದರಿಂದಾ 2 

ತಾನು ಕುಣಿಯಲಾರದೆ ಅಂಕಣವು ಡೊಂಕು ಎಂದು | ಹೀನೋಯಿಸಿ ನುಡಿವ ನಟ ವೇಷಿಯಂತೆ | ನೀನು ನೀಟ ನಡಿಯದ್ಹೋಗಿ ದೇಹ ಕಶ್ಮಲವೆಂದು | ಜ್ಞಾನ ರಹಿತನಾಗಿ ಹಳಿವುದು ಉಚಿತ ಇದು ಪ್ರಾಚೀತ | ಈ ನಾಲ್ಕೆರಡು ವೈರಿಗಳ ದಂಡಿಸದೇ ಬರಿದೇ | ಹೀನ ವೈರಾಗ್ಯವಾ ಶಣಸಬೇಡಾ ದಣಿಸಬೇಡಾ | ಕಾನನದ ಹುತ್ತಮ್ಯಾಲ ಬಡಿದರೇನು ವರಗಿರುವಾ | ಆ ನಾಗದರ್ಪಗುಂದದು ಕಂಡಾ 3 

ಪರಿಪರಿ ಮುಮ್ಮುಳಿ ವಳಗಾಗಿ ಜೀವಿಸುವ | ತೆರನಂತೋಯಂದು ಚಿಂತಿಸಬಹುದು ಸುರಿಸಬಹುದು | ನೂರು ಭಂಡಿಗಳ ತÀುಂಬಿ ಬಂದರೇನು ತಾ | ಧರೆಯೊಳು ಸೂಲ ತಾ ಹಾವುದೊಂದೇ ನೋವುದೊಂದೇ | ಬರೆದ ಬರಹವೇ ಪಣಿಯಾಲಿದ್ದಪರಿ ತಪ್ಪದೈ | ವರ ಕೂಡಿ ಕೊಟ್ಟಡವಿ ಮಾಡುವದೇನು ನೋಡುದೇನು | ಪರಿ | ಪಡಿ ನೀನು 4 

ಸಾಕ್ಷರಾವೆಂಬ ಮೂರಕ್ಷರವ ಬರೆದು ತಾ | ರಾಕ್ಷಸಾವೆಂಬುದೇ ಅರ್ಥವಹುದು ಅನರ್ಥ ವಹುದು | ಪರಿ ವಳಿತು ಹೊಲ್ಲೆ | ಪಕ್ಷದ್ವಯಕ ಬಾಹುದು ಮಾಡಿದಾಂಗ ಕೂಡಿದಾಂಗ | ರಕ್ಷಿಸೆಂದು ಮಹಿಪತಿಸುತ ಜೀವನಾದಿ ವಿಶ್ವಾ | ಭವ ಹಿಂಗು ಬ್ಯಾಗ 5

***