Showing posts with label ಹರಿಕಥಾಮೃತಸಾರ ಸಂಧಿ 04 jagannatha vittala ಭೋಜನರಸವಿಭಾಗ ಸಂಧಿ HARIKATHAMRUTASARA SANDHI 4 BHOJANARASAVIBHAGA SANDHI. Show all posts
Showing posts with label ಹರಿಕಥಾಮೃತಸಾರ ಸಂಧಿ 04 jagannatha vittala ಭೋಜನರಸವಿಭಾಗ ಸಂಧಿ HARIKATHAMRUTASARA SANDHI 4 BHOJANARASAVIBHAGA SANDHI. Show all posts

Wednesday 11 November 2020

ಹರಿಕಥಾಮೃತಸಾರ ಸಂಧಿ 04 ankita jagannatha vittala ಭೋಜನರಸವಿಭಾಗ ಸಂಧಿ HARIKATHAMRUTASARA SANDHI 4 BHOJANARASAVIBHAGA SANDHI


Audio by Mrs. Nandini Sripad


ರಚನೆ : ಶ್ರೀ ಜಗನ್ನಾಥ ದಾಸರು 
for saahitya click   ಹರಿಕಥಾಮೃತಸಾರ ಸಂಧಿ 1 to 32  

 ಭೋಜನರಸವಿಭಾಗ ಸಂಧಿ  04

" ವನಜಜಾಂಡದೊಳುಳ್ಳಖಿಳ ಚೇತನರು ಭುಂಜಿಪ " ,
ಶ್ರೀ ಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ , 
 ಭೋಜನರಸವಿಭಾಗ ಸಂಧಿ , ರಾಗ ಯಮನ್ ಕಲ್ಯಾಣಿ

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||

ವನಜಾಂಡದೊಳು ಉಳ್ಳ ಅಖಿಳ ಚೇತನರು ಭುಂಜಿಪ
ಚತುರವಿಧ ಭೋಜನಪದಾರ್ಥದಿ ಚತುರವಿಧ ರಸರೂಪ ತಾನಾಗಿ
ಮನಕೆ ಬಂದಂತೆ ಉಂಡು ಉಣಿಸಿ ಸಂಹನನಕೆ ಉಪಚಯ
ಕರುಣಕೆ ಆನಂದ ಅನಿಮಿಷರಿಗೆ ಆತ್ಮ ಪ್ರದರ್ಶನ ಸುಖವನೀವ ಹರಿ||1||

ನೀಡದಂದದಲೆ ಇಪ್ಪ ಲಿಂಗಕೆ ಷೋಡಶ ಆತ್ಮಕ ರಸ ವಿಭಾಗವ ಮಾಡಿ
ಷೋಡಶ ಕಲೆಗಳಿಗೆ ಉಪಚಯಗಳನೆ ಕೊಡುತ
ಕ್ರೋಡ ಎಪ್ಪತ್ತೆರಡು ಸಾವಿರ ನಾಡಿಗತ ದೇವತೆಗಳೊಳಗೆ ಇದ್ದಾಡುತ ಆನಂದಾತ್ಮ
ಚರಿಸುವ ಲೋಕದೊಳು ತಾನು||2||

ವಾರಿವಾಚ್ಯನು ವಾರಿಯೊಳಗಿದ್ದು ಆರು ರಸವೆಂದೆನಿಸಿ
ಮೂವತ್ತಾರು ಸಾವಿರ ಸ್ತ್ರೀ ಪುರುಷನಾಡಿಯಲಿ ತದ್ರೂಪ ಧಾರಕನು ತಾನಾಗಿ
ಸರ್ವ ಶರೀರಗಳಲಿ ಅಹಶ್ಚರಾತ್ರಿ ವಿಹಾರ ಮಾಳ್ಪನು
ಬೃಹತಿಯೆಂಬ ಸುನಾಮದಿಂ ಕರೆಸಿ||3||

ಆರುರಸ ಸತ್ವಾದಿ ಭೇದದಿ ಆರು ಮೂರಾಗಿ ಇಹವು
ಸಾರಾಸಾರನೀತ ಪ್ರಚುರ ಖಂಡಾಖಂಡ ಚಿತ್ಪ್ರಚುರ
ಈರು ಅಧಿಕ ಎಪ್ಪತ್ತು ಸಾವಿರ ಮಾರಮಣನ ರಸಾಖ್ಯರೂಪ
ಶರೀರದೊಳು ಭೋಜ್ಯ ಸುಪದಾರ್ಥದಿ ತಿಳಿದು ಭುಂಜಿಪುದು||4||

ಕ್ಷೀರಗತ ರಸ ರೂಪಗಳು ಮುನ್ನೂರು ಮೇಲೆ ಐವತ್ತು ನಾಲ್ಕು
ಚಾರು ಘೃತಗತ ರೂಪಗಳು ಇಪ್ಪತ್ತರ ಒಂಭತ್ತು
ಸಾರ ಗುಡದೊಳಗೆ ಐದು ಸಾವಿರ ನೂರಾವೊಂದು
ಸುರೂಪ ದ್ವಿಸಹಸ್ರ ಆರೆರಡು ಶತ ಪಂಚ ವಿಂಶತಿ ರೂಪ ಫಲಗಳಲಿ||5||

ವಿಶದ ಸ್ಥಿರತೀಕ್ಷಣವು ನಿರ್ಹರ ರಸಗಳೊಳು
ಮೂರೈದುಸಾವಿರ ತ್ರಿಶತ ನವರೂಪಗಳ ಚಿಂತಿಸಿ ಭುಂಜಿಪುದು ವಿಷಯ
ಶ್ವಸನ ತತ್ತ್ವೇಶರೊಳಗಿದ್ದು ಈ ಪೆಸರಿನಿಂದಲಿ ಕರೆಸುವನು
ಧೇನಿಸಿದರೀ ಪರಿ ಮನಕೆ ಪೊಳೆವನು ಬಲ್ಲ ವಿಬುಧರಿಗೆ||6||

ಕಪಿಲ ನರಹರಿ ಭಾರ್ಗವತ್ರಯ ವಪುಷ ನೇತ್ರದಿ ನಾಸಿಕಾಸ್ಯದಿ
ಶಫರನಾಮಕ ಜಿಹ್ವೆಯಲಿ ದಂತದಲಿ ಹಂಸಾಖ್ಯ
ತ್ರಿಪದಿಪಾದ್ಯ ಹಯಾಸ್ಯ ವಾಚ್ಯದೊಳು ಅಪರಿಮಿತ ಸುಖಪೂರ್ಣ ಸಂತತ ಕೃಪಣರೊಳಗಿದ್ದು
ಅವರವರ ರಸ ಸ್ವೀಕರಿಸಿ ಕೊಡುವ||7||

ನಿರುಪಮಾನಂದಾತ್ಮ ಹರಿ ಸಂಕರುಷಣ ಪ್ರದ್ಯುಮ್ನರೂಪದಿ ಇರುತಿಹನು ಭೋಕ್ತ್ರುಗಳೊಳಗೆ
ತತ್ಶಕ್ತಿದನುಯೆನಿಸಿ ಕರೆಸುವನು
ನಾರಾಯಣ ಅನಿರುದ್ಧ ಎರಡುನಾಮದಿ ಭೋಜ್ಯವಸ್ತುಗನಿರುತ
ತರ್ಪಕನಾಗಿ ತೃಪ್ತಿಯನೀವ ಚೇತನಕೆ||8||

ವಾಸುದೇವನು ಒಳ ಹೊರಗೆ ಅವಕಾಶ ಕೊಡುವ ನಭಸ್ಥನಾಗಿ
ರಮಾಸಮೇತ ವಿಹಾರ ಮಾಳ್ಪನು ಪಂಚರೂಪದಲಿ
ಆ ಸರೋರುಹ ಸಂಭವಭವವಾಸವಾದಿ ಅಮರಾದಿ ಚೇತನ ರಾಶಿಯೊಳಗೆ
ಇಹನು ಎಂದರಿತವನು ಅವನೇ ಕೋವಿದನು||9||
ವಾಸುದೇವನು ಅನ್ನದೊಳು ನಾನಾ ಸುಭಕ್ಷ್ಯದಿ ಸಂಕರುಷಣ
ಕೃತೀಶ ಪರಮಾನ್ನದೊಳು ಘೃತದೊಳಗೆ ಇಪ್ಪ ಅನಿರುದ್ಧ
ಆ ಸುಪರ್ಣ ಅಂಸಗನು ಸೂಪದಿ ವಾಸವ ಅನುಜ ಶಾಕದೊಳು
ಮೂಲೇಶ ನಾರಾಯಣನು ಸರ್ವತ್ರದಲಿ ನೆಲೆಸಿಹನು||10||

ಅಗಣಿತ ಆತ್ಮ ಸುಭೋಜನ ಪದಾರ್ಥಗಳ ಒಳಗೆ
ಅಖಂಡ ವಾದ ಒಂದು ಅಗಳಿನೊಳು ಅನಂತ ಅಂಶದಲಿ ಖಂಡನೆಂದೆನಿಸಿ
ಜಗದಿ ಜೀವರ ತೃಪ್ತಿ ಪಡಿಸುವ ಸ್ವಗತ ಭೇದ ವಿವರ್ಜಿತನ
ಈರ್ಬಗೆಯ ರೂಪವನರಿತು ಭುಂಜಿಸಿ ಅರ್ಪಿಸು ಅವನಡಿಗೆ||11||

ಈ ಪರಿಯಲಿ ಅರಿತು ಉಂಬ ನರ ನಿತ್ಯ ಉಪವಾಸಿ ನಿರಾಮಯನು ನಿಷ್ಪಾಪಿ
ನಿತ್ಯ ಮಹಾ ಸುಯಜ್ಞಗಳು ಆಚರಿಸಿದವನು
ಪೋಪದು ಇಪ್ಪದು ಬಪ್ಪುದು ಎಲ್ಲ ರಮಾಪತಿಗೆ ಅಧಿಷ್ಠಾನವೆನ್ನು
ಕೃಪಾಪಯೋನಿಧಿ ಮಾತಲಾಲಿಸುವನು ಜನನಿಯಂತೆ||12||

ಆರೆರೆಡು ಸಾವಿರದ ಮೇಲೆ ಇನ್ನೂರ ಐವತ್ತೊಂದು ರೂಪದಿ
ಸಾರಭೋಕ್ತ ಅನಿರುದ್ಧ ದೇವನು ಅನ್ನಮಯನೆನಿಪ
ಮೂರೆರೆಡುವರೆ ಸಾವಿರದ ಮೇಲೆ ಮೂರಧಿಕ ನಾಲ್ವತ್ತು ರೂಪದಿ
ತೋರುತಿಹ ಪ್ರದ್ಯುಮ್ನ ಜಗದೊಳು ಪ್ರಾಣಮಯನಾಗಿ||13||

ಎರಡು ಕೋಶಗಳ ಒಳ ಹೊರಗೆ ಸಂಕರುಷಣ ಇದು ಸುಲಕ್ಷದ ಅರವತ್ತೆರೆಡು ಸಾವಿರದ
ಏಳಧಿಕ ಶತ ರೂಪಗಳ ಧರಿಸಿ ಕರೆಸಿಕೊಂಬ ಮನೋಮಯ ಎಂದು
ಅರವಿದೂರನು ಈರೆರೆಡು ಸಾವಿರದ ಮುನ್ನೂರು
ಅದ ಮೇಲೆ ನಾಲ್ಕಧಿಕ ಎಪ್ಪತ್ತು||14||

ರೂಪದಿಂ ವಿಜ್ಞಾನಮಯನು ಎಂಬೀ ಪೆಸರಿನಿಂ ವಾಸುದೇವನು
ವ್ಯಾಪಿಸಿಹ ಮಹದಾದಿ ತತ್ತ್ವದಿ ತತ್ಪತಿಗಳೊಳಗೆ
ಈ ಪುರುಷ ನಾಮಕನ ಶುಭ ಸ್ವೇದಾಪಳು ಎನಿಸಿದ ರಮಾಂಬ
ತಾ ಬ್ರಹ್ಮಾಪರೋಕ್ಷಿಗಳು ಆದವರ ಲಿಂಗಾಂಗ ಕೆಡಿಸುವಳು||15||

ಐದು ಸಾವಿರ ನೂರಿಪ್ಪತ್ತೈದು ನಾರಾಯಣ ರೂಪವ ತಾ ಧರಿಸಿಕೊಂಡು
ಅನುದಿನದಿ ಆನಂದಮಯನೆನಿಪ
ಐದು ಲಕ್ಷದ ಮೇಲೆ ಎಂಭತ್ತೈದುಸಾವಿರ ನಾಲ್ಕು ಶತಗಳ
ಐದು ಕೋಶಾತ್ಮಕ ವಿರಿಂಚಾಡದೊಳು ತುಂಬಿಹನು||16||

ನೂರಾವೊಂದು ಸುರೂಪದಿಂ ಶಾಂತೀರಮಣ ತಾನು ಅನ್ನನೆನಿಪ
ಐನೂರ ಮೇಲೆ ಮೂರಧಿಕ ದಶ ಪ್ರಾಣಾಖ್ಯ ಪ್ರದ್ಯುಮ್ನ
ತೋರುತಿಹನು ಐವತ್ತೈದುಸಾವಿರ ವಿಕಾರ ಮನದೊಳು ಸಂಕರುಷಣ
ಐನೂರ ಚತುರಾಶೀತಿ ವಿಜ್ಞಾನಾತ್ಮ ವಿಶ್ವಾಖ್ಯ||17||

ಮೂರು ಸಾವಿರದ ಅರ್ಧಶತ ಮೇಲೆ ಈರು ಅಧಿಕ ರೂಪಗಳ ಧರಿಸಿ
ಶರೀರದೊಳಗೆ ಆನಂದಮಯ ನಾಯಾಯಣಾಹ್ವಯನು
ಈರೆರೆಡು ಸಾವಿರದ ಮೇಲೆ ಮುನ್ನೂರ ಐದು ಸುರೂಪದಿಂದಲಿ
ಭಾರತೀಶನೊಳು ಇಪ್ಪ ನವನೀತಸ್ಥ ಘೃತದಂತೆ||18||

ಮೂರಧಿಕ ಐವತ್ತು ಪ್ರಾಣ ಶರೀರದೊಳಗೆ ಅನಿರುದ್ಧನು ಇಪ್ಪ
ಐನೂರು ಹನ್ನೊಂದು ಅಧಿಕ ಅಪಾನನೊಳು ಇಪ್ಪ ಪ್ರದ್ಯುಮ್ನ
ಮೂರನೇ ವ್ಯಾನನೊಳಗೆ ಐದರೆ ನೂರು ರೂಪದಿ ಸಂಕರುಷಣ
ಐನೂರ ಮೂವತ್ತೈದು ಉದಾನನೊಳು ಇಪ್ಪ ಮಾಯೇಶ||19||

ಮೂಲ ನಾರಾಯಣನು ಐವತ್ತೇಳಧಿಕ ಐನೂರು ರೂಪವ ತಾಳಿ
ಸರ್ವತ್ರದಿ ಸಮಾನನೊಳಿಪ್ಪ ಸರ್ವಜ್ಞ
ಲೀಲೆಗೈವನು ಸಾವಿರದ ಮೇಲೆ ಏಳು ನೂರು ಹನ್ನೊಂದು ರೂಪವ ತಾಳಿ
ಪಂಚಪ್ರಾಣರೊಳು ಲೋಕಗಳ ಸಲಹುವನು||20||

ತ್ರಿನವತಿ ಸುರೂಪಾತ್ಮಕ ಅನಿರುದ್ಧನು ಸದಾ ಯಜಮಾನನಾಗಿದ್ದು
ಅನಲ ಯಮ ಸೋಮಾದಿ ಪಿತೃದೇವತೆಗಳಿಗೆ ಅನ್ನನು ಎನಿಪನು
ಆ ಪ್ರದ್ಯುಮ್ನ ಸಂಕರುಷಣ ವಿಭಾಗವ ಮಾಡಿಕೊಟ್ಟು ಉಂಡುಣಿಪ
ನಿತ್ಯಾನಂದ ಭೋಜನದಾಯಿ ತುರ್ಯಾಹ್ವ||21||

ಷಣ್ಣವತಿ ನಾಮಕನು ವಸು ಮೂಗಣ್ಣ ಭಾಸ್ಕರರ ಒಳಗೆ ನಿಂತು
ಪ್ರಾಪನ್ನರು ಅನುದಿನ ನಿಷ್ಕಪಟ ಸದ್ಭಕ್ತಿಯಲಿ ಮಾಳ್ಪ ಪುಣ್ಯ ಕರ್ಮವ ಸ್ವೀಕರಿಸಿ
ಕಾರುಣ್ಯ ಸಾಗರನು ಆ ಪಿತೃಗಳಿಗೆ
ಅಗಣ್ಯ ಸುಖವಿತ್ತು ಅವರ ಪೊರೆವನು ಎಲ್ಲ ಕಾಲದಲಿ||22||

ಸುತಪ ಏಕ ಉತ್ತರ ಸುಪಂಚಾಶತ ವರಣ ಕರಣದಿ ಚತುರ ವಿಂಶತಿ ಸುತತ್ವದಿ
ಧಾತುಗಳೊಳು ಇದ್ದು ಅವಿರತ ಅನಿರುದ್ಧ
ಜತನ ಮಾಳ್ಪನು ಜಗದಿ ಜೀವ ಪ್ರತತಿಗಳ
ಷಣ್ಣವತಿ ನಾಮಕ ಚತುರ ಮೂರ್ತಿಗಳ ಅರ್ಚಿಸುವರು ಅದರಿಂದ ಬಲ್ಲವರು||23||

ಅಬುಜಾಂಡ ಉದರನು ವಿಪಿನದಿ ಶಬರಿ ಯಂಜಲನುಂಡ ಗೋಕುಲದ ಅಬಲೆಯರನು
ಓಲಿಸಿದನು ಋಷಿಪತ್ನಿಯರು ಕೊಟ್ಟನ್ನ ಸುಭುಜ ತಾ ಭುಂಜಿಸಿದ
ಸ್ವರಮಣ ಕುಬುಜಗಂಧಕೊಲಿದ ಮುನಿಗಣ ವಿಬುಧ ಸೇವಿತ
ಬಿಡುವನೆ ನಾವು ಇತ್ತ ಕರ್ಮಫಲ||24||

ಗಣನೆಯಿಲ್ಲದ ಪರಮಸುಖ ಸುದ್ಗುಣ ಗಣಂಗಳ ಲೇಶ ಲೇಶಕೆ ಎಣೆಯೆನಿಸದು
ರಮಾಬ್ಜಭವ ಶಕ್ರಾದಿಗಳ ಸುಖವು
ಉಣುತ ಉಣುತ ಮೈಮರೆದು ಕೃಷ್ಣಾರ್ಪಣವೆನಲು
ಕೈಕೊಂಬನು ಅರ್ಭಕ ಜನನಿ ಭೋಜನ ಸಮಯದಲಿ ಕೈವಡ್ದು ವಂದದಲಿ||25||

ಜೀವಕೃತ ಕರ್ಮಗಳ ಬಿಡದೆ ರಮಾವರನು ಸ್ವೀಕರಿಸಿ
ಫಲಗಳನು ಈವನು ಅಧಿಕಾರಾನುಸಾರದಲಿ ಅವರಿಗೆ ಅನವರತ
ಪಾವಕನು ಸರ್ವಸ್ವ ಭುಂಜಿಸಿ ತಾ ವಿಕಾರವನು ಐದನು ಒಮ್ಮೆಗೆ
ಪಾವನಕೆ ಪಾವನನೆನಿಪ ಹರಿಯುಂಬುದು ಎನರಿದು||26||

ಕಳುಷಜಿಹ್ವೆಗೆ ಸುಷ್ಟುಭೋಜನ ಜಲ ಮೊದಲು ವಿಷತೋರುವುದು
ನಿಷ್ಕಲುಷ ಜಿಹ್ವೆಗೆ ಸುರಸ ತೋರುವುದು ಎಲ್ಲ ಕಾಲದಲಿ
ಸುಲಲಿತಾಂಗಗೆ ಸಕಲ ರಸ ಮಂಗಳವೆನಿಸುತಿಹುದು
ಅನ್ನಮಯ ಕೈಕೊಳದೆ ಬಿಡುವನೆ ಪೂತನಿಯ ವಿಷ ಮೊಲೆಯನು ಉಂಡವನು||27||

ಪೇಳಲಿ ಏನು ಸಮೀರ ದೇವನು ಕಾಳಕೂಟವನು ಉಂಡು ಲೋಕವ ಪಾಲಿಸಿದ
ತದ್ದಾಸನು ಓರ್ವನು ಅಮೃತನೆನಿಸಿದನು
ಶ್ರೀ ಲಕುಮಿವಲ್ಲಭ ಶುಭಾಶುಭ ಜಾಲ ಕರ್ಮಗಳ ಉಂಬನು
ಉಪಚಯದ ಏಳಿಗೆಗಳು ಇವಗಿಲ್ಲವೆಂದಿಗು ಸ್ವರಸಗಳ ಬಿಟ್ಟು||28||

ಈ ಪರಿಯಲಿ ಅಚ್ಯುತನ ತತ್ತದ್ರೂಪ ತನ್ನಾಮಗಳ ಸಲೆ
ನಾನಾ ಪದಾರ್ಥದಿ ನೆನೆನೆನೆದು ಭುಂಜಿಸುತಲಿ ಇರು ವಿಷಯ
ಪ್ರಾಪಕ ಸ್ಥಾಪಕ ನಿಯಾಮಕ ವ್ಯಾಪಕನು ಎಂದರಿದು
ನೀ ನಿರ್ಲೇಪನು ಆಗಿರು ಪುಣ್ಯ ಪಾಪಗಳ ಅರ್ಪಿಸು ಅವನ ಅಡಿಗೆ||29||

ಐದು ಲಕ್ಷ ಎಂಭತ್ತರ ಒಂಭತ್ತು ಆದ ಸಾವಿರದ ಏಳುನೂರರ ಐದು ರೂಪವ ಧರಿಸಿ
ಭೋಕ್ತ್ರುಗ ಭೋಜ್ಯನೆಂದೆನಿಸಿ
ಶ್ರೀಧರಾದುರ್ಗಾರಮಣ ಪಾದಾದಿ ಶಿರ ಪರ್ಯಂತ ವ್ಯಾಪಿಸಿ ಕಾದು ಕೊಂಡಿಹ
ಸಂತತ ಜಗನ್ನಾಥ ವಿಠಲನು||30||
********

harikathAmRutasAra gurugaLa karuNadindApanitu kELuve
parama BagavadBaktaru idanAdaradi kELuvudu||

vanajAnDadoLu uLLa aKiLa cEtanaru Bunjipa
caturavidha BOjanapadArthadi caturavidha rasarUpa tAnAgi
manake bandante unDu uNisi saMhananake upacaya
karuNake Ananda animiSharige Atma pradarSana suKavanIva hari||1||

nIDadandadale ippa liMgake ShODaSa Atmaka rasa viBAgava mADi
ShODaSa kalegaLige upacayagaLane koDuta
krODa eppatteraDu sAvira nADigata dEvategaLoLage iddADuta AnaMdAtma
carisuva lOkadoLu tAnu||2||

vArivAcyanu vAriyoLagiddu Aru rasavendenisi
mUvattAru sAvira strI puruShanADiyali tadrUpa dhArakanu tAnAgi
sarva SarIragaLali ahaScarAtri vihAra mALpanu
bRuhatiyeMba sunAmadiM karesi||3||

Arurasa satvAdi BEdadi Aru mUrAgi ihavu
sArAsAranIta pracura KanDAKanDa citpracura
Iru adhika eppattu sAvira mAramaNana rasAKyarUpa
SarIradoLu BOjya supadArthadi tiLidu Bunjipudu||4||

kShIragata rasa rUpagaLu munnUru mEle aivattu nAlku
cAru GRutagata rUpagaLu ippattara oMBattu
sAra guDadoLage aidu sAvira nUrAvondu
surUpa dvisahasra AreraDu Sata panca viMSati rUpa PalagaLali||5||

viSada sthiratIkShaNavu nirhara rasagaLoLu
mUraidusAvira triSata navarUpagaLa ciMtisi Bunjipudu viShaya
Svasana tattvESaroLagiddu I pesarinindali karesuvanu
dhEnisidarI pari manake poLevanu balla vibudharige||6||

kapila narahari BArgavatraya vapuSha nEtradi nAsikAsyadi
SaParanAmaka jihveyali daMtadali haMsAKya
tripadipAdya hayAsya vAcyadoLu aparimita suKapUrNa santata kRupaNaroLagiddu
avaravara rasa svIkarisi koDuva||7||

nirupamAnandAtma hari sankaruShaNa pradyumnarUpadi irutihanu BOktrugaLoLage
tatSaktidanuyenisi karesuvanu
nArAyaNa aniruddha eraDunAmadi BOjyavastuganiruta
tarpakanAgi tRuptiyanIva cEtanake||8||

vAsudEvanu oLa horage avakASa koDuva naBasthanAgi
ramAsamEta vihAra mALpanu pancarUpadali
A sarOruha saMBavaBavavAsavAdi amarAdi cEtana rASiyoLage
ihanu endaritavanu avanE kOvidanu||9||
vAsudEvanu annadoLu nAnA suBakShyadi sankaruShaNa
kRutISa paramAnnadoLu GRutadoLage ippa aniruddha
A suparNa aMsaganu sUpadi vAsava anuja SAkadoLu
mUlESa nArAyaNanu sarvatradali nelesihanu||10||

agaNita Atma suBOjana padArthagaLa oLage
aKanDa vAda oMdu agaLinoLu ananta aMSadali KanDanendenisi
jagadi jIvara tRupti paDisuva svagata BEda vivarjitana
Irbageya rUpavanaritu Bunjisi arpisu avanaDige||11||

I pariyali aritu uMba nara nitya upavAsi nirAmayanu niShpApi
nitya mahA suyaj~jagaLu Acarisidavanu
pOpadu ippadu bappudu ella ramApatige adhiShThAnavennu
kRupApayOnidhi mAtalAlisuvanu jananiyaMte||12||

ArereDu sAvirada mEle innUra aivattoMdu rUpadi
sAraBOkta aniruddha dEvanu annamayanenipa
mUrereDuvare sAvirada mEle mUradhika nAlvattu rUpadi
tOrutiha pradyumna jagadoLu prANamayanAgi||13||

eraDu kOSagaLa oLa horage sankaruShaNa idu sulakShada aravattereDu sAvirada
ELadhika Sata rUpagaLa dharisi karesikoMba manOmaya endu
aravidUranu IrereDu sAvirada munnUru
ada mEle nAlkadhika eppattu||14||

rUpadiM vij~jAnamayanu eMbI pesariniM vAsudEvanu
vyApisiha mahadAdi tattvadi tatpatigaLoLage
I puruSha nAmakana SuBa svEdApaLu enisida ramAMba
tA brahmAparOkShigaLu Adavara lingAMga keDisuvaLu||15||

aidu sAvira nUrippattaidu nArAyaNa rUpava tA dharisikonDu
anudinadi Anandamayanenipa
aidu lakShada mEle eMBattaidusAvira nAlku SatagaLa
aidu kOSAtmaka virincADadoLu tuMbihanu||16||

nUrAvondu surUpadiM SAntIramaNa tAnu annanenipa
ainUra mEle mUradhika daSa prANAKya pradyumna
tOrutihanu aivattaidusAvira vikAra manadoLu sankaruShaNa
ainUra caturASIti vij~jAnAtma viSvAKya||17||

mUru sAvirada ardhaSata mEle Iru adhika rUpagaLa dharisi
SarIradoLage Anandamaya nAyAyaNAhvayanu
IrereDu sAvirada mEle munnUra aidu surUpadindali
BAratISanoLu ippa navanItastha GRutadante||18||

mUradhika aivattu prANa SarIradoLage aniruddhanu ippa
ainUru hannondu adhika apAnanoLu ippa pradyumna
mUranE vyAnanoLage aidare nUru rUpadi sankaruShaNa
ainUra mUvattaidu udAnanoLu ippa mAyESa||19||

mUla nArAyaNanu aivattELadhika ainUru rUpava tALi
sarvatradi samAnanoLippa sarvaj~ja
lIlegaivanu sAvirada mEle ELu nUru hannoMdu rUpava tALi
paMcaprANaroLu lOkagaLa salahuvanu||20||

trinavati surUpAtmaka aniruddhanu sadA yajamAnanAgiddu
anala yama sOmAdi pitRudEvategaLige annanu enipanu
A pradyumna sankaruShaNa viBAgava mADikoTTu unDuNipa
nityAnaMda BOjanadAyi turyAhva||21||

ShaNNavati nAmakanu vasu mUgaNNa BAskarara oLage nintu
prApannaru anudina niShkapaTa sadBaktiyali mALpa puNya karmava svIkarisi
kAruNya sAgaranu A pitRugaLige
agaNya suKavittu avara porevanu ella kAladali||22||

sutapa Eka uttara supaMcASata varaNa karaNadi catura viMSati sutatvadi
dhAtugaLoLu iddu avirata aniruddha
jatana mALpanu jagadi jIva pratatigaLa
ShaNNavati nAmaka catura mUrtigaLa arcisuvaru adarinda ballavaru||23||

abujAnDa udaranu vipinadi Sabari yanjalanunDa gOkulada abaleyaranu
Olisidanu RuShipatniyaru koTTanna suBuja tA Bunjisida
svaramaNa kubujagaMdhakolida munigaNa vibudha sEvita
biDuvane nAvu itta karmaPala||24||

gaNaneyillada paramasuKa sudguNa gaNangaLa lESa lESake eNeyenisadu
ramAbjaBava SakrAdigaLa suKavu
uNuta uNuta maimaredu kRuShNArpaNavenalu
kaikoMbanu arBaka janani BOjana samayadali kaivaDdu vaMdadali||25||

jIvakRuta karmagaLa biDade ramAvaranu svIkarisi
PalagaLanu Ivanu adhikArAnusAradali avarige anavarata
pAvakanu sarvasva Bunjisi tA vikAravanu aidanu ommege
pAvanake pAvananenipa hariyuMbudu enaridu||26||

kaLuShajihvege suShTuBOjana jala modalu viShatOruvudu
niShkaluSha jihvege surasa tOruvudu ella kAladali
sulalitAngage sakala rasa mangaLavenisutihudu
annamaya kaikoLade biDuvane pUtaniya viSha moleyanu unDavanu||27||

pELali Enu samIra dEvanu kALakUTavanu unDu lOkava pAlisida
taddAsanu Orvanu amRutanenisidanu
SrI lakumivallaBa SuBASuBa jAla karmagaLa uMbanu
upacayada ELigegaLu ivagillaveMdigu svarasagaLa biTTu||28||

I pariyali acyutana tattadrUpa tannAmagaLa sale
nAnA padArthadi nenenenedu Bunjisutali iru viShaya
prApaka sthApaka niyAmaka vyApakanu endaridu
nI nirlEpanu Agiru puNya pApagaLa arpisu avana aDige||29||

aidu lakSha eMBattara oMBattu Ada sAvirada ELunUrara aidu rUpava dharisi
BOktruga BOjyanendenisi
SrIdharAdurgAramaNa pAdAdi Sira paryanta vyApisi kAdu konDiha
santata jagannAtha viThalanu||30||
************

meaning of 10th sloka
ಶ್ರೀ ಹರಿಕಥಾಮೃತಸಾರದ ಭೋಜನ ಸಂಧಿಯಲ್ಲಿ ಬರುವ ೧೦ನೆಯ ನುಡಿಯ ಅರ್ಥ..
👇
|ವಾಸುದೇವನು|.
ವಾಸುದೇವ ನಾಮಕ ಪರಮಾತ್ಮನು..
|ಅನ್ನದೊಳು| ಅನ್ನದೊಳಗೆ
|ನಾನಾ ಸುಭಕ಼್ಯದಿ| 
ಇಲ್ಲಿ ಸು ಅಂದರೆ ನಿಷಿದ್ಧ ವಲ್ಲದ ಸಮೀಚೀನವಾದ ನಾನಾ ಭಕ್ಚ್ಯ ಹೋಳಿಗೆ,ಮಂಡಿಗೆ ಮುಂತಾದ ಉತ್ತಮ ಭಕ್ಷ್ಯಗಳಲ್ಲಿ.
|ಸಂಕರುಷಣ| 
ಜಯಾಪತಿಯಾದ ಸಂಕರುಷಣ ಮೂರುತಿಯು.
|ಕೃತೀಶ| 
ಕೃತಿಪತಿಯಾದ ಪ್ರದ್ಯುಮ್ನನಾಮಕ ಪರಮಾತ್ಮನು.
|ಪರಮಾನ್ನದೊಳು| ಪಾಯಸದೊಳಗೆ.
|ಅನಿರುದ್ಧ| ಅನಿರುದ್ಧ ರೂಪಿ ಪರಮಾತ್ಮನು.
|ಘೃತದೊಳಗೆ|
ಅಂದರೆತುಪ್ಪ ದೊಳಗೆ |ಇಪ್ಪನು|  ಅಂದರೆ ಇರುವನು.
|ಆಸುಪರ್ಣಂಸಗನು| ಅಂದರೆ ಸುಪರ್ಣ ಅಂದರೆ ಗರುಡ. 
|ಅಂಸಗನು| 
ಅವನ ಹೆಗಲಮೇಲೆ ಕುಳಿತಿರುವವನು ಯಾರೆಂದರೆ ಆ ಶ್ರೀಹರಿ.
|ಸೂಪದಿ| ತೊವ್ವೆಯಲ್ಲಿ.
|ವಾಸವನುಜ| ಅಂದರೆ 
ಇಂದ್ರ ದೇವರ ತಮ್ಮನಾದ ವಾಮನರೂಪಿ ಹರಿಯು. (ದೇವತೆಗಳು ಅದಿತಿಯ ಮಕ್ಕಳು.ಅಂತಹ ಅದಿತಿಯ ಗರ್ಭದೊಳು ವಾಮನ ರೂಪಿ ಭಗವಂತ ಪ್ರಕಟಗೊಳ್ಳುವ.ಹಾಗಾಗಿ ತಮ್ಮನ ವರಸೆಯನ್ನು ಇಲ್ಲಿ ಮಾನವಿ ಪ್ರಭುಗಳು  ಹೇಳಿದ್ದಾರೆ)
|ಶಾಕದೊಳು| 
ನಾನಾತರಹದ ಕಾಯಿಪಲ್ಲೆ |ಮೂಲೇಶ|
ಎಲ್ಲಾ ರೂಪಗಳಿಗು ಮೂಲನಾದ ಆ ನಾರಾಯಣನು |
|ಅನ್ನಾದಿಗಳಲ್ಲಿ|
ಅನ್ನ ಭೋಜನ ಮಾಡುವದರಲ್ಲಿ ಇದ್ದು ಪಚನ ಕ್ರಿಯಾ,ರಸವಿಭಾಗ,ತುಷ್ಟಿ ಮುಂತಾದ ಕಾರ್ಯವನ್ನು ಮಾಡುವನು
|ಸರ್ವತ್ರ|
ಒಳಗು ಹೊರಗು 
|ನೆಲೆಸಿಹನು| 
ಸದಾ ಇರುವನು
ಈ ರೀತಿ 
ಅನುಸಂಧಾನ ದಿಂದ ಚಿಂತಿಸುತ್ತಾ ಉಂಡರೆ ಅದುವರೆಗೂ ಪ್ರಾಣಾಗ್ನಿ ಹೋತ್ರಎನಿಸುತ್ತದೆ.
ಆ ರೀತಿಯ ಚಿಂತನೆ ಇಲ್ಲದೆ ಹಾಗೆಯೇ ಉಂಡರು ಏನು ಫಲವಿಲ್ಲ.
🙏ಶ್ರೀಕೃಷ್ಣಾರ್ಪಣಮಸ್ತು🙏
ಧಾರುಣಿಯೊಳು ಮೆರೆದ ನಮ್ಮ ಗುರು|ದೊರೆ ಜಗನ್ನಾಥಾಖ್ಯ ದಾಸರ ನೆನೆವೆನನವರತಾ||
🙏ಶ್ರೀ ಕಪಿಲಾಯ ನಮಃ🙏
*******