Showing posts with label ಇಂದಿರೇಶ ಬಂದು ಕಾಯೋ ಸಿಂಧು ಶಾಯಿ ವಾಸುದೇವ shyamasundara INDIRESHA BANDU KAAYO SHAAYI VAASUDEVA. Show all posts
Showing posts with label ಇಂದಿರೇಶ ಬಂದು ಕಾಯೋ ಸಿಂಧು ಶಾಯಿ ವಾಸುದೇವ shyamasundara INDIRESHA BANDU KAAYO SHAAYI VAASUDEVA. Show all posts

Wednesday, 1 December 2021

ಇಂದಿರೇಶ ಬಂದು ಕಾಯೋ ಸಿಂಧು ಶಾಯಿ ವಾಸುದೇವ ankita shyamasundara INDIRESHA BANDU KAAYO SHAAYI VAASUDEVA

ಇಂದಿರೇಶ ಬಂದು ಕಾಯೋ ಸಿಂಧು ಶಾಯಿವಾಸುದೇವ

ನೊಂದೆನಯ್ಯ ತಾಪತ್ರಯದಿ | ಪಾಲಿಸಯ್ಯ

ಹರಿಯೇ ಪಾಲಿಸಯ್ಯ ಪ

ಧ್ಯಾನ ವರಿಯೆ ಜ್ಞಾನವರಿಯೆ | ಮೌನವರಿಯೆ ನಾ

ದೀನ ಬಂಧು ನೀನೆ ಎಂದು |

ನಾನಂಬಿದೆ ಹರಿಯೆ ನಾನಂಬಿದೆ 1

ಸಾರವೆಂಬೊ ಸಂಸಾರ | ಶರಧಿಯಲ್ಲಿ ಮುಳುಗಿರುವೆ

ಪಾರುಗಾಣದೆ ಬಾಯಿ ಬಿಡುವೆ

ನಾರಾಯಣ ಶ್ರೀಮನ್ನಾರಾಯಣ 2

ಆಸೆಯೆಂಬ ಪಾಶಕಡಿಯೊ | ದಾಸನೆಂದು ನೀ ಎನ್ನ |

ದೋಷದೂರ ಶಾಮಸುಂದರ |

ಫೋಷಿಸಯ್ಯ ಹರಿಯೆ ಪೋಷಿಸಯ್ಯ 3

***