Showing posts with label ದಾತ ಸನ್ಮುನಿಗಣ ನಾಥ ಕಾಮಿತ ಕಲ್ಪವೃಕ್ಷಾ ಕಲ್ಪವೃಕ್ಷಾ ಆಶ್ರಿತಜನದಕ್ಷಾ gurujagannatha vittala. Show all posts
Showing posts with label ದಾತ ಸನ್ಮುನಿಗಣ ನಾಥ ಕಾಮಿತ ಕಲ್ಪವೃಕ್ಷಾ ಕಲ್ಪವೃಕ್ಷಾ ಆಶ್ರಿತಜನದಕ್ಷಾ gurujagannatha vittala. Show all posts

Wednesday, 1 September 2021

ದಾತ ಸನ್ಮುನಿಗಣ ನಾಥ ಕಾಮಿತ ಕಲ್ಪವೃಕ್ಷಾ ಕಲ್ಪವೃಕ್ಷಾ ಆಶ್ರಿತಜನದಕ್ಷಾ ankita gurujagannatha vittala

..

ದಾತ ಸನ್ಮುನಿಗಣ -

ನಾಥ ಕಾಮಿತ ಕಲ್ಪವೃಕ್ಷಾ - ಕಲ್ಪವೃಕ್ಷಾ ಆಶ್ರಿತಜನದಕ್ಷಾ ಪ


ಧಾತ ಮುಖ ಸುರಮುನಿಯ ಸಂತತಿ

ಪ್ರೀತಿ ಪೂರ್ವಕದಿಪ್ಪ ಕಾರಣ

ಜೋತಿ ವೃಂದಾವನದಿ ತಾ ನಿ -

ರ್ಭೀತ ಮಹಿಮೆಯ ತೋರ್ಪಜಗದಿ ಅ.ಪ


ಬಿಕ್ಷುನಾಯಕ ಸರ್ವಾಪೇಕ್ಷದಾಯಕನೆಂಬ ಬಿರಿದು

ನೆಂಬ ಬಿರಿದು ಪೊತ್ತಿಹ ಪಾಪ ತÀರಿದು

ಲಕ್ಷ್ಮೀರಮಣನ ಪಾದ ಪದುಮವ

ವಕ್ಷೋಮಂದಿರದೊಳಗೆ ತಾನಪ -

ರೋಕ್ಷಕರಿಸೀ ಸರ್ವಜನರಾ -

ಪೇಕ್ಷ ಪೂರ್ತಿಸಿ ಮೆರೆವ ಗುರುವರ 1


ದಂಡಕಾಷಾಯ ಕ - ಮಂಡುಲಧರ ಹಂಸರೂಪಾ

ಹಂಸರೂಪ ಅಮಿತ ಪ್ರತಾಪ

ತೊಂಡ ಜಲಜೋತ್ಫುಲ್ಲ ಕರ ಮಾ -

ರ್ತಾಂಡ ಸನ್ನಿ ಭವನೆನಿಪÀ, ತ್ರಿಜಗ -

ನ್ಮಂಡಲಾನತನ, ಸುಜನ ಮನ್ಮನೋ -

ಪುಂಡರೀಕ ನಿವಾಸ ನಿರ್ಮಲ 2


ಕಿಟಜ ಸರಿದ್ವರ - ತಟವಾಸ ಗುರುಜಗನ್ನಾಥ

ಜಗನ್ನಾಥ ವಿಠಲ ಗುಣಗಾಥ

ತಟನಿ ಲಹರೀ ಮಧ್ಯ ತನ ಹೃ

ತ್ಪುಟ ಸುನಾವಿಯ ಮಾಡಿ ಸಂತತ

ಅಟನಗೈಯುತ ಜಗದಿರಾಜಿಪ

ಚಟುಲ ವಿಕ್ರಮ ಕರುಣಸಾಗರ 3

***