Wednesday, 1 September 2021

ದಾತ ಸನ್ಮುನಿಗಣ ನಾಥ ಕಾಮಿತ ಕಲ್ಪವೃಕ್ಷಾ ಕಲ್ಪವೃಕ್ಷಾ ಆಶ್ರಿತಜನದಕ್ಷಾ ankita gurujagannatha vittala

..

ದಾತ ಸನ್ಮುನಿಗಣ -

ನಾಥ ಕಾಮಿತ ಕಲ್ಪವೃಕ್ಷಾ - ಕಲ್ಪವೃಕ್ಷಾ ಆಶ್ರಿತಜನದಕ್ಷಾ ಪ


ಧಾತ ಮುಖ ಸುರಮುನಿಯ ಸಂತತಿ

ಪ್ರೀತಿ ಪೂರ್ವಕದಿಪ್ಪ ಕಾರಣ

ಜೋತಿ ವೃಂದಾವನದಿ ತಾ ನಿ -

ರ್ಭೀತ ಮಹಿಮೆಯ ತೋರ್ಪಜಗದಿ ಅ.ಪ


ಬಿಕ್ಷುನಾಯಕ ಸರ್ವಾಪೇಕ್ಷದಾಯಕನೆಂಬ ಬಿರಿದು

ನೆಂಬ ಬಿರಿದು ಪೊತ್ತಿಹ ಪಾಪ ತÀರಿದು

ಲಕ್ಷ್ಮೀರಮಣನ ಪಾದ ಪದುಮವ

ವಕ್ಷೋಮಂದಿರದೊಳಗೆ ತಾನಪ -

ರೋಕ್ಷಕರಿಸೀ ಸರ್ವಜನರಾ -

ಪೇಕ್ಷ ಪೂರ್ತಿಸಿ ಮೆರೆವ ಗುರುವರ 1


ದಂಡಕಾಷಾಯ ಕ - ಮಂಡುಲಧರ ಹಂಸರೂಪಾ

ಹಂಸರೂಪ ಅಮಿತ ಪ್ರತಾಪ

ತೊಂಡ ಜಲಜೋತ್ಫುಲ್ಲ ಕರ ಮಾ -

ರ್ತಾಂಡ ಸನ್ನಿ ಭವನೆನಿಪÀ, ತ್ರಿಜಗ -

ನ್ಮಂಡಲಾನತನ, ಸುಜನ ಮನ್ಮನೋ -

ಪುಂಡರೀಕ ನಿವಾಸ ನಿರ್ಮಲ 2


ಕಿಟಜ ಸರಿದ್ವರ - ತಟವಾಸ ಗುರುಜಗನ್ನಾಥ

ಜಗನ್ನಾಥ ವಿಠಲ ಗುಣಗಾಥ

ತಟನಿ ಲಹರೀ ಮಧ್ಯ ತನ ಹೃ

ತ್ಪುಟ ಸುನಾವಿಯ ಮಾಡಿ ಸಂತತ

ಅಟನಗೈಯುತ ಜಗದಿರಾಜಿಪ

ಚಟುಲ ವಿಕ್ರಮ ಕರುಣಸಾಗರ 3

***


No comments:

Post a Comment