ಜಯತೀರ್ಥ ಗುರು ಹೃದ್ಗುಹಾಂತರ ವಾಸ
ವಾಯ್ವಂತರ್ಗತ ಶ್ರೀ ಕೃಷ್ಣಯ್ಯ ಜೀಯಾ ಪ
ಕಾಯೈಯ ನಿನ್ನವ ನಿವನೆಂದು ಅನುದಿನದಿ
ಕಾಯ ಮನ ವಚನದಲಿ ನಿನ್ನ ನೆನವಿರಲಿ
ಜೀಯಾ ಶ್ರೀ ವಿಜಯರಾಯರ ಸೇವೆ
ಕಾರ್ಯಗಳಿಗಭಯವ ನಿಡೈಯಾ ಜೀಯಾ 1
ಲೌಕಿಕದಲ್ಲಿಹನೆಂದು ನಿರಾಕರಿಸದೇಲೆ
ನಿನ್ನ ಏಕಾಂತ ಭಕುತಿಯನಿತ್ತು ಸಲಹೋ
ಶ್ರೀ ಕಳತ್ರನೆ ಇವನ ವ್ಯಾಕುಲಗಳ ಹರಿಸಿ
ಕೃಪಾಕಟಾಕ್ಷದಿ ನೋಡಿ ಕಾಯಬೇಕೈಯಾ 2
ಭಕ್ತವತ್ಸಲ ನಿನ್ನ ಭಕ್ತನಿವನೆಂದೆನಿಸು
ಭಕ್ತಿಬಲe್ಞÁನ ಸಾಧನವನಿತ್ತು
ಶಕ್ತನೆನಿಸಿಹಪರದಿ ಭಕ್ತಿನಿನ್ನೊಳು ಇರಲಿ
ಮುಕ್ತರೊಡೆಯ ಕೃಷ್ಣವಿಠಲ ಶ್ರೀ ವೆಂಕಟೇಶ 3
****