Showing posts with label ಆನಂದ ಭರಿತರಾಗಿ ಆಚಾರ್ಯರು others. Show all posts
Showing posts with label ಆನಂದ ಭರಿತರಾಗಿ ಆಚಾರ್ಯರು others. Show all posts

Friday, 27 December 2019

ಆನಂದ ಭರಿತರಾಗಿ ಆಚಾರ್ಯರು others

by ಗಲಗಲಿಅವ್ವನವರು
ಆನಂದ ಭರಿತರಾಗಿ ಆಚಾರ್ಯರು
ಆನಂದ ಭರಿತರಾಗಿಕುಂದಣರತ್ನ 
ದೊಸ್ತಚಂದದ ವಸ್ತ್ರನಮಗೆ ಅಂದಣವ ಕೊಟ್ಟರು ಪ.

ವ್ಯಾಲಾಶಯನನ ಕಥೆಕೇಳುತ ಬೆಳತನಕ
ಭಾಳಹರುಷದಿಂದಉಚಿತವ ಕೊಟ್ಟರು 1

ಮುತ್ತು ಮಾಣಿಕದೊಸ್ತಮತ್ತೆ ಕುದರಿಯ ಸಾಲು
ಛsÀತ್ರ ಚಾಮರ ನಮಗೆಅರ್ಥಿಲೆ ಕೊಟ್ಟರು 2

ಬರಿಯ ಮಾಣಿಕ ದೊಸ್ತಜರದಪಟ್ಟಾವಳಿವಸ್ತ್ರ
ಹಿರಿಯರಿಗೆ ಮುತ್ತಿನಸರಗಳ ಕೊಟ್ಟರು 3

ಅಚ್ಚ ಮುತ್ತಿನ ವಸ್ತಹೆಚ್ಚಿನ ಜರತಾರಿ ವಸ್ತ್ರ
ಹೆಚ್ಚಿನ ಕುದುರೆ ನಮಗೆಉಚ್ಛವದಿಕೊಟ್ಟರು4

ರಮಿಯರಸನ ಕಥೆತಮ್ಮ ಮನ ಉಬ್ಬಿಕೇಳಿಅಮ್ಮ 
ರತ್ನದ ಕವಚನಮಗೆ ಕೊಟ್ಟರು 5
*******