Showing posts with label ರಂಗನ ನೋಡಿರೊ ಸಿರಿ vijaya vittala ಕನಕಗಿರಿ ನರಸಿಂಹ ಸ್ತೋತ್ರ RANGANA NODIRO SIRI KANAKAGIRI NARASIMHA STOTRA. Show all posts
Showing posts with label ರಂಗನ ನೋಡಿರೊ ಸಿರಿ vijaya vittala ಕನಕಗಿರಿ ನರಸಿಂಹ ಸ್ತೋತ್ರ RANGANA NODIRO SIRI KANAKAGIRI NARASIMHA STOTRA. Show all posts

Wednesday, 16 October 2019

ರಂಗನ ನೋಡಿರೊ ಸಿರಿ ankita vijaya vittala ಕನಕಗಿರಿ ನರಸಿಂಹ ಸ್ತೋತ್ರ RANGANA NODIRO SIRI KANAKAGIRI NARASIMHA STOTRA


 ರಾಗ ಸುರುಟಿ   ಆದಿತಾಳ 
Audio by Vidwan Sumukh Moudgalya

ಶ್ರೀ ವಿಜಯದಾಸರ ಕೃತಿ  ಕನಕಗಿರಿ ನರಸಿಂಹದೇವರ ಸ್ತೋತ್ರ 



ರಂಗನ ನೋಡಿರೊ ಸಿರಿ ನರಸಿಂಗನ ಪಾಡಿರೊ ।
ಮಂಗಳ ಮೂರುತಿ ಡಿಂಗರಿಗರ ಹೃತ್ಸಂಗ ಕರುಣಾಂತರಂಗ ॥ ಪ ॥

ತನುಜನ ಜನಕನು ಕೊಲ್ಲಲು ಮೊರೆಯಿಡೆ ಬಂದ।ಕಂಭದೊಳಿಂದ ।
ಮನುಜಕೇಸರಿ ರೂಪ ಧರಿಸಿದ ನಿಜ ಲೋಕಸ್ವಾಮಿ।ಅಂತರ್ಯಾಮಿ ॥
ದನುಜನ ಉದರ ಬಗೆದು ಕರುಳು ಮಾಲೆಯಿಟ್ಟ।ಕೊರಳೊಳು ಧಿಟ್ಟ ।
ವನಜ ಭವಾದ್ಯರು ಜಯ ಜಯವೆನುತಿರೆ ಮೆರೆದಾ।ಪ್ರಹ್ಲಾದವರದ ॥ 1 ॥

ಮನದಲಿ ಬೇಡಿದ ಭಾಗ್ಯವ ಕೊಡುವನು ಚಲುವಾ।ಭಕುತರಿಗೊಲಿವಾ ।
ಅನುದಿನದಲಿ ಅನುಕಂಪನು ಹರಿ ನಮಗೆಲ್ಲ।ಭಕ್ತವತ್ಸಲ್ಲಾ ॥
ಘನಮಹಿಮನು ಪರಿಪೂರ್ಣ ಗುಣಾಂಬುಧಿ ತೇಜಾ।ರಾಜಾಧಿರಾಜಾ ।
ಜನುಮ ಜನುಮದಲ್ಲಿ ಜನನಾದಿಗಳಿಗೀತ ಮುಖ್ಯಾ।ಕರ್ತನು ಸಖ್ಯಾ ॥ 2 ॥

ಕನಕ ಮುನೇಶ್ವರ ತಪವನು ಮಾಡಲು ಮೆಚ್ಚಿ । ಬಂದನು ಮೆಚ್ಚಿ ।
ಕನಕ ವರುಷವನು ಗರೆವುದು ಅಂದಿನ ದಿನದಿ । ಆನಂದವನಧಿ ॥
ಕನಕ ನೃಕೇಸರಿ ಎನಿಸಿದ ಅಂದಿನಾರಭ್ಯ । ಈತನೆ ಸಭ್ಯ ।
ಅಳನಯನ ರೂಪ ಲಿಂಗಾಕೃತಿಯ ಪೊಳೆವ । ನುತಿಸಲು ಸುಳಿವಾ ॥ 3 ॥

ಗುಣದಲಿ ತಿಳಿವುದು ರುದ್ರಗೆ ಹರಿರೂಪವಿಲ್ಲ । ಇದು ಪುಸಿಯಲ್ಲಾ ।
ವನಜನಾಭಗೆ ನಾನಾ ರೂಪಗಳುಂಟೆಂದು ವೇದಾ । ಪೇಳ್ವದು ಮೋದಾ ॥
ಪ್ರಣತನಾಗದ ಇನಿತಾಗದ ಪಾಪಿಷ್ಟ ಮನುಜಾ । ಅವನೇ ದನುಜಾ ।
ಗಣನೆ ಮಾಡದಿರಿ ಇವರನು ಸುಜನರು ಇಂದೆ । ನಮಗೀತ ತಂದೆ ॥ 4 ॥

ಇವನಂತೆ ಒಪ್ಪುವ ಪೊಂಪಾನಿಧಿಯೊಳು ಧನದಾ।ದಿಕ್ಕಿಲಿ ಗಾಧಾ ।
ಮುನಿಜನ ಸಮ್ಮತ ಶ್ರುತಿ ಉಕ್ತಿಗಳಲಿ ಅಕ್ಕು।ಕೇಳೀ ವಾಕ್ಕು ॥
ಮಣಿದು ನಮಿಸಿ ಒಮ್ಮೆ ಧ್ಯಾನವ ಮಾಡಲು ಭಕುತೀ।ಉಂಟು ವಿರಕುತಿ ।
ಹನುಮಧೀಶ್ವರ ನಮ್ಮ ವಿಜಯವಿಠ್ಠಲ ನರಸಿಂಗಾ।ರಿಪುಗಜ ಸಿಂಗ ॥ 5 ॥
***

pallavi

rangana nODirO siri narasingana pADirO mangaLa mUruti dingarigara hrtsanga karuNAntaranga

caraNam 1

tanujana janakanu kollalu moreyiDe bandA kambhadoLinda manuja kEsari rUpa dharisida nija lOka svAmi antaryAmi
danujana udara bagedu karuLa mAle iTTA koraLOlu dhiTTA vanaja bhavAdyaru jaya jyavenutire meredA prahlAda varadA

caraNam 2

manadal bEDida bhAgyava koDuvanu caluva bhakutaru goliva anudinadali anukampanu hari namagellA bhaktavatsalA
ghana mahimanu paripUrNa guNAmbudhi tEja rAjAdhirAja januma janamdali jananAdigaLi gIta mukhya kartanu sakhya

caraNam 3

kanaka munIshvara tapavanu mADalu mecci bandanu mecci kanaka varuSavanu garevudu andina dinadi Anandavanadhi
kanakanra kEsari enisidA andinArabhya Itane sabhya anaLanayana rUpa lingAkritiyA poLevA nutisalu suLiva

caraNam 4

guNadali tiLivadu rudrage hari rUpavillA idu pusiyallA vanajanAbhage nAnA rUpagaLUnTendu vEdA pELudu nODA
praNatanAgada initAgada pApiSTha manujA avanE danujA gaNane mADadeliri ivaranu sujanaru indE namagIta tande

caraNam 5

inanante oppuva pompAnidhiyoLu dhanadA dikkilagAdhA munijana sammata shruti uktigaLalli aku kELivAku
maNidu namisi omme dhyAnava mADalu bhakuti UNTU virakuTi hanumadIshvara namma vijaya viThala narasingA ripugaja singA
***